ಉತ್ತರ ಪ್ರದೇಶ: ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಆರ್​​ಪಿಎನ್ ಸಿಂಗ್

ದೆಹಲಿ: ಮಾಜಿ ಕೇಂದ್ರ ಸಚಿವ ಆರ್‌ಪಿಎನ್ ಸಿಂಗ್ ಅವರು ಮಂಗಳವಾರ ಕಾಂಗ್ರೆಸ್ ನಾಯಕ ಪಕ್ಷಕ್ಕೆ ರಾಜಿನಾಮೆ ನೀಡಿ  ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಮುಂದಿನ ತಿಂಗಳು ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರಾಗಿ ಸಿಂಗ್ ಅವರನ್ನು ಹೆಸರಿಸಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪೂರ್ವ ಉತ್ತರ ಪ್ರದೇಶದದ ಖುಷಿನಗರದಿಂದ ಬಂದಿರುವ ಆರ್‌ಪಿಎನ್ ಸಿಂಗ್, ರಾಜ್ಯದಲ್ಲಿ ಕಾಂಗ್ರೆಸ್‌ನ ದೊಡ್ಡ ನಾಯಕರಲ್ಲಿ ಒಬ್ಬರಾಗಿದ್ದಾರೆ. ಸೋನಿಯಾ ಗಾಂಧಿ  ಅವರಿಗೆ ಬರೆದಿರುವ ರಾಜೀನಾಮೆ ಪತ್ರವನ್ನು ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದ ಸಿಂಗ್ ಇಂದು ನಾವು ನಮ್ಮ ಮಹಾನ್ ಗಣರಾಜ್ಯದ ರಚನೆಯನ್ನು ಆಚರಿಸುತ್ತಿದ್ದೇವೆ, ನನ್ನ ರಾಜಕೀಯ ಪ್ರಯಾಣದಲ್ಲಿ ನಾನು ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತೇನೆ .ಜೈ ಹಿಂದ್ ಎಂದು ಬರೆದಿದ್ದಾರೆ.

ಸಿಂಗ್ ಮೂರು ಅವಧಿಗೆ ಪದ್ರೌನಾದಿಂದ ಶಾಸಕರಾಗಿದ್ದಾರೆ. ಅವರು 2009 ರಲ್ಲಿ ಖುಷಿ ನಗರದಿಂದ ಸಂಸದರಾಗಿ ಆಯ್ಕೆಯಾದರು ಆದರೆ 2014 ರಲ್ಲಿ ಸೋತರು. ಸ್ವಾಮಿ ಪ್ರಸಾದ್ ಮೌರ್ಯ ಅವರು ಕಳೆದ ಎರಡು ರಾಜ್ಯಗಳ ಚುನಾವಣೆಯಲ್ಲಿ ಪದ್ರೌನಾ ಸ್ಥಾನದಿಂದ ಗೆದ್ದರು, ಮೊದಲು ಮಾಯಾವತಿಯವರ ಬಹುಜನ ಸಮಾಜ ಪಕ್ಷ ಅಭ್ಯರ್ಥಿಯಾಗಿ ಮತ್ತು ನಂತರ ಬಿಜೆಪಿಯ ಅಭ್ಯರ್ಥಿಯಾಗಿ. 2009 ರ ಲೋಕಸಭಾ ಚುನಾವಣೆಯಲ್ಲಿ ಆರ್‌ಪಿಎನ್ ಸಿಂಗ್ ಗೆದ್ದರು, ಸ್ವಾಮಿ ಪ್ರಸಾದ್ ಮೌರ್ಯ ಎರಡನೇ ಸ್ಥಾನ ಪಡೆದರು.