ಯುಎಸ್ ಒಪನ್: ಚೊಚ್ಚಲ ಗ್ರ್ಯಾನ್ ಸ್ಲಾಮ್ ಗೆದ್ದ ಡ್ಯಾನಿಲ್, ಜೊಕೊವಿಚ್ ಕನಸು ಭಗ್ನ

ನ್ಯೂಯಾರ್ಕ್: ಯುಎಸ್ ಓಪನ್ ಅಂತಿಮ ಪಂದ್ಯದಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರ 21ನೇ ಗ್ರ್ಯಾನ್ ಸ್ಲಾಮ್ ಗೆಲುವಿನ ಕನಸ ಭಗ್ನಗೊಂಡಿದೆ. ನ್ಯೂಯಾರ್ಕ್‌ನಲ್ಲಿ ನಡೆದ ಯುಎಸ್ ಓಪನ್ ಫೈನಲ್‌ನಲ್ಲಿ ನೇರ ಸೆಟ್‌ಗಳ ಗೆಲುವಿನೊಂದಿಗೆ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಪುರುಷರ ಸಿಂಗಲ್ಸ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ರಷ್ಯಾದ ಎರಡನೇ ಶ್ರೇಯಾಂಕದ ಆಟಗಾರ ಮೆಡ್ವೆಡೆವ್, ಜೊಕೊವಿಚ್ ವಿರುದ್ಧ 6-4, 6-4, 6-4 ನೇರ ಸೆಟ್ ಗಳ ಅಂತರದಿಂದ ಸೋಲಿಸಿ ಮೊಟ್ಟಮೊದಲ ಗ್ರ್ಯಾನ್ ಸ್ಲಾಮ್ ಗೆದ್ದರು.

ಈ ಮೂಲಕ ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್ ಜೊತೆ ವೃತ್ತಿಜೀವನದಲ್ಲಿ ಗ್ರ್ಯಾಂಡ್ ಸ್ಲಾಮ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು. 2019ರ ಯುಎಸ್ ಏಪನ್ ರನ್ನರ್ ಅಪ್ ಆಗಿದ್ದ ಮೆಡ್ವೆಡೆವ್ ತಮ್ಮ ಮೂರನೇ ಗ್ರ್ಯಾಂಡ್ ಸ್ಲಾಮ್‌ನ ಕೊನೆಯಲ್ಲಿ ಮೊದಲ ಗ್ರ್ಯಾನ್ ಸ್ಲಾಮ್ ಪಡೆದುಕೊಂಡಿದ್ದಾರೆ. ಮೆಡ್ವೆಡೆವ್, ಈ ಸಾಧನೆಯನ್ನು ತನ್ನ ಮೂರನೇ ಸ್ಲಾಮ್ ಫೈನಲ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಜೊಕೊವಿಚ್ ವಿಶ್ವದಾಖಲೆಯ 31ನೇ ಗ್ರ್ಯಾನ್ ಸ್ಲಾಮ್ ಫೈನಲ್ ಪ್ರವೇಶಿಸಿದ್ದರೂ, ಅಂತಿಮ ಪಂದ್ಯದಲ್ಲಿ ಪರಾಭವಗೊಂಡು ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದರು.

× Chat with us