Categories: Uncategorized

ಮದುವೆಯಾದ ಮಾತ್ರಕ್ಕೆ ದುಡಿಯಬಾರದೇಕೆ?

• ಅನಿತಾ ಹೊನ್ನಪ್ಪ

ಗಡಿಯಾರ ಹತ್ತು ಗಂಟೆ ತೋರಿಸುತ್ತಿದೆ. ಭಾಗ್ಯ ಆ ಕಚೇರಿಗೆ ಬಂದಾಗ ಸಮಯ ಎಂಟೂವರೆ. ಆರು ಜನ ಹುಡುಗರ ನಡುವೆ ಅವಳೊಬ್ಬಳೇ ಹುಡುಗಿ. ಇವತ್ತು ಅವರ ಸಂದರ್ಶನವಿದೆ. ಮ್ಯಾನೇಜರ್ ಪೋಸ್ಟ್ ಖಾಲಿಯಿದೆಯೆಂದು ಪತ್ರಿಕೆಯಲ್ಲಿ ನೋಡಿ ಬಂದಿದ್ದರು.

ಆರು ಹುಡುಗರ ಸಂದರ್ಶನ ಮುಗಿಯಿತು. ಭಾಗ್ಯ ಏಳನೆಯವಳಾಗಿ ಕ್ಯಾಬಿನ್ ಹೊಕ್ಕಳು. ಸೂಟು ಬೂಟು ಧರಿಸಿ ಕುಳಿತಿದ್ದ ವ್ಯಕ್ತಿ, ‘ಬನ್ನಿ’ ಎಂದನು.

ತನ್ನ ಕೈಲಿರುವ ಫೈಲ್ ಅವನಿಗೆ ಕೊಟ್ಟಳು ಭಾಗ್ಯ. ಆತ ಫೈಲ್ ತಿರುಗಿಸಿ ನೋಡದೆ ಪ್ರಶ್ನೆಗಳ ಸುರಿಮಳೆ ಸುರಿಸಿದನು. ಅವನು ತನ್ನ ಕಂಪೆನಿಯ ಕುರಿತು ಕನಿಷ್ಠ ಮಾಹಿತಿಯಿಂದ ಹಿಡಿದು ಮ್ಯಾನೇಜರ್ ಹುದ್ದೆಯನ್ನು ಹೇಗೆ ನಿರ್ವಹಣೆ ಮಾಡಲಾಗುತ್ತದೆ ಎಂಬುದನ್ನೂ ಕೇಳಿದ್ದನು. ಈ ಹಿಂದೆ ಕೆಲಸ ಮಾಡಿ ಅನುಭವ ಹೊಂದಿದ್ದ ಭಾಗ್ಯ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದಳು. ‘ನಿಮಗೆ ತುಂಬಾ ನಾಲೆಡ್ ಇದೆ. ಈ ಹಿಂದೆ ಕೆಲಸ ಮಾಡಿದ ಅನುಭವ ಇದೆಯಾ?’ ಎಂದನು.
‘ಹೌದು ಸರ್ ಐದು ವರ್ಷಗಳ ಸರ್ವಿಸ್ ಮಾಡಿದ ಅನುಭವವಿದೆ’ ಎಂದಳು.

‘ಮತ್ತೆ ಕೆಲಸ ಬಿಡಲು ಕಾರಣ?’ ಪ್ರಶ್ನಿಸಿದ. ‘ಗರ್ಭಿಣಿಯಾಗಿದ್ದೆ, ಮೆಟರ್ನಿಟಿ ಲೀವ್ ಮುಗಿಸಿ. ವಾಪಸ್ ಹೋಗಬಹುದಿತ್ತು. ನಾನೇ ಸಣ್ಣ ಬ್ರೇಕ್ ತೆಗೆದುಕೊಂಡೆ’ ಎಂದಳು.
‘ವಾಟ್! ನಿಮಗೆ ಮದ್ದೆಯಾಗಿದ್ಯಾ?’ ಎದುರಿರುವ ಫೈಲ್ ಪುಟಗಳನ್ನು ಪಟ ಪಟನೆ ತಿರುಗಿಸಿದನು.
‘ಹೌದು ಸರ್’ ಎಂದಳು.
‘ಕ್ಷಮಿಸಿ ಮೇಡಂ, ನಾವು ಮದುವೆಯಾಗಿರುವ ಹೆಣ್ಣು ಮಕ್ಕಳನ್ನು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಒಂದಿಷ್ಟು ದಿನ ಕೆಲಸ ಮಾಡಿ, ಆಮೇಲೆ ತಾಯ್ತನ ರಜೆ ಕೇಳುತ್ತಾರೆ, ಅದರ ಜೊತೆಗೆ ಆರು ತಿಂಗಳ ಸಂಬಳವನ್ನು ಕೂಡ ಕಂಪೆನಿ ಕೊಡಬೇಕು. ಮತ್ತೆ ಮಗುವಿಗೆ ಹುಷಾರಿಲ್ಲ, ಇವತ್ತು ನೋಡಿಕೊಳ್ಳುವವರು ಯಾರಿಲ್ಲ ಅಂತ ರಜೆ ತೆಗೆದುಕೊಳ್ಳುತ್ತಲೇ ಇರುತ್ತಾರೆ. ಇದರಿಂದ ಕಂಪೆನಿ ಕೆಲಸಕ್ಕೆ ತುಂಬಾ ತೊಂದರೆಯಾಗುತ್ತೆ ಅವಳ ಫೈಲ್ ವಾಪಸ್ ಕೊಟ್ಟನು.

‘ನನಗೆ ಮದುವೆಯಾಗಿದೆ ಮಗುವಿದೆ ಎಂದು ನಾವು ಕೆಲಸ ಮಾಡುವುದನ್ನು ಬಿಟ್ಟು ಬಿಡಬೇಕಾ? ಅಥವಾ ನಮಗೆ ಎರಡನ್ನೂ ನಿಭಾಯಿಸುವ ಶಕ್ತಿ ಇಲ್ಲವೆಂದು ನೀವೇ ತೀರ್ಮಾನಿಸಿ ಬಿಡ್ತೀರಾ? ಎಷ್ಟೋ ಮಹಿಳೆಯರು ತಮ್ಮ ಮಕ್ಕಳನ್ನು ಬಿಟ್ಟು ಬಂದು ಕೆಲಸ ಮಾಡುತ್ತಿದ್ದಾರೆ. ಅವರು ಮನೆ ಮತ್ತು ಕೆಲಸ ಎರಡನ್ನೂ ಅಚ್ಚುಕಟ್ಟಾಗಿ ಸಂಭಾಳಿಸಿಕೊಂಡು ಹೋಗುತ್ತಿದ್ದಾರೆ. ನಮ್ಮಿಂದ ಕೆಲಸವಾಗಲ್ಲ ಎಂದು ಹೇಳುತ್ತಿರುವ ನೀವು, ಮನೆಗೆ ಹೋದಮೇಲೆ ನಿಮ್ಮ ಹೆಂಡತಿಗೆ ಎಷ್ಟು ಸಹಾಯ ಮಾಡ್ತೀರಿ? ಹೋಗುವಾಗ ರಾತ್ರಿ ತಡವಾಗಿರುತ್ತದೆ. ಜೊತೆಗೆ ಆಫೀಸ್ ಚಿಂತೆಗಳ ಮೂಟೆ ಹೊತ್ತು ಹೋಗಿರುತ್ತೀರಿ. ಬೇರೆ ಕೆಲಸ ಮಾಡಲು ಸಾಧ್ಯವಿಲ್ಲ ಅಲ್ವಾ? ಆದರೆ ಹೆಣ್ಣುಮಕ್ಕಳು, ಮನೆಗೆ ಹೋಗಿ ಮಗುವಿನ ಪಾಲನೆ ಜೊತೆಗೆ ಮನೆ ಕೆಲಸ ಕೂಡ ಮಾಡುತ್ತಾರೆ. ಕೆಲಸ ಮುಗಿಸಿ ಆರಾಮಾಗಿ ಮನೆ ಸೇರುವ ಹೆಣ್ಣುಮಕ್ಕಳು ತೀರಾ ಕಡಿಮೆ’ ಎಂದು ಗಂಭೀರವಾಗಿ ನುಡಿದು ಫೈಲ್ ಎತ್ತಿಕೊಂಡಳು.

‘ಮಿಸ್ ಭಾಗ್ಯ?’ ಫೈಲ್‌ ಪಡೆಯಲು ಕೈ ಚಾಚಿದ ಆ ವ್ಯಕ್ತಿ. ‘ಕ್ಷಮಿಸಿ ಸರ್, ನಿಮ್ಮ ಕಂಪೆನಿಗೆ ನಮ್ಮ ಸೇವೆಯ ಅಗತ್ಯವಿಲ್ಲ ಅನ್ನಿಸುತ್ತೆ. ನನಗಿನ್ನೂ ಎರಡು ಆಫರ್‌ಗಳು ಬಂದಿದೆ. ನಾನಲ್ಲಿಗೆ ಹೋಗಬೇಕು. ಬಹುಶಃ ಅವರು ನನ್ನಲ್ಲಿರುವ ಪ್ರತಿಭೆ ನೋಡಬಹುದು’ ಎಂದು ಹೊರ ನಡೆದಳು.

ಮಾಡುವ ಕೆಲಸಗಳ ಹಂಚಿಕೆ ಸಮಾನವಾಗಿರುವಾಗ ಏಕೆ ಈ ತಾರತಮ್ಯ? ಇದು ಭಾಗ್ಯಳ ಪ್ರಶ್ನೆ. ಗೃಹಿಣಿಯಾಗುವುದು ಸುಲಭವಲ್ಲ, ಅದರಲ್ಲೂ ಆಕೆ ಕೆಲಸ ಹಾಗೂ ಗೃಹಿಣಿ ಹುದ್ದೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬಲ್ಲಳು. ಹೀಗಿರುವಾಗ ಭಾಗ್ಯಳ ನಡೆ ಖಂಡಿತ ಸರಿಯಾಗಿದೆ. ಪ್ರತಿಭೆಗೆ ಬೆಲೆ ಸಿಗಬೇಕೇ ಹೊರತು,ಗಂಡು -ಹೆಣ್ಣು ಎನ್ನುವ ತಾರತಮ್ಯಕ್ಕೆ ಅಲ್ಲ.
anitahonnappa@gmail.com

andolana

Recent Posts

2 ಗುಂಪುಗಳ ಮಧ್ಯೆ ಮಾರಾಮಾರಿ: ಕಾಂಗ್ರೆಸ್‌ ಕಾರ್ಯಕರ್ತನ ಹತ್ಯೆ

ಚಿಕ್ಕಮಗಳೂರು: ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಕಾಂಗ್ರೆಸ್‌ ಕಾರ್ಯಕರ್ತ ಮೃತಪಟ್ಟ ಘಟನೆ ಕಡೂರು ತಾಲ್ಲೂಕಿನ ಸಖರಾಪಟ್ಟಣದ ಸಮೀಪದ ಕಲ್ಮುರುಡೇಶ್ವರ…

1 min ago

ಬಿಜೆಪಿ ಜೊತೆ ಸೇರಿ ಕುಮಾರಸ್ವಾಮಿ ಮನುವಾದಿ ಆಗಿದ್ದಾರೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿ ಜೊತೆ ಸೇರಿಕೊಂಡ ಮೇಲೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೂಡ ಮನುವಾದಿ ಆಗಿಬಿಟ್ಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.…

10 mins ago

ಅಂಬೇಡ್ಕರ್ ದೇಶ ಕಂಡ ಅಪರೂಪದ ನಾಯಕ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಅಂಬೇಡ್ಕರ್ ಅವರೊಬ್ಬ ಮಹಾನ್ ವ್ಯಕ್ತಿ ಹಾಗೂ ದೇಶ ಕಂಡ ಒಬ್ಬ ಅಪರೂಪದ ನಾಯಕ. ದಲಿತರಿಗೆ ಮಾತ್ರವಲ್ಲದೆ ಎಲ್ಲಾ ಶೋಷಿತರಿಗೆ…

53 mins ago

ದರ್ಶನ್‌ಗೆ ಫಿಸಿಯೊಥೆರಪಿ ಸ್ಟಾಪ್‌ ಮಾಡಿದ ವೈದ್ಯರು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ದರ್ಶನ್‌ಗೆ ಬೆನ್ನುನೋವು ಮಾಯವಾಯ್ತಾ ಎಂಬ ಕುತೂಹಲ ಮನೆ ಮಾಡಿದೆ. ದರ್ಶನ್‌…

1 hour ago

ಶಾರುಖ್‌ ಖಾನ್‌ ಪುತ್ರನಿಂದ ದುರ್ವತನೆ ಪ್ರಕರಣ: ಡಿಜಿ & ಡಿಜಿಪಿಗೆ ದೂರು ಸಲ್ಲಿಕೆ

ಬೆಂಗಳೂರು: ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಬೆಂಗಳೂರಿನ ಪಬ್‌ನಲ್ಲಿ ಮಿಡಲ್‌ ಫಿಂಗಲ್‌ ತೋರಿಸಿ ದುರ್ವತನೆ ಮೆರೆದಿದ್ದು,…

2 hours ago

1000ಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಹಾರಾಟ ರದ್ದು: ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಪ್ರಯಾಣಿಕರು

ನವದೆಹಲಿ: ಶನಿವಾರ ಐದನೇ ದಿನವೂ ಇಂಡಿಗೋ ವಿಮಾನ ಹಾರಾಟ ಅಡಚಣೆಗಳು ಮುಂದುವರೆದಿದ್ದು, ದೇಶಾದ್ಯಂತ ಹಲವಾರು ವಿಮಾನಗಳು ರದ್ದಾಗಿವೆ. ಕಳೆದ ನಾಲ್ಕು…

2 hours ago