ದೇಶದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಹಲವು ಸಮುದಾಯಗಳಲ್ಲಿ ಬಂಜರವೂ ಒಂದು. ಬಂಜರ ಪದ ಜತಿವಾಚಕ ಶಬ್ದವಲ್ಲ, ಅದು ವೃತ್ತಿವಾಚಕವಾಗಿದೆ. ದಕ್ಷಿಣ ಭಾರತದಲ್ಲಿ ಲಮಾಣಿ, ಲಂಬಾಣಿ ಎಂದು ಗುರುತಿಸಿಕೊಳ್ಳುವ ಈ ಸಮುದಾಯ ಒಂದು ಬುಡಕಟ್ಟು ಜನಾಂಗವಾಗಿದೆ. ಹಲವು ವಿಭಿನ್ನ ನೆಲೆಗಳಿಂದ ಇಂದಿಗೂ ಭಾರತೀಯ ಸಮುದಾಯಗಳಲ್ಲಿ ಬಂಜರರು ವಿಶಿಷ್ಟವಾಗಿ ಕಾಣಿಸುವುದಲ್ಲದೆ, ಹಲವು ಬುಡಕಟ್ಟು ಗುಂಪುಗಳಲ್ಲಿ ಅಜತವಾಗಿ ಉಳಿದಿದ್ದಾರೆ. ಹೀಗೆ ವಿಸ್ಮೃತಿಗೆ ಒಳಗಾದ ಸಮುದಾಯದ ಇತಿಹಾಸದ ಅಸ್ಮಿತೆಗಳನ್ನು ಗುರುತಿಸಬೇಕು ಎಂಬ ಆಶಯದಿಂದ ಲೇಖಕ ಹಾಗೂ ಬಂಜಾರ ಸಂಸ್ಕತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷರಾದ ಡಾ. ಎ. ಆರ್. ಗೋವಿಂದಸ್ವಾಮಿ ಅವರು ರಾಜ್ಯ ಮಟ್ಟದ ದಿನಪತ್ರಿಕೆಯೊಂದಕ್ಕೆ ಈ ಲೇಖನ ಬರೆದಿದ್ದು, ಅದರ ಯಥಾವತ್ತು ರೂಪವನ್ನು ಬಂಜರ ಭಾಷೆಯಲ್ಲಿಯೂ ಬರೆದಿದ್ದಾರೆ. ಉಭಯ ಲೇಖನಗಳ ಆಯ್ದ ಭಾಗವನ್ನು ಇಲ್ಲಿ ಪ್ರಕಟಿಸಲಾಗಿದೆ.
ಬಂಜಾರ ಸಮಜೇನ್ ಶೀಕ್ ವಾಡಿರ್ ವಾಟ್ ದಕಾಲೋ ಜಕೋ ಕುಲಗುರು, ವೇರಾಳು ಸೇವಾಲಾಲ್
ಭಾರತೇರ ಇತಿಹಾಸರಿ ಹಾಳಿವೂನ -ರನ ದೆಕೆತೊ ಘಣ್ ಮಹಾ ಪುರುಷನೊ, ಸಾಧುಸಂತರನೊ, ಲಕಣೀಯಾವೂನೊ, ರಾಜರನೊ, ಗುರುನೊ, ವೇರಾಳುವೊ, ಸಮಾಜ ಸಧಾರೆಜಕೊ, ತ್ಯಾಗಿನೊ ಸೇವಾಮ ಒನೂರ ಒಜ್ ಅರ್ಪಣ್ ವೆಮೆಲೆಜಕೊ ಮಳಛ್.
ಬಂಜರ (ಲಂಬಾಣಿ) ರ ಸಾಂಸ್ಕೃತಿ, ಸಾಮಾಜಿಕ, ಅನ್ ಚರಿತ್ರಾಮ ಜಗೆರ ಪಹಿಲಾ ಮೂಲಾರ ಜಡಿ ಬೂಟಿ ದೇವಾಳೊ, ಸಾರೀ ಸಮಾಜೇನ ಸಿಕವಾಡಿ ದೇವಾಳೊ ಸಂತ ಸೇವಾಲಾಲ್‌ನೊ ಅಜೀ ದುಸರ್ ಸೇವಾ ಕರೆವಾಳೊ ಸಮಾಜನ ಸದಾರೆವಾಳೊ ವೆತ್ತೊ.
ಸೇವಾಲಾಲ್ ಕ್ರಿ. ಶ. ೧೭೩೯ -ಬ್ರವರಿ ೧೫ ತಾರೀಖೇರ ಸೋಮ್ಮಾರೇರ ಪರಬಾತಿ೯ ಗಂಟಾನ ಹುಯೋಛಕೆನ ಕಛ್ ಕೆಮೆಲೆಚ್. ಭಾಯಾರ ಡೋಕಡೋಕರಾ ಪೇನಾತಿ ಲದಣಿ ಲಾದನ ವ್ಯಾಪಾರ ಕರತೆತೆ ಜೇರಸಾರು ದೇಶಾರ ಹರಏಕ್ ಮೂಲಾಮ ಹಿಂಡಮೇಲೇಚ. ಜೇರಸಾರು ಏ ಕರ್ನಾಟಕೇರ ಅಬೆರ ದಾವಣಗೆರೆ ಜಿಲ್ಲಾರ ಹೊನ್ನಾಳಿ ತಾಲೂಕ್ ಬೆಳಗುತ್ತಿರ ಸೂರಗೊಂಡನಕೊಪ್ಪ ಭಾಯಾಗಡೇಮ ಹೂಯೊಚ ಕನ್‌ಕಛ. (ಹೈಂಯಿ ದುಸರ ದುಸರ ಜಗಾಪರ ಹುಯೊಜಕೊ ಮರೊಜಕೇರ ವಾತೇಛ, ಏರಬಾರೇಮ ಅಜೀ ಜದಾ ಸಂಶೋಧನ ಕರೇರ ಅವಶ್ಯ ಛ).
ಸೇವಾಲಾಲ್ ಕೆಗೋಜಕೊ ಛನಿಕ್ ಕಡಿವೊ ವಾತೆ ಕೆಣಾವಟ್ ಹೈಂಛ.
* ಸೀಕ್ ಸೀಕೊ ಸೀಕನ್ ಸೀಕಾವೊ ಸೀಕೋಜಕೊ ಸೇನಿಬಲಾನ ಆಂಗ್ ಚಾಲಚ್
* ಮ ಕಜೊ ಅಹಂಕಾರ ನರೇಣು, ಅಜೇಕೇರ ಜನ್‌ಕಾಡನ್ ಲಾಭಾನಲೇನು, ಆದ್ಮಿ ಆದ್ಮಿಮ ಭೇಧಮತ್
* ಸೇ ಧರಮಾನ ಮಾನೊ, ತಮಾರ ವಿಶ್ವ ಮಾನವ ಧರ್ಮ ಕೆರಾಮೇಲೋಜಕೊ ಪರಿಸರಾನ ಪೂಜ ಕರೆವಾಳೊ ಧರ್ಮಾನ ಪಾಲನ್ ಕರೊ, ಪರಿಸರ ಆಪಣೊ ದೇವ.
* ಜಗಪರೊ ಕೋಶ ಪಡೊ ಗೇನ್ ಗೋಳಾಕರೊ, ರಾಬನ ಖಾವೊ, ಸ್ವಾಭಿಮಾನೇತಿ ಜೀವೊ.
* ಜಾಡಿ ಬೂಟಿ, ಜಂಗಲ್, ಜನ್ವಾರವೂರ ರಕ್ಷಣ್ ಕರೆರೊ ಸೇರೊ ಕಾಮ್ ವೇಣು
* ಪರಿಸರಾಮ ಭಳನ ಜತಾನ ರೇನ ಆಚೇತಿ ಜೀವನ್ ಕರೇನ್ ಕೋಸಿಸ್ ಸೇಜ್ ಕರನು.
* ಮೂಢನಂಬಿಕೆ ಛೋಡನ ಗೇನ್ ಗಳಸತೆ ರೇನು.
* ಆಪಣ್ ಆಪಣ್ ಬಡೇರ್ ಆಛ್ ಸಂಸ್ಕೃತಿನ ಬಡಾನ ಭಳನ ರೇಣು.
ಅಸ್ ಸೋಪಚಾಸ್ ಆಚ್ ವಿಚಾರ್ ಚಿಂತನಾತಿ ಸಮಸಮಾಜೇರ ಆಂಗೇರಿ ವಾಟೆದ ಕಾಳನ ವಾತೆ ಬೋಲಗೇಚ ಸೇವಾಭಾಯಾ. ಕುಂವಾರೊ ರೇನ್ ಸೇವಾಲಾಲ್ ಬಂಜರ ಸಮಾಜೇನ ಸದಾರೊಜಕೊ ಅತರಾಜ್ ಕಾವ್ ದುಸರ್ ಸೇನಜ್ ಸದಾರೋಜೊ ಉದಾಹರಣ ಛ. ಸೇವಾಲಾಲೇನ ಜಾಡೀಬುಟಿ ಬಾಟಾ ದೇವ, ಹಣ್ಣಹಂಪಲಾಜ್ ಆಟೋ, ಮಂಗಾಳೋಜ್ ಖಾಣೊ, ಗಟಲಾರೀ ಗವೀಜ್ ಘರಭಾರ ಅರಮನೆ ವೇತ್ತೋ. ಸೇವಾಭಾಯಾರ ಸಾಂಕಿ – ಹಜರಬಾರಸೊ, ಲಾವಣೀ ಗೀದೆ, ಜನಪದಾರ ಸಾಂಕೀಮ, ಹರಿಕಥೆಮ ಛಜಕೊ ಆಜಭೀ ದೇಕಿಚಾಯ್. (ಬಂಜಾರ ಭಾಷೆ)
ಸಮುದಾಯಕ್ಕೆ ಶಿಕ್ಷಣದ ಹಾದಿ ತೋರಿದ ಬಂಜಾರ ಕುಲಗುರು ಸೇವಾಲಾಲ್
ಭಾರತದ ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಅನೇಕ ಮಹಾಪುರುಷರು, ಸಂತರು, ಕವಿಗಳು, ರಾಜರು, ಗುರುಗಳು, ವೀರರು, ಸುಧಾರಕರು, ತ್ಯಾಗಿಗಳು ಸೇವೆಗೆ ತಮ್ಮನ್ನು ಅರ್ಪಿಸಿಕೊಂಡವರು ಸಿಗುತ್ತಾರೆ. ಅಂತಹ ಸಮಾಜ ಸುಧಾರಕರಲ್ಲೊಬ್ಬರು ಬಂಜರ ಗುರು ಸೇವಾಲಾಲರು. ಬಂಜರ (ಲಂಬಾಣಿ)ರ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಚಾರಿತ್ರಿಕ ನೆಲ ಮೂಲದ ನಾಟಿ ವೈದ್ಯ, ಸಮುದಾಯದ ಮಾರ್ಗದರ್ಶಕರಾಗಿದ್ದ ಸಂತ ಸೇವಾಲಾಲರು ಇತರರ ಸೇವೆ ಮಾಡುವ ಸಮಾಜ ಸುಧಾರಕರಾಗಿದ್ದರು. ಸೇವಾಲಾಲರ ಪೂರ್ವಜರು ಮೂಲತಃ ಅಲೆಮಾರಿ ವ್ಯಾಪಾರಿಗಳಾಗಿದ್ದುದರಿಂದ ದೇಶದ ಪ್ರತಿಯೊಂದು ಪ್ರಾಂತಗಳಲ್ಲೂ ಸಂಚರಿಸುತ್ತಿದ್ದವರು. ಹೀಗಾಗಿ ಇವರು ಕರ್ನಾಟಕದ ಇಂದಿನ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಬೆಳಗುತ್ತಿರ ಸೂರಗೊಂಡನ ಕೊಪ್ಪದಲ್ಲಿ ಕ್ರಿ. ಶ. ೧೭೩೯ ಫೆಬ್ರವರಿ ೧೫ರಂದು ಜನಿಸಿದರು ಎನ್ನಲಾಗುತ್ತದೆ. ಮನುಕುಲಕ್ಕೆ ಸೇವಾಲಾಲರು ಬೋಧಿಸಿದ ಕೆಲವು ಹಿತ ವಚನಗಳು- ಉಪದೇಶಗಳು ಹೀಗಿವೆ:
* ಶಿಕ್ಷಣ ಪಡೆಯಿರಿ, ಕಲಿತು ಕಲಿಸಿರಿ, ಕಲಿತವನು ಸರ್ವರನ್ನು ಒಗ್ಗೂಡಿಸಿ ಮುಂದೆ ಸಾಗುತ್ತಾನೆ ಎಂದ ಈ ಮಾತು ಇಂದಿಗೂ ಹೆಚ್ಚು ಪ್ರಸ್ತುತವಾಗಿದೆ. ಇದರ ಪಾಲನೆ ಆಗಬೇಕು.
* ನಾನೇ ಎಂಬ ಅಹಂ ಬೇಡ, ಇನ್ನೊಬ್ಬರ ಜೀವ ತೆಗೆದು ಲಾಭ ಪಡೆಯಬೇಡ, ಮನುಷ್ಯ ಮನುಷ್ಯರಲ್ಲಿ ವ್ಯತ್ಯಾಸ ಬೇಡ.
* ಎಲ್ಲಾ ಧರ್ಮಗಳನ್ನು ಆಚರಿಸಿ, ತಮ್ಮ ವಿಶ್ವ ಮಾನವ ಧರ್ಮ ಎನಿಸಿದ ಪರಿಸರ ಧರ್ಮ ಪಾಲಿಸಿ. ಕಲ್ಲೇ (ಪರಿಸರ) ನಮಗೆ ದೇವರು.
* ದೇಶಸುತ್ತಿ, ಕೋಶ ಓದಿ ಜನ ಸಂಪಾದಿಸಿರಿ. ಶ್ರಮ ಜೀವಿಗಾಗಿ, ದುಶ್ಚಟ ಬಿಡಿ, ಅಭಿಮಾನವಂತರಾಗಿ.
* ಅರಣ್ಯ ಮತ್ತು ವನ್ಯಜೀಜಿಗಳನ್ನು ಸಂರಕ್ಷಿಸು ವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಲಿ.
* ಪರಿಸರದೊಂದಿಗೆ ಹೊಂದಿಕೊಂಡು ನಿಸರ್ಗಕ್ಕೆ ಪೂರಕ ಜೀವನವನ್ನು ನಡೆಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು.
* ಮೂಢನಂಬಿಕೆಗಳನ್ನು ತೊರೆದು ಜನ ಸಂಪಾದನೆ ಮಾಡುತ್ತಾ ಬಾಳಬೇಕು.
* ನಾವು ನಮ್ಮ ಪ್ರಗತಿಗೆ ಉತ್ತಮ ಸಂಸ್ಕೃತಿ ಅಳವಡಿಸಿಕೊಳ್ಳಬೇಕು.
ಇಂತಹ ನೂರಾರು ಉದಾತ್ತ ಚಿಂತನೆಗಳ ಮೂಲಕ ಸಮ ಸಮಾಜದ ಸಾಕಾರಕ್ಕೆ ಮುನ್ನುಡಿಯನ್ನು ಬರೆದಿದ್ದವರು ಸೇವಾಲಾಲರು. ಅವಿವಾಹಿತರಾಗಿದ್ದ ಸೇವಾಲಾಲರು ಬಂಜರರಿಗೆ ಮಾತ್ರ ಸುಧಾರಕರಾಗಿರಲಿಲ್ಲ ಇತರರಿಗೂ ಸಹಾಯ ಮಾಡಿದ ಉದಾಹರಣೆಗಳು ಸಾಕಷ್ಟಿವೆ ಸೇವಾಲಾಲರಿಗೆ ಕಾಡೇ ದೇಗುಲ, ಕಾಡಿನ ಗೆಣಸೇ ಹಿಟ್ಟು, ಕಾಡಿನ ಜೇನು ಆಹಾರ, ಕಾಡಿನ ಕಲ್ಲೇ ದೇವರು, ಕಾಡಿನ ಗುಹೆಗಳೇ ವಾಸದ ಅರಮನೆಯಾಗಿತ್ತು. ಇವರ ಕಥೆ-ಸಾವಿರಾರು ಲಾವಣಿಗಳಲ್ಲಿ, ಜನಪದ ಕಥಾನಕಗಳಲ್ಲಿ, ಹಾಡುಗಳಲ್ಲಿ, ಹರಿಕಥೆಗಳಲ್ಲಿ ಇರುವುದನ್ನು ಇಂದಿಗೂ ಕಾಣಬಹುದಾಗಿದೆ. (ಕನ್ನಡ ಭಾಷೆ)
ಡಿ.೧೨ರಂದು ಹೈಕೋರ್ಟ್ ನ್ಯಾಯಮೂರ್ತಿಗಳಾದ, ಕೃಷ್ಣ ಎಸ್. ದೀಕ್ಷಿತ್ ಮತ್ತು ಸಿ.ಎಂ.ಜೋಶಿ ಅವರ ವಿಭಾಗೀಯ ಪೀಠವು ತುಮಕೂರಿನ ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯ…
ಕೃಷ್ಣ ಮೃಗ ಬೇಟೆಯಾಡಿದ ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್‌ನನ್ನು ಪೊಲೀಸ್ ವಶಕ್ಕೆ ಪಡೆಯುವಂತೆ ಮುಂಬೈ ನ್ಯಾಯಾಲಯ ಆದೇಶ ನೀಡಿತ್ತು. ಆದರೆ…
ನಾ.ದಿವಾಕರ ತಂತ್ರಜ್ಞಾನದ ಆವಿಷ್ಕಾರಗಳಿಗೆ ಸಮಾನಾಂತರವಾಗಿ ಬೆಳೆಯುತ್ತಿರುವ ಡಿಜಿಟಲ್ ವಂಚಕ ಜಾಲಗಳು ಕೋವಿಡ್ ೧೯ ವಿಶ್ವದಾದ್ಯಂತ ಜನರ ಬದುಕನ್ನು ಮೂರಾಬಟ್ಟೆ ಮಾಡಿದ…
ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವರು ಸಂವಿಧಾನ ಕುರಿತ ಚರ್ಚೆಯನ್ನು ಪ್ರಧಾನಿಯೇ ರಾಜಕೀಯಗೊಳಿಸುವ ಪ್ರಯತ್ನ ಮಾಡಿದ್ದು ಸರಿಯಲ್ಲ ದೇಶದ ಸಂವಿಧಾನ ೭೫…
ಎಂ.ಬಿ.ರಂಗಸ್ವಾಮಿ ಮೂಗೂರು: ೩ ವರ್ಷಗಳಿಂದ ಸ್ಥಗಿತಗೊಂಡಿರುವ ತೆಪ್ಪೋತ್ಸವ ಮೂಗೂರು: ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯದಲ್ಲಿ ಕೋಟ್ಯಂತರ ರೂ.…
ನೇಮಕಾತಿ ಬ್ಯಾಂಕ್: ಭಾರತೀಯ ಸ್ಟೇಟ್ ಬ್ಯಾಂಕ್ ಹುದ್ದೆ ಹೆಸರು: ಕ್ಲರಿಕಲ್ ಕೇಡರ್ ಜೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್ ಮತ್ತು ಸೇಲ್ಸ್)…