Categories: Uncategorized

ಮದ್ಯ ನೀಡದಿದ್ದರೆ ವಿಮಾನ ಸ್ಪೋಟಿಸುತ್ತೇನೆ: ರಷ್ಯಾ ಹಾಕಿ ಆಟಗಾರನ ಕಿರಿಕ್

ನವದೆಹಲಿ : ಮದ್ಯ ಸೇವಿಸಲು ಅವಕಾಶ ನೀಡದಿದ್ದರೆ ವಿಮಾನ ಸ್ಪೋಟಿಸುವುದಾಗಿ ರಷ್ಯಾ ಹಾಕಿ ಆಟಗಾರ ಬೆದರಿಕೆ ಹಾಕಿದ್ದಾನೆ ಎಂದು ನ್ಯೂಸ್ ವೀಕ್ ವರದಿ ಮಾಡಿದೆ. ಯೆಕಟೆರಿನ್‍ಬರ್ಗ್‍ನಲ್ಲಿರುವ ರಷ್ಯಾದ ಹಾಕಿ ಲೀಗ್ ತಂಡದ ಮೊನೆಟ್ಕಾದಿಂದ ಆಂಡ್ರೇ ಸಿಡಿಯಾಕಿನ್ ಅವರು ವಿಮಾನದಲ್ಲಿ ವೋಡ್ಕಾಗೆ ಬೇಡಿಕೆಯಿಟ್ಟರು, ಆದಾಗ್ಯೂ, ಸಿಬ್ಬಂದಿ ಅವರಿಗೆ ಆದ್ಯತೆಯ ಪಾನೀಯವನ್ನು ನೀಡಲು ನಿರಾಕರಿಸಿದ ನಂತರ ಅವರು ಈ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಆತ ಮದ್ಯಕ್ಕಾಗಿ ಬೇಡಿಕೆಯನ್ನು ಮುಂದುವರೆಸಿದರು ಕ್ರ್ಯೂ ಸಿಬ್ಬಂದಿ ಮದ್ಯ ನೀಡಲು ನಿರಾರಕರಿಸಿದಾಗ ನನ್ನ ಬಳಿ ಸ್ಪೋಟಕ ಸಾಧನವಿದೆ ಮದ್ಯ ನೀಡದಿದ್ದರೆ ವಿಮಾನ ಉಡಾಯಿಸುವುದಾಗಿ ಬೆದರಿಕೆ ಹಾಕಿದ ಎನ್ನಲಾಗಿದೆ. ತಕ್ಷಣ ಸಿಬ್ಬಂದಿಗಳು ವಿಮಾನದ ಉಳಿದ ಭಾಗಗಳಲ್ಲಿ ಬಾಂಬ್ ಅಥವಾ ಶಸ್ತ್ರಾಸ್ತ್ರಗಳನ್ನು ಹುಡುಕಲು ಮುಂದಾದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ವರದಿಯಾಗಿದೆ.

 

ಇದಲ್ಲದೆ, ಮಾಸ್ಕೋಗೆ ಆಗಮಿಸಿದ ನಂತರ ಶೆರೆಮೆಟಿವೊ ವಿಮಾನ ನಿಲ್ದಾಣದಿಂದ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಯಿಂದ ವಿಮಾನವನ್ನು ಪರೀಕ್ಷಿಸಲಾಯಿತು ಆದರೂ ಸಿಡಿಯಾಕಿನ್ ಅವರನ್ನು ಬಂಧಿಸಲಾಗಿಲ್ಲ ಮತ್ತು ಅವರು ಪ್ರಯಾಣ ಮುಂದುವರೆಸಲು ಅವಕಾಶ ನಿರಾಕರಿಸಲಾಯಿತು ಎಂದು ತಿಳಿದುಬಂದಿದೆ.

andolanait

Recent Posts

ಮಕ್ಕಳನ್ನು ಪ್ರಚೋದಿಸಬೇಡಿ, ಸರಿಯಾದ ದಾರಿ ತೋರಿಸಿ: ಪ್ರಧಾನಿ ಮೋದಿ ಮಹತ್ವದ ಸಂದೇಶ

ನವದೆಹಲಿ: ನೀಟ್‌-ಯುಜಿ 2026 ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕುರಿತು ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ ಪ್ರಧಾನಿ ನರೇಂದ್ರ ಮೋದಿ…

8 hours ago

ಪ್ರಧಾನಿ ನಿವಾಸದ ಎದುರು ರಾಹುಲ್‌, ಪ್ರಿಯಾಂಕಾ ಪ್ರತಿಭಟನೆ

ನವದೆಹಲಿ: ದೆಹಲಿಯಲ್ಲಿ ಸಿಜೆಪಿ ಬೆಂಬಲಿಗರ ಮೇಲಿನ ಪೊಲೀಸರ ಕ್ರಮ ಖಂಡಿಸಿ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಂದು ಪ್ರಧಾನಿ…

9 hours ago

ಖಾಸಗಿ ಆಸ್ಪತ್ರೆಗೆ ಸೋನಮ್‌ ವಾಂಗ್ಚುಕ್‌ ಸ್ಥಳಾಂತರಕ್ಕೆ ದೆಹಲಿ ಹೈಕೋರ್ಟ್‌ ಸೂಚನೆ

ನವದೆಹಲಿ: ಪರೀಕ್ಷಾ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಜೂನ್.‌28ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್‌ ವಾಂಗ್ಚುಕ್‌ ಅವರನ್ನು ಇಲ್ಲಿನ ಸಫ್ದರ್‌ಜಂಗ್‌…

9 hours ago

ಹಾರಂಗಿ ಜಲಾಶಯ ಭರ್ತಿಗೆ 8 ಅಡಿ ಬಾಕಿ: ಅನ್ನದಾತರ ಮೊಗದಲ್ಲಿ ಮಂದಹಾಸ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಹಾರಂಗಿ ಜಲಾಶಯಕ್ಕೆ 3 ಸಾವಿರಕ್ಕೂ…

10 hours ago

ಹುಣಸೂರು: ಇಬ್ಬರು ಮಕ್ಕಳು, ಹೆಂಡತಿಯನ್ನು ಕೊಂದು ಪತಿ ಆತ್ಮಹತ್ಯೆ

ಮೈಸೂರು: ಇಬ್ಬರು ಮಕ್ಕಳು ಹಾಗೂ ಹೆಂಡತಿಯನ್ನು ಕೊಂದು ಬಳಿಕ ಪತಿಯೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ.…

10 hours ago

ಇಂದು ಚಲೋ ಸಂಸದ್ ಮುಂದುವರಿಯಲಿದೆ: ಅಭಿಜಿತ್‌ ದೀಪ್ಕೆ ಘೋಷಣೆ

ನವದೆಹಲಿ: ಇಂದು ತಮ್ಮ ಪ್ರತಿಭಟನೆ ಹಾಗು ಚಲೋ ಸಂಸದ್‌ ಮುಂದುವರಿಯಲಿದೆ ಎಂದು ಕಾಕ್ರೋಚ್‌ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್‌ ದೀಪ್ಕೆ…

13 hours ago