ಮೈಸೂರು: ಮೇಘಾಲಯ ರಾಜ್ಯಪಾಲರಾದ ಸಿ ಹೆಚ್ ವಿಜಯಶಂಕರ್ ಹಾಗೂ ಸಂಸದ ಯದುವೀರ್ ರ್ಯೋಧರ ತ್ಯಾಗ, ಬಲಿದಾನ ಹಾಗೂ ಶೌರ್ಯದ ಕುರಿತು ನಿರ್ಮಾಣವಾಗಿರುವ ಕದನ ವೀರ ಚಲನ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿ
ಶುಭ ಹಾರೈಸಿದರು.
ಕದನ ವೀರ ಚಲನ ಚಿತ್ರ ಇದೆ 1ನೇ ಸೆಪ್ಟೆಂಬರ್ (ಭಾನುವಾರ) ಕರ್ನಾಟಕ ಕಲಾ ಮಂದಿರ ನಲ್ಲಿ ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ 5 ಪ್ರದರ್ಶನ ಇರಲಿದೆ. ಜೊತೆಗೆ ಚಿತ್ರದ ಟ್ರೇಲರ್ ನ್ನೂ YouTube channel Sainik Academy Mysuru ನಲ್ಲಿ ವೀಕ್ಷಿಸಬಹುದು, ಪೂರ್ತಿ ಚಲನ ಚಿತ್ರವನ್ನು ಇನ್ನೇನು ಕೆಲವೇ ದಿನಗಳಲ್ಲಿ ಮೇಲ್ಕಂಡ YouTube ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗುವುದು.
ಯೋಧರ ತ್ಯಾಗ, ಬಲಿದಾನ, ಶೌರ್ಯದ ಬಗ್ಗೆ ನಿರ್ಮಾಣ ಆಗಿರುವ ಕದನ ವೀರ ಚಲನ ಚಿತ್ರವನ್ನು ಸೈನಿಕ ಅಕಾಡೆಮಿ (ರಿ) ಮೈಸೂರು ವತಿಯಿಂದ ನಿರ್ಮಾಣ ಮಾಡಲಾಗಿದೆ. ಒಂದು ವರ್ಷಗಳ ಸತತ ಪ್ರಯತ್ನ ಪರಿಶ್ರಮದಿಂದ SAM ಸಂಸ್ಥಾಪಕರು ಮತ್ತು ಎಕ್ಸ್ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಶ್ರೀಧರ ಸಿ ಎಂ ರವರ ಪ್ರೋತ್ಸಾಹದಿಂದ, ಸೈನಿಕರ ಮೇಲೆ ಅಪಾರ ಅಭಿಮಾನ ಇರುವ SAM ನ ಅಭ್ಯರ್ಥಿ ಜೀವನ ಚಿಕ್ಕಬಂಡಾರ ಅವರ ನಿರ್ದೇಶನ ಹಾಗೂ ನಿರ್ಮಾಪಕ ಅನಿತಾ ಶ್ರೀಧರ ಅವರ ಸಹಕಾರದಿಂದ ಈ ಚಿತ್ರ ಮೂಡಿಬಂದಿದೆ.
ನನ್ನ ಮಣ್ಣು, ನನ್ನ ಜಲ, ನನ್ನ ಗಾಳಿ, ನನ್ನ ಜನ, ದೇಶ ಎಂಬ ಕಿಚ್ಚು ಯುವಪೀಳಿಗೆಗೆ, ಪೋಷಕರಿಗೆ ಹೆಚ್ಚಿಸಬೇಕೆಂಬ ಸೈನಿಕರ ತ್ಯಾಗ ಬಲಿದಾನ ಪ್ರತಿಯೊಬ್ಬರೂ ತಿಳಿಯಬೇಕು, ಸೈನಿಕರ ಸಾಹಸ ಸಾಧನೆಯು ಶಾಲೆಯ ಪಠ್ಯ ಪುಸ್ತಕಗಳಲ್ಲಿ ಪ್ರಕಟಿಸಬೇಕು, ತನಗಾಗಿ ಅಲ್ಲ, ತನ್ನವರಿಗಾಗಿ ಸೇವೆ ಮಾಡುತ್ತಿರುವ ಸೈನಿಕನಿಗೆ ಅಪಾರ ಗೌರವ ಸಿಗಬೇಕು, ಸೈನಿಕರಿಗೆ ಉತ್ಸಾಹ ಧೈರ್ಯ ಹೆಚ್ಚಿಸುವ ಕೆಲಸ ನಾವುಗಳು ಮಾಡಬೇಕೆಂಬ ಉದ್ದೇಶದಿಂದ ಈ ಚಲನ ಚಿತ್ರವನ್ನು SAM ಭವಿಷ್ಯದ ಸೈನಿಕರಿಂದಲೇ ನಿರ್ಮಿಸಲಾಗಿದೆ ಎಂದು ಚಿತ್ರತಂಡ ಹೇಳಿದೆ.
ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದ ರಸ್ತೆ ಹಾಳಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಹರ ಸಾಹಸ ಮಾಡಬೇಕಾಗಿದೆ. ರಸ್ತೆಯ…
ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಆವರಣದಲ್ಲಿ ಜ್ಯೂಸ್ ಸೆಂಟರ್, ಕಾಫಿ, ಟೀ ಅಂಗಡಿಗಳು ಪ್ಲಾಸ್ಟಿಕ್ ಕವರ್, ನೀರಿನ ಬಾಟಲಿ, ಪ್ಲಾಸ್ಟಿಕ್ ಕಪ್‌ಗಳನ್ನು…
ಭಾರತದ ಹೆಚ್ಚಿನ ಕುಟುಂಬಗಳಿಗೆ ಅಡುಗೆ ಅನಿಲ ಅಥವಾ ಎಲ್‌ಪಿಜಿ ಎಂಬುದು ದಿನಚರಿಯ ಅವಿಭಾಜ್ಯ ಅಂಗವಾಗಿದೆ. ಸಿಲಿಂಡರ್ ಯಾವಾಗ ಖಾಲಿಯಾಗುತ್ತದೆ ಎನ್ನುವುದರತ್ತ…
ಗ್ರಾಮದಲ್ಲಿ ಆತಂಕ ಸೃಷ್ಟಿಸಿದ ಆನೆಗಳ ಹಿಂಡು; ಶಾಶ್ವತ ಪರಿಹಾರಕ್ಕೆ ಗ್ರಾಮಸ್ಥರ ಒತ್ತಾಯ ಕಾಂಗೀರ ಬೋಪಣ್ಣ ವಿರಾಜಪೇಟೆ: ಸಮೀಪದ ಅರಣ್ಯ ಪ್ರದೇಶದಿಂದ…
ಒಂದು ವರ್ಷದಲ್ಲಿ ಹತ್ತಕ್ಕೂ ಹೆಚ್ಚು ಅಪಘಾತ; ಗಣಿಗಾರಿಕೆ ಹಗಲು-ರಾತ್ರಿ ನಡೆಯುವುದರಿಂದ ಟಿಪ್ಪರ್‌ಗಳ ಸಂಚಾರ ಹೆಚ್ಚಳ ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ…