ನವದೆಹಲಿ: ಕರ್ನಾಟಕ ಸೇರಿದಂತೆ ದೇಶದ ಏಳು ರಾಜ್ಯಗಳಲ್ಲಿ ಪಿಎಂ ಮಿತ್ರ ಅಥವಾ ಪಿಎಂ ಮಿತ್ರಾ ಮೆಗಾ ಟೆಕ್ಸ್ಟೈಲ್ ಪಾರ್ಕ್ಗಳನ್ನು ಸ್ಥಾಪನೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಮೂಲಕ ಘೋಷಣೆ ಮಾಡಿದ್ದಾರೆ.
ಕರ್ನಾಟಕ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ, 7 ಮಹಾ ಜವಳಿ ಕೇಂದ್ರಗಳು ತಲೆ ಎತ್ತಲಿವೆ. 5ಎಫ್ (ಫಾರ್ಮ್, ಫೈಬರ್, ಫ್ಯಾಕ್ಟರಿ, ಫ್ಯಾಷನ್, ಫಾರೀನ್) ದೃಷ್ಟಿಕೋನದಲ್ಲಿ ಈ ಪಾರ್ಕ್ಗಳಿಂದ ಜವಳಿ ಉದ್ಯಮಕ್ಕೆ ಪುಷ್ಟಿ ಸಿಗಲಿದೆ.
ಪಿಎಂ ಮಿತ್ರಾ ಮೆಗಾ ಟೆಕ್ಸ್ ಟೈಲ್ ಪಾರ್ಕ್ಗಳು ಜವಳಿ ವಲಯಕ್ಕೆ ಬೇಕಾದ ಅತ್ಯಾಧುನಿಕ ಸೌಕರ್ಯಗಳನ್ನು ಒದಗಿಸುತ್ತವೆ. ಕೋಟಿಗಟ್ಟಲೆ ಬಂಡವಾಳ ಹರಿದುಬರುವಂತೆ ಮಾಡುತ್ತದೆ. ಲಕ್ಷಾಂತರ ಉದ್ಯೋಗ ಸೃಷ್ಟಿಯಾಗುತ್ತದೆ. ಮೇಕ್ ಇನ್ ಇಂಡಿಯಾ ಮತ್ತು ಮೇಕ್ ಫಾರ್ ದಿ ವಲ್ರ್ಡ್ ಗುರಿ ಸಾಧನೆಗೆ ಇದು ಒಳ್ಳೆಯ ನಿದರ್ಶನವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಕರ್ನಾಟಕವಲ್ಲದೆ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದಲ್ಲಿ ಈ ಜವಳಿ ಪಾರ್ಕ್ ನಿರ್ಮಾಣವಾಗಲಿದೆ. ಈ ಪಾರ್ಕ್ಗಳನ್ನು 5 ಎಫ್ ಅಥವಾ ಫಾರ್ಮ್ನಿಂದ ಫೈಬರ್ ಟು ಫ್ಯಾಕ್ಟರಿ, ಫ್ಯಾಶನ್ ಟು ಫಾರಿನ್ ದೃಷ್ಟಿಯಲ್ಲಿ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ‘ಪಿಎಂ ಮಿತ್ರ ಮೆಗಾ ಜವಳಿ ಪಾರ್ಕ್ಗಳು ಜವಳಿ ಕ್ಷೇತ್ರಕ್ಕೆ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಒದಗಿಸುತ್ತವೆ. ಇದು ದೇಶಕ್ಕೆ ಕೋಟ್ಯಂತರ ರೂಪಾಯಿ ಬಂಡವಾಳವನ್ನು ತರಲಿದೆ. ಇದು ಲಕ್ಷಾಂತರ ಜನರಿಗೆ ಉದ್ಯೋಗದ ಮಾರ್ಗವನ್ನು ತೆರೆಯುತ್ತದೆ. ಇದು ಮೇಕ್ ಇನ್ ಇಂಡಿಯಾ ಮತ್ತು ಮೇಕ್ ಫಾರ್ ವರ್ಲ್ಡ್ ಗೆ ಉತ್ತಮ ಉದಾಹರಣೆಯಾಗಲಿದೆ’ ಎಂದು ಬರೆದಿದ್ದಾರೆ.
ಪಿಎಂ ಮಿತ್ರ ಮೆಗಾ ಟೆಕ್ಸ್ಟೈಲ್ ಪಾರ್ಕ್ ಎಂದರೇನು?: ಸ್ವಾವಲಂಬಿ ಭಾರತ ನಿರ್ಮಾಣದ ಪ್ರಧಾನಿಯವರ ಕನಸನ್ನು ನನಸು ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ವಿಶ್ವ ಜವಳಿ ಭೂಪಟದಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವುದು. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಯ 9ನೇ ಗುರಿಯನ್ನು ಸಾಧಿಸಲು ಭಾರತಕ್ಕೆ ಸಹಾಯ ಮಾಡಲು ಪಿಎಂ ಮಿತ್ರ ಪಾರ್ಕ್ಸ್ ಯೋಜಿಸಲಾಗಿದೆ.
ಇದು ಸುಸ್ಥಿರ ಕುಶಲಕರ್ಮಿಗಳನ್ನು ಉತ್ತೇಜಿಸುವುದು ಮತ್ತು ಚೇತರಿಸಿಕೊಳ್ಳುವ ಮೂಲಸೌಕರ್ಯವನ್ನು ರಚಿಸುವ ಮೂಲಕ ನಾವೀನ್ಯತೆಯನ್ನು ಉತ್ತೇಜಿಸುವುದನ್ನು ಒಳಗೊಂಡಿರುತ್ತದೆ’ ಹೊಸ ಟೆಕ್ಸ್ಟೈಲ್ ಪಾರ್ಕ್ ಈ ಯೋಜನೆಯ ವ್ಯಾಪ್ತಿಯಲ್ಲಿ ಬರುತ್ತದೆ.
ಪಿಎಂ ಮಿತ್ರಾ ಜವಳಿ ಪಾಕ್ರ್ಗಳು ಸಾಕಷ್ಟು ಹೂಡಿಕೆಗಳನ್ನು ಆಕರ್ಷಿಸುವ ನಿರೀಕ್ಷೆ ಇದೆ. ಒಂದು ಸಾವಿರ ಎಕರೆಗೂ ಹೆಚ್ಚು ವಿಸ್ತೀರ್ಣ ಜಾಗದಲ್ಲಿ ನಿರ್ಮಾಣವಾಗಲಿರುವ ಪ್ರತಿಯೊಂದು ಪಾಕ್ರ್ನಿಂದಲೂ 2ಲಕ್ಷದವರೆಗೆ ನೇರ ಉದ್ಯೋಗ ಸಿಗುವ ಸಾಧ್ಯತೆ ಇದೆ. ಒಂದು ಪಾರ್ಕ್ ಸ್ಥಾಪನೆಯಿಂದ ಸುತ್ತಲಿನ ಪ್ರದೇಶಗಳಲ್ಲಿ ಜವಳಿ ಉದ್ಯಮ ವಿಫುಲವಾಗಿ ಬೆಳೆಯುವ ಅವಕಾಶ ಇರಲಿದೆ.
ಸ್ಪಿನ್ನಿಂಗ್, ನೇಯ್ಗೆಯಿಂದ ಹಿಡಿದು ಪ್ರಿಂಟಿಂಗ್ ಮತ್ತು ಉಡುಗೆ ತಯಾರಿಕೆ ವರೆಗೂ ಪ್ರತಿಯೊಂದು ವಿಭಾಗಗಳಿಗೆ ಉತ್ತೇಜನ ಸಿಕ್ಕು ಪ್ರಬಲ ಜವಳಿ ಸರಪಳಿ ರೂಪುಗೊಳ್ಳುವ ನಿರೀಕ್ಷೆ ಇದೆ.