ಮೈಸೂರು: ನಗರದಲ್ಲಿರುವ ಪಾಲಿಕೆ ಆಸ್ತಿಯನ್ನು ಸರಿಯಾಗಿ ನಿರ್ವಹಣೆ ಮಾಡಿ ಪಾಲಿಕೆಯು ತೆರಿಗೆ ವಸೂಲಿಯನ್ನು ಕಟ್ಟುನಿಟ್ಟಾಗಿ ಮಾಡಬೇಕು, ಆಸ್ತಿ ತೆರಿಗೆ ಹೊರತುಪಡಿಸಿ ಬೇರೆ ಬೇರೆ ಮೂಲಗಳ ಆದಾಯವನ್ನು ಹೆಚ್ಚಿಸುವ ದಾರಿ ಕಂಡುಕೊಳ್ಳಬೇಕು, ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕೆ ನಗರ ಬಸ್ ನಿಲ್ದಾಣವನ್ನು ಸ್ಥಳಾಂ ತರಿಸಬೇಕು.
ಇವು ನಗರಪಾಲಿಕೆ ಸಭಾಂಗಣದಲ್ಲಿ ಗುರುವಾರ ಕರೆಯ ಲಾಗಿದ್ದ ೨೦೨೪-೨೫ನೇ ಸಾಲಿನ ಆಯವ್ಯಯ ತಯಾರಿಕೆ ಸಂಬಂಧದ ಸಾರ್ವಜನಿಕರ ಅಭಿಪ್ರಾಯ ಹಾಗೂ ಸಲಹಾ ಸಭೆಯಲ್ಲಿ ಕೇಳಿಬಂದ ಕೆಲವು ಅಭಿಪ್ರಾಯಗಳು. ನಗರದ ಮಾಜಿ ಮಹಾಪೌರರು, ನಾನಾ ಸಂಘ- ಸಂಸ್ಥೆ ಗಳ ಮುಖಂಡರು ಹಾಗೂ ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿ ಮೈಸೂರು ಅಭಿವೃದ್ಧಿಗೆ ಆಗಬೇಕಾದ ಕೆಲಸಗಳ ಬಗ್ಗೆ ಉಪಯುಕ್ತವಾದ ಸಲಹೆ-ಸೂಚನೆಗಳನ್ನು ನೀಡಿದರು. ಮೊದಲಿಗೆ ಮಾಜಿ ಮಹಾಪೌರ ಬಿ. ಎಲ್. ಭೈರಪ್ಪ ಮಾತನಾಡಿ, ನಗರಪಾಲಿಕೆ ಅಧಿಕಾರಿಗಳು ಕಂದಾಯ ಬಡಾವಣೆಗಳಿಗೆ ಖಾತೆ ಮಾಡುವ ಬಗ್ಗೆ ಸ್ಪಷ್ಟನೆ ನೀಡ ಬೇಕು. ಇ-ಖಾತೆಯನ್ನು ಕೇವಲ ಮುಡಾ ಖಾತೆಗಳಿಗೆ ಮಾತ್ರ ನೀಡುತ್ತೀರಾ ಅಥವಾ ಕಂದಾಯ ಬಡಾವಣೆಗೂ ಇ-ಖಾತೆ ಕೊಡುತ್ತೀರಾ ಎಂದು ಪ್ರಶ್ನಿಸಿದರು.
ಮಾಜಿ ಮಹಾಪೌರರಾದ ಪುಷ್ಪಲತಾ ಜಗನ್ನಾಥ್ ಮಾತನಾಡಿ, ನಗರದಲ್ಲಿ ಬೀದಿಬದಿ ವ್ಯಾಪಾರಿಗಳು ಎಲ್ಲೆಂದರಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಅವರಿಗೆಂದು ಮೀಸಲಿಟ್ಟ ಜಾಗ ಖಾಲಿ ಬಿದ್ದಿದೆ. ಫುಟ್‌ಪಾತ್‌ಗಳು ವ್ಯಾಪಾರ ತಾಣಗಳಾಗಿವೆ. ಇದರಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ಧಕ್ಕೆಯಾಗಿದೆ ಎಂದು ದೂರಿದರು. ಕೈಗಾರಿಕಾ ಬಡಾವಣೆಗೆ ಸೌಲಭ್ಯ ಕಲ್ಪಿಸಿ: ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಮಾತನಾಡಿ, ಮೈಸೂರಿನಲ್ಲಿ ೨೬ ಸಾವಿರ ಜನ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಾರೆ.
ಆದರೆ, ಐದಾರು ಕೈಗಾರಿಕಾ ಬಡಾವಣೆ ಗಳಲ್ಲಿ ಮೂಲ ಸೌಲಭ್ಯಗಳೇ ಇಲ್ಲ. ಪಾಲಿಕೆಯಿಂದ ಅರ್ಧ ಅನುದಾನ ನೀಡಿದರೆ ನಾವು ಅರ್ಧ ನೀಡಲು ಸಿದ್ಧ ಎಂದರು. ಗ್ರಾಹಕರ ಪರಿಷತ್ ಅಧ್ಯಕ್ಷ ಭಾಮಿ ವಿ. ಶೆಣೈ ಮಾತನಾಡಿ, ನಗರಪಾಲಿಕೆ ತೆರಿಗೆ ವಸೂಲಿಯಲ್ಲಿ ಹಿಂದಿದೆ. ವರ್ಷಕ್ಕೆ ೪೦೦-೫೦೦ ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ ಮಾಡುವ ಸಾಮರ್ಥ್ಯ ಪಾಲಿಕೆಗೆ ಇದೆ. ಇದಕ್ಕೆ ಮೊದಲು ಸ್ವಯಂ ಘೋಷಣೆ ಅಡಿ ತೆರಿಗೆ ತುಂಬಿದವರ ದಾಖಲೆ ಪರಿಶೀಲಿಸಬೇಕು. ಪಾಲಿಕೆ ಆಸ್ತಿಗಳು ಹಾಗೂ ಅದರಿಂದ ಬರುವ ಬಾಡಿಗೆಯ ಆಡಿಟ್ ಮಾಡಬೇಕು ಎಂದು ತಿಳಿಸಿದರು. ಎಚ್. ಎನ್. ಶ್ರೀಕಂಠಯ್ಯ ಮಾತನಾಡಿ, ತೆರಿಗೆ ಸಂಗ್ರ ಹಕ್ಕೆ ಮಹಿಳಾ ಸಂಘಗಳ ಬಳಕೆ ಸ್ವಾಗತಾರ್ಹ. ಕಂದಾಯ ವಸೂಲಿ ಕಟ್ಟುನಿಟ್ಟಾಗಿ ಆಗಲಿ. ಹೆಚ್ಚು ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ನೀಡಿ. ನೀರಿನ ಬಿಲ್ ಆದಷ್ಟು ಬೇಗ ವಸೂಲಿ ಆಗಬೇಕು ಎಂದು ತಿಳಿಸಿದರು. ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಮಾತನಾಡಿದರು. ಉಪ ಆಯುಕ್ತ (ಕಂದಾಯ) ಸೋಮಶೇಖರ್ ಜಿಗಣಿ, ಮುಖ್ಯ ಲೆಕ್ಕಾಽಕಾರಿ ಎಚ್. ವಿ. ಶ್ವೇತಾ, ಮಾಜಿ ಮಹಾಪೌರರಾದ ಪಿ. ವಿಶ್ವನಾಥ್, ಪುರುಷೋತ್ತಮ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ಸಾಕಷ್ಟು ಜನ ಉತ್ಸಾಹ ದಿಂದ ಭಾಗವಹಿಸಿ ಅಗತ್ಯ ಸಲಹೆ- ಸೂಚನೆಗಳನ್ನು ನೀಡಿದ್ದಾರೆ. ಬಜೆಟ್ ವೇಳೆ ಎಷ್ಟು ಆಗುತ್ತದೋ ಅಷ್ಟನ್ನೂ ಪರಿಗಣಿಸಲಾಗುವುದು. ಕೇಂದ್ರ, ರಾಜ್ಯ ಸರ್ಕಾರ ಗಳಿಂದ ಅನುದಾನ ಬರುವ ಜತೆಗೆ ಬಜೆಟ್ ಗಾತ್ರ ವನ್ನು ಹೆಚ್ಚಿಸಲು ಆದಾಯದ ಮೂಲ ಜಾಸ್ತಿಯಾಗ ಬೇಕು. -ಅಶಾದ್ ಉರ್ ರೆಹಮಾನ್ ಶರೀಫ್, ಆಯುಕ್ತ.
ನಗರಪಾಲಿಕೆ ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ಡೌನ್ ಕಟ್ಟಡದಿಂದ ಪಾಲಿಕೆಗೆ ಆದಾಯ ಬರುತ್ತಿಲ್ಲ. ಬಾಡಿಗೆ ಪಡೆದವರು ಉಪ ಬಾಡಿಗೆ ಕೊಟ್ಟು ಆದಾಯ ಮಾಡಿಕೊಳ್ಳುತ್ತಿ ದ್ದಾರೆ. ಇದನ್ನು ಮನಗಂಡು ನಗರಪಾಲಿಕೆ ತನ್ನ ಆಸ್ತಿ ಆದಾಯ ಹೆಚ್ಚಿಸಿಕೊಳ್ಳಲು ಯೋಚಿಸಬೇಕಿದೆ. ನಗರದ ವಾಣಿಜ್ಯ ರಸ್ತೆಗಳಲ್ಲಿ ಸ್ವಚ್ಛತೆಗೆ ಗಮನಹರಿಸಬೇಕು. -ಆರ್. ಲಿಂಗಪ್ಪ, ಮಾಜಿ ಮಹಾಪೌರ.
ನಗರಪಾಲಿಕೆ ತನ್ನ ಹಣಕಾಸು ಪರಿಸ್ಥಿತಿ ಹೇಗಿದೆ ಎಂಬುದನ್ನು ಮೊದಲು ಸ್ಪಷ್ಟ ಪಡಿಸಬೇಕು. ಆಗ ಮಾತ್ರ ಬಜೆಟ್ ಪೂರ್ವ ಭಾವಿ ಸಭೆಗೆ ಅರ್ಥ ಇರುತ್ತದೆ. ಇಲ್ಲದಿ ದ್ದರೆ ಎಲ್ಲವೂ ವ್ಯರ್ಥ. ಕೇಂದ್ರ, ರಾಜ್ಯದಿಂದ ಹೊಸ ಯೋಜನೆಗಳನ್ನು ತರಬೇಕು. ಆದಾಯವನ್ನು ಹೆಚ್ಚಿಸ ಬೇಕಾದರೆ ಶಾಶ್ವತವಾದ ಯೋಜನೆಗಳನ್ನು ರೂಪಿಸ ಬೇಕಿದೆ. -ಶಿವಕುಮಾರ್, ಮಾಜಿ ಮಹಾಪೌರ.
ನಗರದಲ್ಲಿ ಗ್ಯಾಸ್ ಪೈಪ್‌ಲೈನ್ ಕಾಮ ಗಾರಿ ಭರದಿಂದ ಸಾಗುತ್ತಿದೆ. ಆದರೆ, ಏಕಾಏಕಿ ಬಂದು ರಸ್ತೆ ಅಗೆದು ಹೋಗುತ್ತಿದ್ದಾರೆ. ಪುನಃ ರಸ್ತೆ ಸರಿಪಡಿಸುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. -ಸದಾಶಿವ, ನಿವಾಸಿ.
ಸಭೆಯಲ್ಲಿ ಕೇಳಿಬಂದ ಸಲಹೆಗಳು
ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸಚಿಕಿತ್ಸೆ ನಡೆಸಿ
ಫುಟ್‌ಪಾತ್‌ಗಳಿಗೆ ಇಂಟರ್ ಲಾಕಿಂಗ್ ಟೈಲ್ಸ್ ಹಾಕಬೇಡಿ. ಅದು ಪರಿಸರ ವಿರೋಧಿ
ನಗರಪಾಲಿಕೆ ಅಧಿಕಾರಿಗಳು ಸಾರ್ವಜನಿಕರಿಗೆ ಹತ್ತಿರವಾಗಬೇಕು
ಮೈಸೂರಿನಲ್ಲಿ ವಾಹನಗಳ ಸಂಖ್ಯೆ ಜಾಸ್ತಿಯಾಗಿರುವುದರಿಂದ ನಗರ ಬಸ್ ನಿಲ್ದಾಣ ಸ್ಥಳಾಂತರವಾಗಬೇಕು
ಘನತ್ಯಾಜ್ಯ ತೆರವು ಮಾಡಿ, ಉದ್ಯಾನಗಳ ನಿರ್ವಹಣೆ ಮಾಡಬೇಕು
ಪಾಲಿಕೆ ವಲಯ ಕಚೇರಿಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಬೇಕು
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…
ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್ಗಳ ರಜಾ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…