Uncategorized

91ಕ್ಕೆ7 ನಂತರ 292 ರನ್‌!:ಭವಿಷ್ಯದಲ್ಲಿ ನನ್ನ ಮಕ್ಕಳಿಗೆ ಹೇಗೆ ವಿವರಿಸಲಿ:ಮ್ಯಾಕ್ಸ್ ವೆಲ್

ಮುಂಬೈ : ”ಆಸ್ಟ್ರೇಲಿಯ ಒಂದು ಹಂತದಲ್ಲಿ 91ಕ್ಕೆ 7 ವಿಕೆಟ್ ಕಳೆದುಕೊಂಡ ನಂತರ 292 ರನ್‌ಗಳನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾಗಿದೆ ಎಂದು ಭವಿಷ್ಯದಲ್ಲಿ ನನ್ನ ಮಕ್ಕಳಿಗೆ ನಾನು ಹೇಗೆ ವಿವರಿಸಲಿ” ಎಂದು ಸ್ಮರಣೀಯ ದ್ವಿಶತಕ ಸಿಡಿಸಿ ಅಫ್ಘಾನ್ ವಿರುದ್ಧ ರೋಚಕ ಗೆಲುವಿಗೆ ಕಾರಣವಾದ ಗ್ಲೇನ್ ಮ್ಯಾಕ್ಸ್ ವೆಲ್ ಸಂತಸ ಹಂಚಿಕೊಂಡಿದ್ದಾರೆ.

ಪಂದ್ಯದ ನಂತರ ಪ್ರಸ್ತುತಿ ಸಮಾರಂಭದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮ್ಯಾಕ್ಸ್ ವೆಲ್ , ”ಇಂದಿನ ಪಾಲುದಾರಿಕೆಯಲ್ಲಿ ನಾಯಕ ಪ್ಯಾಟ್ ಕಮ್ಮಿನ್ಸ್ 68 ಎಸೆತಗಳಲ್ಲಿ 12 ರನ್ ಗಳಿಸಿದರು. ಅಕ್ಷರಶಃ ಬೆನ್ನಿನ ಮೇಲೆ ತಮ್ಮ ತಂಡದ ಭಾರವನ್ನು ಹೊತ್ತಿದ್ದರು ಎಂದರು.

ಇಂದು ಫೀಲ್ಡಿಂಗ್ ಮಾಡುವಾಗ ಹೆಚ್ಚಿನ ತಾಪದಲ್ಲಿ ಹೆಚ್ಚು ಕಸರತ್ತು ಮಾಡಿಲ್ಲ, ನನ್ನ ಕಾಲುಗಳ ನೋವಿನಿಂದ ಹಿಂದೆ ಉಳಿಯಲು ನಿರ್ಧರಿಸಿದ್ದೆ. 92 ಕ್ಕೆ 7 ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ಸಾಧ್ಯವಾದಷ್ಟು ಬ್ಯಾಟಿಂಗ್ ಗೆ ಅಂಟಿಕೊಳ್ಳಲು ಯೋಚಿಸಿದೆ.ಸಕಾರಾತ್ಮಕವಾಗಿ ನನ್ನ ಹೊಡೆತಗಳನ್ನು ಆಡಲು ನೋಡಿದೆ. ಎಲ್ಬಿಡಬ್ಲ್ಯೂ ಸ್ಟಂಪ್‌ಗಳಿಂದ ಸ್ವಲ್ಪ ಮೇಲಕ್ಕೆ ಹೋಗುತ್ತಿತ್ತು. ಬಹುಶಃ ಅದು ನನ್ನನ್ನು ಮುಂದುವರಿಯುವಂತೆ ಮಾಡಿತು ಎಂದರು.

ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಪತ್ನಿ ಭಾರತ ಮೂಲದವರಾಗಿದ್ದು ಈ ವರ್ಷ ಗಂಡು ಮಗುವನ್ನು ಪಡೆದಿದ್ದು, ಪುತ್ರನಿಗೆ ಲೋಗನ್ ಮೇವರಿಕ್ ಮ್ಯಾಕ್ಸ್‌ವೆಲ್ ಎಂದು ಹೆಸರಿಸಿಟ್ಟಿದ್ದಾರೆ.

ಏಕದಿನ ಪಂದ್ಯದಲ್ಲಿ 7ನೇ ಅಥವಾ ಅದಕ್ಕಿಂತ ಕೆಳಗಿನ ವಿಕೆಟ್‌ಗೆ ಅತ್ಯಧಿಕ ಜತೆಯಾಟ ಅಫ್ಘಾನ್ ವಿರುದ್ದದ ಪಂದ್ಯದಲ್ಲಿ ದಾಖಲಾಗಿದ್ದು (201*) ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಪ್ಯಾಟ್ ಕಮ್ಮಿನ್ಸ್ ಅವರ ಜತೆಯಾಟವಾಗಿದೆ. ಪ್ಯಾಟ್ ಕಮ್ಮಿನ್ಸ್ (17.64 ) ಅವರು ವಿಶ್ವಕಪ್ ಇನ್ನಿಂಗ್ಸ್‌ನಲ್ಲಿ ಕಡಿಮೆ ಸ್ಟ್ರೈಕ್-ರೇಟ್ (ಕನಿಷ್ಠ 10 ರನ್ ಸ್ಕೋರ್) ದಾಖಲಿಸಿದ್ದಾರೆ. ಜಿಂಬಾಬ್ವೆ ಯ ಜ್ಯಾಕ್ ಹೆರಾನ್ ಅವರು ವೆಸ್ಟ್ ಇಂಡೀಸ್ ವಿರುದ್ಧ 1983 ರಲ್ಲಿ ವೋರ್ಸೆಸ್ಟರ್ ನಲ್ಲಿ (16.43 ಸ್ಟ್ರೈಕ್-ರೇಟ್) ಹೊಂದಿದ್ದರು.

ಮ್ಯಾಕ್ಸ್ ವೆಲ್ 128 ಎಸೆತಗಳಿಂದ 201 ರನ್ ಬಾರಿಸಿ ವಿಶ್ವಕಪ್ ದ್ವಿಶತಕದ ಸಂಭ್ರಮ ಆಚರಿಸಿದರು. ಬರೋಬ್ಬರಿ 21 ಬೌಂಡರಿ ಮತ್ತು 10 ಆಕರ್ಷಕ ಸಿಕ್ಸರ್ ಬಾರಿಸಿದ್ದರು.

andolanait

Recent Posts

ಮೇಲುಕೋಟೆ ಜಾತ್ರೆ | ವೈರಮುಡಿ ಕಿರೀಟಧಾರಣಾ ಮಹೋತ್ಸವದಲ್ಲಿ 2 ಲಕ್ಷ ಜನರು ಭಾಗಿ

ಮೇಲುಕೋಟೆ : ವೈಷ್ಣವ ಪರಂಪರೆಯ ಅತ್ಯಂತ ಪ್ರಸಿದ್ಧ ಮತ್ತು ವಿಶ್ವವಿಖ್ಯಾತ ವೈರಮುಡಿ ಬ್ರಹ್ಮೋತ್ಸವ ಶನಿವಾರ ರಾತ್ರಿಯಿಡಿ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ…

3 mins ago

ಅಸ್ಸಾಂ ಚುನಾವಣೆ | ಪಂಚ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್‌

ಗುವಾಹಟಿ : ಅಸ್ಸಾಂ ವಿಧಾನಸಭಾ ಚುನಾವಣೆಗೆ ರಾಜಕೀಯ ಕಾರ್ಯತಂತ್ರ ರೂಪಿಸಿರುವ ಕಾಂಗ್ರೆಸ್ ಪಕ್ಷವೂ ಪಂಚ ಗ್ಯಾರಂಟಿಗಳನ್ನು ಘೋಷಿಸಿದೆ. ಎಐಸಿಸಿ ಅಧ್ಯಕ್ಷ…

15 mins ago

ರಾಜ್ಯದಲ್ಲಿ ಆಟೋ ಎಲ್‌ಪಿಜಿ ಕೊರತೆ ಇಲ್ಲ : ​ಆಹಾರ,ನಾಗರಿಕ ಸರಬರಾಜು ಇಲಾಖೆ ಸ್ಪಷ್ಟನೆ

ಬೆಂಗಳೂರು : ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆ ಇಲ್ಲದೆ ಎಲ್.ಪಿ.ಜಿ‌ ಸರಬರಾಜು ಮಾಡಲಾಗುತ್ತಿದೆ ಅಲ್ಲದೇ ವಿಶೇಷವಾಗಿ ಆಟೋ‌ ಎಲ್.ಪಿ.ಜಿಗೆ ಯಾವುದೇ…

20 mins ago

ಹನೂರು | ಮಧ್ಯರಾತ್ರಿ ಮಾರಕಾಸ್ತ್ರ ಹಿಡಿದು ಓಡಾಟ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಹನೂರು : ಶನಿವಾರ ಮಧ್ಯರಾತ್ರಿ ಎರಡು ಗಂಟೆ ವೇಳೆಯಲ್ಲಿ ಯಾರೋ ಆಸಾಮಿಗಳು ಮಾರಕಾಸ್ತ್ರಗಳನ್ನು ಹಿಡಿದು ಐದಾರು ಜನರು ಓಡಾಡುತ್ತಿರುವ ದೃಶ್ಯ…

26 mins ago

ಹುಲ್ಲಹಳ್ಳಿ | ಚಿರತೆ ದಾಳಿಗೆ ಎರಡು ಮೇಕೆ ಬಲಿ

ಹುಲ್ಲಹಳ್ಳಿ : ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಭಾಗದ ಮೊತ್ತ ಗ್ರಾಮದಲ್ಲಿ ಭಾನುವಾರ ಸಂಜೆ ಚಿರತೆ ದಾಳಿ ಮಾಡಿ ಎರಡು ಮೇಕೆಯನ್ನು…

47 mins ago

ನೀರಿನ ಸುಳಿಗೆ ಸಿಲುಕಿ ಓರ್ವ ಸಾವು ; ಹೊಗೇನಕಲ್‌ ಫಾಲ್ಸ್‌ನಲ್ಲಿ ಘಟನೆ

ಹನೂರು : ತಾಲೂಕಿನ ಹೊಗೇನಕಲ್ ಫಾಲ್ಸ್‌ನ ನೀರಿನಲ್ಲಿ ಈಜಾಡುತ್ತಿದ್ದ ವೇಳೆ ವ್ಯಕ್ತಿಯೋರ್ವ ನೀರಿನ ಸುಳಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಭಾನುವಾರ…

1 hour ago