‘ವರ್ತಮಾನದ ಕಣ್ಣಲ್ಲಿ ಸತ್ಯಾನ್ವೇಷಕ ಗಾಂಧಿ’ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಹಿರಿಯ ಗಾಂಧಿವಾದಿಗಳು, ವಿದ್ಯಾರ್ಥಿಗಳು
ಮೈಸೂರು: ಮಧ್ಯಪ್ರಾಚ್ಯದೇಶಗಳ ನಡುವೆ ನಡೆಯುತ್ತಿರುವ ಹಿಂಸಾತ್ಮಕ ಹೋರಾಟವನ್ನು ತನ್ನ ಮಧ್ಯಸ್ಥಿಕೆಯಿಂದ ತಡೆದು ನೊಬೆಲ್ ಶಾಂತಿ ಪುರಸ್ಕಾರ ಪಡೆಯಲು ಜಾಗತಿಕ ಮಟ್ಟದ ನಾಯಕರು ಹವಣಿಸುತ್ತಿರುವ ಇಂದಿನ ಕಾಲ ಘಟ್ಟದ ಕುರಿತು ನಡೆಯುತ್ತಿರುವ ಚರ್ಚೆಗಳ ನಡುವೆಯೇ ಸತ್ಯ, ಅಹಿಂಸೆ ಹಾಗೂ ಸ್ವಾವಲಂಬನೆ, ಸರ್ವೋದಯ ತತ್ವಗಳ ಮೂಲಕ ಪ್ರಸ್ತುತ ಗಾಂಧೀಜಿ ಚಿಂತನೆಗಳು ಮತ್ತೆ ಮತ್ತೆ ಚರ್ಚೆ, ಪುನರ್ ವಿಮರ್ಶೆಗೆ ಒಳಗಾಗುತ್ತಲೇ ಇರುವುದಕ್ಕೆ ಮಕ್ಕಳ ಮನದಾಳದಿಂದ ಮೂಡಿಬಂದ ಮಾತುಗಳೇ ಸಾಕ್ಷಿಯಾಗಿವೆ.
ವಿವಿಧ ಜಾತಿ, ಧರ್ಮ, ಭಾಷಿಕರನ್ನು ಒಂದೇ ತಾಯಿಯ ಮಕ್ಕಳು ಎನ್ನುವ ಮಹಾತ್ಮ ಗಾಂಧೀಜಿಯ ಆಶಯ ಇಂದಿನ ಜೆನ್‌ಝೀಗಳ ಮನದ ಮೇಲೂ ಪರಿಣಾಮ ಬೀರಿರುವುದರಿಂದಲೇ ಗಾಂಧಿ ವಿಚಾರ ಮುನ್ನೆಲೆಗೆ ಬರುತ್ತಲೇ ಇದೆ ಎಂಬುದು ‘ವರ್ತಮಾನದ ಕಣ್ಣಲ್ಲಿ ಸತ್ಯಾನ್ವೇಷಕ ಗಾಂಧಿ’ ಕುರಿತ ಕಾರ್ಯಕ್ರಮದಲ್ಲಿ ಮೆಲುಕು ಹಾಕುವ ಜತೆಗೆ ಚಿಂತನ-ಮಂಥನಕ್ಕೂ ಕಾರಣವಾಯಿತು.
ಮೈಸೂರು ವಿಶ್ವವಿದ್ಯಾನಿಲಯದ ಗಾಂಧಿ ಅಧ್ಯಯನ ಕೇಂದ್ರ, ‘ಆಂದೋಲನ’ ದಿನಪತ್ರಿಕೆ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಂಯುಕ್ತಾಶ್ರಯದಲ್ಲಿ ‘ಗಾಂಧಿಜಿ ಅವರ ‘ಆತ್ಮಕಥೆ ಅಥವಾ ನನ್ನ ಸತ್ಯಾನ್ವೇಷಣೆ’ ಕೃತಿಯ ಶತಮಾನೋತ್ಸವದ ಅಂಗವಾಗಿ, ‘ವರ್ತಮಾನದ ಕಣ್ಣಲ್ಲಿ ಸತ್ಯಾನ್ವೇಷಕ ಗಾಂಧಿ’ ಎಂಬ ಶೀರ್ಷಿಕೆಯಡಿ ಏರ್ಪಡಿಸಿರುವ ಎರಡು ದಿನಗಳ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ನಮ್ಮೊಳಗೆ ರಾಷ್ಟ್ರಪಿತ ಗಾಂಧಿಜಿಯ ಬದುಕು, ಪ್ರೇರಣೆ ಯಾವ ರೀತಿ ಇರಬೇಕೆಂಬುದನ್ನು ಸಾದರಪಡಿಸಿತು. ಸ್ವತಂತ್ರ ಭಾರತದ ೭೫ ವರ್ಷಗಳ ನಂತರವೂ ಹೆಚ್ಚು ವಿಮರ್ಶೆಗೆ ಒಳಪಡುತ್ತಿರುವುದು ಹಾಗೂ ಹುಟ್ಟುವ ಮಗುವಿನಿಂದ ವಯೋವೃದ್ಧರ ತನಕ ನೆನಪಿಗೆ ಮೊದಲು ಬರುವುದೇ ಗಾಂಧಿಜಿ. ಇಂದು ಮಧ್ಯಪ್ರಾಚ್ಯ ದೇಶಗಳ ನಡುವೆ ನಡೆಯುತ್ತಿರುವ ಯುದ್ಧಗಳನ್ನು ನಿಲ್ಲಿಸಿ ಶಾಂತಿಪ್ರಿಯರೆಂದು ಕರೆಸಿ ಕೊಳ್ಳಬೇಕೆಂಬ ಹೊತ್ತಿನಲ್ಲಿ ಅಹಿಂಸಾತ್ಮಕ ಹೋರಾಟದ ಮೂಲಕ ಇಡೀ ಜಗತ್ತನ್ನು ಭಾರತದ ಕಡೆಗೆ ಸದಾ ತಿರುಗಿನೋಡುವಂತೆ ಮಾಡಿರುವುದೇ ಗಾಂಧಿಜಿ ಅವರ ಶಾಂತಿ ಮತ್ತು ಅಹಿಂಸೆ ತತ್ವ.
ಗಾಂಧಿಜಿ ಅವರ ಈ ಅಹಿಂಸಾ ಮಾರ್ಗವನ್ನು ಅನುಸರಿಸುವುದಕ್ಕೂ ಜೆನ್‌ಝೀಗಳು ಮುಂದಾಗಿರುವುದು ಸಂವಾದದಲ್ಲಿ ವ್ಯಕ್ತವಾಯಿತು. ವಿಜ್ಞಾನ, ತಂತ್ರಜ್ಞಾನ ಕಾರ್ಯಕ್ರಮಗಳಿಗೆ ವೇದಿಕೆಯಾಗಿದ್ದ ವಿಜ್ಞಾನ ಭವನ ಶನಿವಾರ ಅಕ್ಷರಶಃ ಗಾಂಧಿಜಿ ವಿಚಾರಧಾರೆಗಳಿಗೆ ಸಾಕ್ಷಿಯಾಗಿತ್ತು.
ದೇವಾನಂದ ವರಪ್ರಸಾದ್ ಅವರ ತಂಡದವರು ಗಾಂಧೀಜಿ ಅವರ ಆಶಯ ಹೊತ್ತ ಗೀತೆಗಳನ್ನು ಪ್ರಸ್ತುತಪಡಿಸುತ್ತಲೇ ಗಾಂಧಿಜಿ ಕಡೆಗೆ ಕರೆದೊಯ್ದರು. ಸಾಕ್ಷ್ಯಚಿತ್ರದ ಮೂಲಕ ಅವರ ಬದುಕಿನ ಬಗ್ಗೆ ಕಣ್ಣಾರೆ ನೋಡುವಂತೆ ಮಾಡಿದರೆ, ನಂತರ ನಡೆದ ವಿಷಯ ಮಂಡನೆಗಳು ಗಾಂಧಿಜಿ ಅವರನ್ನು ಇನ್ನೊಮ್ಮೆ ಒಳಹೊಕ್ಕು ಕಂಡುಕೊಳ್ಳುವುದಕ್ಕೆ ಪ್ರೇರಣೆಯಾಗಿಸಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು: ವಿಧಾನಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ, ಹಿರಿಯ ಗಾಂಧಿವಾದಿ ಪ್ರೊ.ಜಿ.ಬಿ.ಶಿವರಾಜು, ಮೈಸೂರು ವಿವಿ ಪ್ರಸಾರಾಂಗದ ಮಾಜಿ ನಿರ್ದೇಶಕರಾದ ಹಿರಿಯ ಗಾಂಧಿವಾದಿ ಕೆ.ಟಿ.ವೀರಪ್ಪ, ಪ್ರಗತಿಪರ ಚಿಂತಕರಾದ ಶಬ್ಬೀರ್ ಮುಸ್ತಾ-, ಡಾ.ಕೆ.ಸಿ.ಬಸವರಾಜು, ಬರಹಗಾರರಾದ ಅಬ್ದುಲ್ ರಶೀದ್, ದಸಂಸ ರಾಜ್ಯ ಸಂಘಟನಾ ಸಂಚಾಲಕ ದೇವಗಳ್ಳಿ ಸೋಮಶೇಖರ್, ಆಹಾರ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಕಾ. ರಾಮೇಶ್ವರಪ್ಪ, ಮಾಜಿ ಮಹಾಪೌರರಾದ ನಾರಾಯಣ, ಪುರುಷೋತ್ತಮ್, ಹಿರಿಯ ದಲಿತ ಮುಖಂಡ ಹರಿಹರ ಆನಂದಸ್ವಾಮಿ, ಜಿ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಐತಿಚಂಡ ರಮೇಶ ಉತ್ತಪ್ಪ , ಅಂತಾರಾಷ್ಟ್ರೀಯ ಅಥ್ಲೀಟ್ ಎಂ.ಯೋಗೇಂದ್ರ, ನಿವೃತ್ತ ಪ್ರಾಧ್ಯಾಪಕ ಕುಮಾರಸ್ವಾಮಿ, ಕುಪ್ಪೆ ನಾಗರಾಜ್ , ಮಾನವ ಮಂಟಪದ ಸಂಚಾಲಕ ಧನಂಜಯ ಎಲಿಯೂರು, ಉದ್ಯಮಿ ಎ.ಪಿ.ನಾಗೇಶ್, ನಿವೃತ್ತ ಪ್ರಾಧ್ಯಾಪಕ ಡಿ.ಆನಂದ್, ಚಿಂತಕ ಸಿ. ಹರಕುಮಾರ್, ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ಪರಿಸರವಾದಿಗಳಾದ ಭಾನು ಮೋಹನ್, ಮೋಹನ್,ಯುವರಾಜ ಕಾಲೇಜಿನ ಪ್ರೊ. ಕೃಷ್ಣಮೂರ್ತಿ, ಮೈಸೂರು ಗ್ರಾಹಕರ ಪರಿಷತ್ (ಎಂಜಿಪಿ) ಸಂಚಾಲಕ ದಯಾನಂದ ಸಾಗರ್, ಉಪನ್ಯಾಸಕ ಪ್ರಸನ್ನ ಕೆರಗೋಡು, ಪತ್ರಕರ್ತರಾದ ಸ್ವಾಮಿ ಆನಂದ್, ಅಂಶಿ ಪ್ರಸನ್ನಕುಮಾರ್, ಕೂಡ್ಲಿ ಗುರುರಾಜ್, ಕೆ.ಪಿ.ನಾಗರಾಜ್, ಮಧುಸೂದನ್, ಮಹದೇವಸ್ವಾಮಿ, ಹೋರಾಟಗಾರ ಸೋಸಲೆ ಮಹೇಶ್, ಗಾಂಧಿ ಅಧ್ಯಯನ ಕೇಂದ್ರದ ಸಂಶೋಧನಾ ವಿದ್ಯಾರ್ಥಿ ಸುಪ್ರೀತ್‌ಕುಮಾರ್, ಜನಪರ ವೇದಿಕೆ ಅಧ್ಯಕ್ಷ ಎಸ್.ಶಿವಪ್ಪ, ನಿವೃತ್ತ ಬ್ಯಾಂಕ್ ನೌಕರ ವಿಜಯಕುಮಾರ್, ಡಾ.ಟಿ.ಮಂಜು, ಡಾ.ಉಮೇಶ್, ಕರ್ನಾಟಕ ಕಾವಲು ಪಡೆ ಅಧ್ಯಕ್ಷ ಎಂ.ಮೋಹನ್ ಕುಮಾರ್ ಗೌಡ, ದೇವನೂರು ಶಿವಮಲ್ಲು, ಪ್ರೊ.ಸಿ.ರಾಮಸ್ವಾಮಿ, ಸಿ.ಎಸ್.ಸುಬ್ಬೇಗೌಡ, ನಿವೃತ್ತ ಪ್ರಾಧ್ಯಾಪಕ ಚಂದ್ರೇಗೌಡ, ಡಾ.ಗುರುಸಿದ್ದಯ್ಯ, ಶ್ರೀನಿವಾಸ್, ಪ್ರೊ.ಪಂಡಿತಾರಾಧ್ಯ, ವರದಯ್ಯ, ಒಡನಾಡಿ ಸಂಸ್ಥೆಯ ನಿರ್ದೇಶಕರಾದ ಸ್ಟ್ಯಾನ್ಲಿ-ಪರಶು, ಅಲ್ಲದಾಸಯ್ಯ, ಡಾ.ಶಿವಪ್ರಸಾದ್ ಪಟ್ಟಣಗೆರೆ, ಡಾ. ಚರಿತಾ, ಮಹದೇವಸ್ವಾಮಿ, ನಾಗೇಂದ್ರ ಹೆಬ್ಬಾರ್, ಬಿ.ಆರ್.ಕೃಷ್ಣಕುಮಾರ್, ಪ್ರಸನ್ನಕುಮಾರ್, ಜಿ.ಹರೀಶ್ ಕುಮಾರ್, ಡಾ.ಡಿ.ಡಿ.ನವೀನ್, ಎನ್.ಕೆ.ಕರುಣಾ, ಗುರು, ಎಂ.ಎಲ್.ಸದಾಶಿವಯ್ಯ , ಕೆ.ಎಂ.ಶಿವಲಿಂಗಯ್ಯ, ಬಸವರಾಜು ದೇವನೂರು, ನಿವೃತ್ತ ಪ್ರಾಂಶುಪಾಲ ಕೂಡ್ಲಾಪುರ ಕುಮಾರಸ್ವಾಮಿ, ಪ್ರಭಾಕರ್, ಪುಟ್ಟಮಾದಯ್ಯ, ಗಾಂಧಿ ಭವನದ ಅಟೆಂಡರ್ ನಾಗರಾಜ್, ವರಹಳ್ಳಿ ಆನಂದ್, ನಾನಾ ಕಾಲೇಜುಗಳ ವಿದ್ಯಾರ್ಥಿಗಳಾದ ಸೂರಜ್, ಲಕ್ಷ್ಮಿ, ಕೀರ್ತನಾ, ಶಾಲಿನಿ, ವಂದನಾ, ಕೆ.ರಶ್ಮಿ, ನಾಗರಾಜ್, ಲಾವಣ್ಯ, ಯುಕ್ತ, ಎ. ಆರ್.ದ್ವಿತಿ, ವಿ.ಎಲ್.ನಂದಿತಾ, ಎಂ.ಎಸ್.ಯುಕ್ತ, ಎ.ಪೂರ್ವಿಕಾ, ದ್ಯುತಿ , ಹರಿಪ್ರಿಯ, ಸಿಂಚನ, ಕೀರ್ತನ, ಎಸ್.ವರ್ಷ, ಕೃತಿಕಾ, ಮನಿಷಾ ಸಿ.ಗೌಡ, ಎಂ.ಜಿ.ತ್ರಿಪುರಾಂಬ, ಪೂರ್ವಿಕಾ, ಕಿರಣ್, ಮಹಿಮಾ, ಜಾಹ್ನವಿ, ಭಾವನ, ಗಾಯತ್ರಿ, ಬಿ.ಕೆ.ಶಶಾಂಕ್‌ಗೌಡ, ಸ್ವಾತಿ, ರೋಹನ್, ಎನ್.ಕೆ.ಕರುಣ್, ಪ್ರಜ್ವಲ್, ರೇವತಿ, ಹಂಸ, ಎ.ಎಸ್.ಪವಿತ್ರ, ಅನಿತಾ, ಸಾಗರ್, ಜಿ.ಬಿ.ಸವಿತಾ, ಕಾತ್ಯಾಯಿನಿ, ಎಂ.ಎಸ್.ಗಗನ, ದೀಪಿಕಾ, ‘ಆಂದೋಲನ’ ದಿನಪತ್ರಿಕೆ ಸಿಬ್ಬಂದಿ, ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
” ಒಮ್ಮೆ ಪ್ಯಾರಿಸ್‌ಗೆ ಭೇಟಿ ನೀಡಿದ್ದಾಗ ಪುಸ್ತಕ ಮಳಿಗೆಯೊಂದರಲ್ಲಿ ಗಾಂಧಿಜಿ ಚಿತ್ರವಿದ್ದ ಮ್ಯಾಗ ಜೀನ್ ಕಂಡು ಆಶ್ಚರ್ಯವಾಯಿತು. ಫ್ರಾನ್ಸ್‌ಗೂ ಗಾಂಧೀಜಿಗೂ ಏನು ಸಂಬಂಧ ಎಂದು ವಿಚಾರಿಸಿದಾಗ, ಗ್ರಾಮ ಸ್ವರಾಜ್ಯದ ಕುರಿತು ಅಲ್ಲಿ ಚರ್ಚೆ ನಡೆಯುತ್ತಿರುವುದು ತಿಳಿಯಿತು. ಗಾಂಧಿಜಿ ಹಲವು ದೇಶಗಳಲ್ಲಿಯೂ ಪ್ರಸ್ತುತವಾಗಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ.”
-ಕೃಪಾಕರ, ವನ್ಯಜೀವಿ ಛಾಯಾಗ್ರಾಹಕ, ಮೈಸೂರು
” ಬಸವಣ್ಣ, ಸ್ವಾಮಿ ವಿವೇಕಾನಂದ, ಗಾಂಧಿಜಿ, ಅಂಬೇಡ್ಕರ್ ಅವರ ಬದುಕು ಯುವಜನರಿಗೆ ಪ್ರೇರಣೆ. ಗಾಂಧಿಜಿಯವರನ್ನು ಪ್ರಶ್ನಾತೀತ ವ್ಯಕ್ತಿಯಾಗಿ ನೋಡಬೇಕಿಲ್ಲ. ಅವರ ಸಾಹಿತ್ಯವನ್ನು ಓದಿ ಅರ್ಥಮಾಡಿಕೊಂಡು ಪ್ರಶ್ನಿಸಬಹುದು. ಓದದೇ ಟೀಕಿಸುವುದು ಸರಿಯಲ್ಲ.”
-ನಾಡೋಜ ವೂಡೇ ಪಿ.ಕೃಷ್ಣ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು
” ಗಾಂಧಿಜಿ ಅವರ ಈ ಅಹಿಂಸಾ ಮಾರ್ಗವನ್ನು ಅನುಸರಿಸುವುದಕ್ಕೂ ಜೆನ್‌ಝೀಗಳು ಮುಂದಾಗಿರುವುದು ಸಂವಾದದಲ್ಲಿ ವ್ಯಕ್ತವಾಯಿತು. ವಿಜ್ಞಾನ, ತಂತ್ರಜ್ಞಾನ ಕಾರ್ಯಕ್ರಮಗಳಿಗೆ ವೇದಿಕೆಯಾಗಿದ್ದ ವಿಜ್ಞಾನ ಭವನ ಶನಿವಾರ ಅಕ್ಷರಶಃ ಗಾಂಧಿಜಿ ವಿಚಾರಧಾರೆಗಳಿಗೆ ಸಾಕ್ಷಿಯಾಗಿತ್ತು.”
” ನಾವು ಗಾಂಧಿಜಿ ಅವರನ್ನು ಪೂರ್ಣ ಅರ್ಥ ಮಾಡಿಕೊಂಡರೆ ಮಾತ್ರ ಜೀವನಕ್ಕೆ ಪರಿಪೂರ್ಣತೆ ಇರುತ್ತದೆ. ಕೇವಲ ಗಾಂಧಿ ಬಗ್ಗೆ ಮಾತನಾಡಿದರಷ್ಟೇ ಸಾಲದು, ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.”
ಚಂದ್ರೇಗೌಡ, ನಿವೃತ್ತ ಪ್ರಾಧ್ಯಾಪಕ
” ಗಾಂಧಿಜಿ ಕುರಿತಾದ ಅಪರೂಪದ ಕಾರ್ಯಕ್ರಮ ಮೈಸೂರಿನಲ್ಲಿ ನಡೆದಿರುವುದು ಮೌಲ್ಯವನ್ನು ಬಿತ್ತಿದಂತಾಗಿದೆ. ಪ್ರಸ್ತುತ ಸಮಾಜಕ್ಕೆ ಅಂಬೇಡ್ಕರ್ ಹಾಗೂ ಗಾಂಧಿ ವಿಚಾರಗಳು ಅಗತ್ಯವಿದೆ.”
ದೇವಗಳ್ಳಿ ಸೋಮಶೇಖರ್, ಸಂಚಾಲಕರು, ದಸಂಸ ರಾಜ್ಯ ಘಟಕ
ಬೆಂಗಳೂರು: ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಲೋಕಸಭಾ ಸ್ಥಾನಗಳ ಸಂಖ್ಯೆ…
ನವದೆಹಲಿ: ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಯನ್ನು ವಿರೋಧಿಸುವುದಾಗಿ ಇಂಡಿಯಾ ಮೈತ್ರಿಕೂಟ ಘೋಷಿಸಿದೆ. ನವೆಂಬರ್ 30ರಂದು ಲೋಕಸಭೆಯಲ್ಲಿ ಮಸೂದೆ ಚರ್ಚೆಗೆ ಬರುವ ನಿರೀಕ್ಷೆಯಿದೆ. ಲೋಕಸಭೆಯ…
ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವ ಭರವಸೆಯನ್ನು ಈಡೇರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು…
ನವದೆಹಲಿ: ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಡಿಎಂಕೆ ಬೆಂಬಲ ಘೋಷಿಸಿದೆ. ಮುಂದಿನ ವಾರ ಸಂಸತ್ತಿನಲ್ಲಿ ಈ ಮಸೂದೆಯನ್ನು ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ…
ಇಂದಿನ ದುಬಾರಿ ಕಾಲದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವೈಭವದ ಮದುವೆಗಳನ್ನು ನಡೆಸಬೇಕೆ ಎಂಬ ಪ್ರಶ್ನೆ ಏಳುತ್ತದೆ. ಮದುವೆ ಹೇಗೆ…