ಯುಎಇ ಅಧ್ಯಕ್ಷ ಶೇಕ್ ಖಲೀಫಾ ನಿಧನ
ದುಬೈ : ಅಬುದಾಬಿ ದೊರೆ ಮತ್ತು ಯುಎಇ ಅಧ್ಯಕ್ಷ ಅಬು ದಾಬಿ ದೊರೆ ಶೇಕ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಇಂದು ನಿಧನರಾಗಿದ್ದಾರೆ. ಎಂದು ದುಬೈನ ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ದುಬೈನ ದೊರೆಯಾಗಿ ಶೇಕ್ ಖಲೀಫಾ ರವರು 2004 ರಲ್ಲಿ ಸೇವೆ ಸಲ್ಲಿಸಿದ್ದರು. ಶೇಕ್ ನಿಧನಕ್ಕೆ ಸಂತಾಪ ಸೂಚಿಸಿ, ಸಂತಾಪದ ಸೂಚಕವಾಗಿ ಬಾವುಟಗಳನ್ನು ಅರ್ಧಕ್ಕೆ ಇಳಿಸಲಾಗಿದೆ. ಸಚಿವಾಲಯದ ಕಛೇರಿಗಳು, ಸರ್ಕಾರಿ ಇಲಾಖೆಯ ಬ್ಯಾಂಕ್, ಸ್ಥಳೀಯ ಸಂಸ್ಥೆಗಳು ಇಂದಿನಿಂದ (ಶುಕ್ರವಾರ) 40 ದಿನಗಳ ಕಾಲ ಸೇವೆಯನ್ನು ಸ್ಥಗಿತಗೊಳಿಸುವ ಮೂಲಕ ಶೋಕಾಚರಣೆಯನ್ನು ಘೋಷಿಸಿದೆ.