ರಸ್ತೆಯಲ್ಲಿ ಅಂಟ್‌ಕಾಯಿ ಇದ್ರೆ ಬೈಕ್ ಸ್ಕಿಡ್ ಗ್ಯಾರಂಟಿ! ಹುಷಾರ್

ಬೆಂಗಳೂರು: ಮಳೆ ಬಂದ ಬಳಿಕ ಟಾರ್ ರಸ್ತೆಯ ಮೇಲೆ ಇರುವ ಅಂಟ್ ಕಾಯಿ ಮೇಲೆ ಬೈಕ್ ಸವಾರಿ ಮಾಡಲು ಹೋಗುವ ವಾಹನ ಸವಾರರೇ ಹುಷಾರ್.

ಇದು ಬೆಂಗಳೂರಿನ ಕೆಜಿ ರಸ್ತೆ,ಪೀಣ್ಯ ರಸ್ತೆಯ ಸಂಚಾರಿ ಪೊಲೀಸರು ವಾಹನ ಸವಾರರಲ್ಲಿ ಮಾಡಿಕೊಂಡ ಮನವಿಯಾಗಿದೆ. ಬಿರು ಬಿಸಿಲಲ್ಲಿ ಮಳೆ ಬಂದ ಹಿನ್ನಲೆ ರಸ್ತೆ ಮೇಲೆ ಬಿದ್ದ ಅಂಟ್ ಕಾಯಿಯಿಂದ ವಾಹನಗಳು ಸ್ಕಿಡ್ ಆಗಿ ರಸ್ತೆಯಲ್ಲಿ ಬೈಕ್ ಅಪಘಾತ ಹೆಚ್ಚಾಗಿದೆ. ಅಂಟ್ ಕಾಯಿ ಮೇಲೆ ಮಳೆ ನೀರು ಬಿದ್ದ ಹಿನ್ನಲೆ ಸಂಪೂರ್ಣ ರಸ್ತೆಯೇ ಜಾರಲಾರಂಭಿಸಿದೆ. ಇದರಿಂದ ವಾಹನಗಳು ಕಂಟ್ರೋಲ್‌ಗೆ ಸಿಗದೆ ಪಲ್ಟಿಯಾಗಿವೆ.

ಕೆಜಿ ರಸ್ತೆ, ಪೀಣ್ಯ ರಸ್ತೆಯಲ್ಲಿ ವಾಹನ ಸವಾರರು ಸ್ಕಿಡ್ ಆಗಿ ಅಪಘಾತ ಆಗುತ್ತಿರುವುದನ್ನು ಗಮನಿಸಿದ ಟ್ರಾಫಿಕ್ ಪೊಲೀಸರು ರಸ್ತೆ ಮದ್ಯ ನಿಂತು ಸವಾರರಿಗೆ ನಿದಾನ ಚಲಿಸುವಂತೆ ಮನವಿ ಮಾಡಿದ ದೃಶ್ಯಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

 

× Chat with us