ಹನೂರು: ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ

ಹನೂರು: ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ರಾಮಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲ್ಲೂಕಿನ ಪುಷ್ಪಪುರ ಗ್ರಾಮದ ವೆಂಕಟಪ್ಪ ಹಾಗೂ ಮಗ ಪ್ರಭು ಬಂಧಿತರು.

ಕೌದಳ್ಳಿ ಸಮೀಪದ ಪುದನಗರ ಗ್ರಾಮದ ಬಸ್ ನಿಲ್ದಾಣದ ಬಳಿ ಗಾಂಜಾ ಸಾಗಿಸುತ್ತಿರುವುದಾಗಿ ದೊರೆತ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಡಿವೈಎಸ್ಪಿ ನಾಗರಾಜ್, ರಾಮಾಪುರ ಪೊಲೀಸ್ ಇನ್‌ಸ್ಪೆಕ್ಟರ್ ನಂಜುಂಡಸ್ವಾಮಿ ನೇತೃತ್ವದಲ್ಲಿ ಸಿಬ್ಬಂದಿ ನಾಗೇಂದ್ರ, ಎಸ್.ಎಲ್.ಲಿಂಗರಾಜು, ಮಂಜುನಾಥ್, ಸುರೇಶ್ ಸಲ್ಮಾನ್, ಶಿವಪ್ಪ ಲವಾಣಿ, ರವಿಪ್ರಸಾದ್, ಚಾಲಕರಾದ ನಾಗರಾಜು ದಾಳಿ ನಡೆಸಿ ಆರೋಪಿಗಳಿಂದ 920 ಗ್ರಾಂ ಒಣ ಗಾಂಜಾ, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.