ಟೊಮೆಟೊ ಜ್ವರ ಆತಂಕ ಬೇಡ: ಡಾ.ಕೆ.ಸುಧಾಕರ್‌

ಬೆಂಗಳೂರು : ಕೇರಳ ರಾಜ್ಯದಲ್ಲಿ 5 ವರ್ಷದೊಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಟೊಮೆಟೊ ಜ್ವರ ಜ್ವರದ ಬಗ್ಗೆ ರಾಜ್ಯದ ಗಡಿ ಜಿಲ್ಲೆಗಳು ಸೇರಿದಂತೆ ಸಾಕಷ್ಟು ಪೋಷಕರಲ್ಲಿ ಆತಂಕವನ್ನು ಉಂಟುಮಾಡುತ್ತಿರುವ ಹಿನ್ನೆಲೆ ಇಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಮಾತನಾಡಿದ್ದು ಚಾಮರಾಜನಗರದಲ್ಲಿರುವ ಕೇರಳ ಗಡಿಭಾಗದಲ್ಲಿ ತೀವ್ರವಾದ ಕಟ್ಟೆಚ್ಚರವನ್ನು ವಹಿಸಲು ಕ್ರಮ ಕೈಗೊಳ್ಳಲಾಗಿದ್ದು ಈ ಬಗ್ಗೆ ಆತಂಕಪಡುವ ಅಗತ್ಯವಲ್ಲ ಎಂದು ಹೇಳಿದ್ದಾರೆ.