ಮೈಸೂರು : ಟೊಮ್ಯಾಟೋ ಸೋಂಕು ಹರಡದಂತೆ ಕ್ರಮ

ಮೈಸೂರು : ಟೊಮ್ಯಾಟೋ ಸೋಂಕು ಹರಡದಂತೆ ಮೈಸೂರಿನಲ್ಲಿ ಸೂಕ್ತ ಕ್ರಮ ವಹಿಸುವ ಸಲುವಾಗಿ ಗಡಿ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್‌. ಪ್ರಸಾದ್‌ ತಿಳಿಸಿದ್ದಾರೆ.

ಆರೋಗ್ಯ ಇಲಾಖೆಯ ಡಾ.ಕೆ.ಸುಧಾಕರ್‌ ಅವರು ನಡೆಸಿದ ವೀಡಿಯೋ ಕಾನ್ಪರೆನ್ಸ್‌ ಮೂಲ ಮಾತನಾಡಿದ ಅವರು ಕೇರಳದಲ್ಲಿ ಟೊಮ್ಯಟೋ  ಸೋಂಕು ಕಾಣಿಸಿಕೊಂಡಿದ್ದಾರದೂ ಗಡಿ ಭಾಗದಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಸೋಂಕು ಹೆಚ್ಚಾದರೆ ಬಾವಲಿ ಚೆಕ್‌ ಪೋಸ್ಟ್‌ ಮೂಲಕ ಬರುವವರನ್ನು ತಪಾಸಣೆ ಮಾಡಲು ಹೀಗಾಗಲೇ ಕ್ರಮ ಕೈಗೊಳ್ಳಲಾಗುವುದು, ಮುಂದಿನ ದಿನಗಳಲ್ಲಿ ಚೆಕ್‌ ಪೋಸ್ಟ್‌ನಲ್ಲಿ ಆರೋಗ್ಯ ಸಿಬ್ಬಂದಿಗಳನ್ನು ನಿಯೋಜಿಸಿ ತಪಾಸಣೆ ಮಾಡಲಾಗುವುದು ಎಂದು ಮೈಸೂರಿನ  ಡಿಹೆಚ್‌ಒ ತಿಳಿಸಿದ್ದಾರೆ.