ಮೈಸೂರು: ಕಚುವಿನಹಳ್ಳಿ ಅರಣ್ಯ ಪ್ರದೇಶದಲ್ಲಿ ಹುಲಿ ಸಾವು

ಮೈಸೂರು: ಜಿಲ್ಲೆಯ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಗಂಡು ಹುಲಿ ಮೃತದೇಹ ಪತ್ತೆಯಾಗಿದೆ.

ಹುಣಸೂರು ವನ್ಯಜೀವಿ ವಲಯದ ಕಚುವಿನಹಳ್ಳಿ ಶಾಖೆಯ ಸಿಬ್ಬಂದಿ ಸಾಕಾನೆಗಳ ಸಹಾಯದಿಂದ ಕೂಂಬಿಂಗ್ ಕಾರ್ಯಾಚರಣೆ ಮಾಡುವಾಗ ಕಚುವಿನಹಳ್ಳಿ ಶಾಖೆಯ ಕಲ್ಲಾರಕೆರೆ ಹಿಂಭಾಗದಲ್ಲಿ ಹುಲಿ ಮೃತಪಟ್ಟಿರುವುದನ್ನು ನೋಡಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಮೃತ ಹುಲಿಯ ದೇಹದ ಮಾದರಿಗಳನ್ನು ಸಿಸಿಎಂಬಿಗೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲಿಂದ ವರದಿ ಬಂದ ನಂತರ ಹುಲಿಯ ಸಾವಿಗೆ ನಿಖರ ಕಾರಣ ತಿಳಿಯಲಿದೆ.

× Chat with us