ʼಒಡೆಯʼನ ಮನವಿ ಓಗೊಟ್ಟು ದತ್ತು ಸ್ವೀಕರಿಸಿದ ಅಭಿಮಾನಿಗಳು: ಒಂದೇ ದಿನಕ್ಕೆ ಸಾಫ್ಟ್ವೇರ್ ಕ್ರ್ಯಾಶ್
ಬೆಂಗಳೂರು: ನಟ ಹಾಗೂ ಅರಣ್ಯ ಇಲಾಖೆಯ ರಾಯಭಾರಿಯೂ ಆಗಿರುವ ದರ್ಶನ್ ತೂಗುದೀಪ ಅವರು ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವಂತೆ ಮಾಡಿದ್ದ ಮನವಿಗೆ ಓಗೊಟ್ಟು ಸಾವಿರಾರು ಅಭಿಮಾನಿಗಳು ದತ್ತು ಸ್ವೀಕರಾರಕ್ಕೆ ಮುಂದಾಗಿದ್ದಾರೆ.
ಒಂದೇ ದಿನಕ್ಕೆ ಈ ಪರಿ ಮಂದಿ ಲಾಗ್ ಇನ್ ಆದ ಪರಿಣಾಮ ಸಾಫ್ಟ್ ವೇರ್ ಕ್ರ್ಯಾಶ್ ಆಗಿ ಒಟಿಪಿ ಸಮಸ್ಯೆ ಆಗಿದೆ ಎಂದು ಸರ್ಕಾರ ಹೇಳಿದೆ.
ದರ್ಶನ್ ತೂಗುದೀಪ ಅವರ ಮನವಿ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ಸಾರ್ವಜನಿಕರು ರೂ. 50ರಿಂದ ಒಂದು ಲಕ್ಷ ರೂ. ವರೆಗೆ ದೇಣಿಗೆ ನೀಡಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು ತಾಂತ್ರಿಕ ಸಮಸ್ಯೆಯಿಂದ ಸಾಫ್ಟ್ವೇರ್ ಸಮಸ್ಯೆಯಾಗಿದ್ದು ಒಟಿಪಿ ಸಮಸ್ಯೆಯಾಗಿದೆ ಅದನ್ನು ಸರಿಪಡಿಸಲಾಗುವುದು ಅಲ್ಲಿಯವರೆಗೆ et3,psmedia.in ಗೆ ಲಾಗಿನ್ ಆಗಿ ದೇಣಿಗೆ ನೀಡಬಹುದು ಎಂದು ಕರ್ನಾಟ ಮೃಗಾಲಯಗಳ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಲಾಗಿದೆ.
ದೇಣಿಗೆ ಸಂಗ್ರಹ:
- ಮೈಸೂರು ಮೃಗಾಲಯ: 4,31,309
- ಶಿವಮೊಗ್ಗ ಮೃಗಾಲಯ: 42,474
- ಬೆಳಗಾವಿ ಮೃಗಾಲಯ: 10,100
- ಕಲ್ಬುರ್ಗಿ ಮೃಗಾಲಯ: 15,800
- ಗದಗ ಮೃಗಾಲಯ: 26,650
- ದಾವಣಗೆರೆ ಮೃಗಾಲಯ: 27,950
- ಹಂಪಿ ಮೃಗಾಲಯ: 43550
- ಚಿತ್ರದುರ್ಗ ಮೃಗಾಲಯ: 14250
- ಬನ್ನೇರುಘಟ್ಟ ಮೃಗಾಲಯ: 246900
————————————–
ಒಟ್ಟು: 8,58,983