ಹೆದರಿಸಲು ಹೋದಾಗ ಬೆದರಿ ಬಾವಿಗೆ ಬಿದ್ದ ನಾಗಪ್ಪ… ಮುಂದೇನಾಯ್ತು?

ವರುಣಾ: ಇಲ್ಲಿನ ಹದಿನಾರು ಗ್ರಾಮದ ಮಹದೇವ ಸ್ವಾಮಿ ಎಂಬುವವರ ಮನೆಯಲ್ಲಿ ನಾಗರ ಹಾವೊಂದು ಕಾಣಿಸಿಕೊಂಡಿದ್ದು, ಅದನ್ನು ಬೆದರಿಸಲು ಹೋದಾಗ ಹೆದರಿ ಬಾವಿಗೆ ಬಿದ್ದಿದೆ.

ಬಾವಿಯಲ್ಲಿ ಬಿದ್ದ ನಾಗರ ಹಾವನ್ನುಕಂಡ ಮನೆ ಮಂದಿ ಭಯಭೀತರಾಗಿ ರಾತ್ರೋರಾತ್ರಿ ನಂಜನಗೂಡಿನ ಗೋಳೂರು ಗ್ರಾಮದ ಸ್ನೇಕ್‌ ಬಸವರಾಜು ಅವರಿಗೆ ವಿಷಯ ತಿಳಿಸಿದರು.

ಬುಧವಾರ ಬೆಳಗ್ಗೆ ಗ್ರಾಮಕ್ಕೆ ಆಗಮಿಸಿದ ಬಸವರಾಜು ಬಾವಿಯಲ್ಲಿ ಬಿದ್ದು ಮೇಲೆ ಬರಲಾರದೆ ಒದ್ದಾಡುತ್ತಿದ್ದ ಹಾವನ್ನು ಮೇಲೆತ್ತಿ ರಕ್ಷಿಸಿದ್ದಾರೆ.

× Chat with us