ಟೆಲಿಗ್ರಾಂ: ವಿಡಿಯೊ ಕಾಲ್‌ನಲ್ಲಿ 1,000 ಮಂದಿ ಭಾಗವಹಿಸಲು ಅವಕಾಶ

ಬೆಂಗಳೂರು: ಗ್ರೂಪ್ ವಿಡಿಯೊ ಕರೆಗಳಲ್ಲಿ 1,000 ಮಂದಿ ಭಾಗವಹಿಸುವ ಅವಕಾಶವನ್ನು ಟೆಲಿಗ್ರಾಂ ಬಳಕೆದಾರರಿಗೆ ಕಲ್ಪಿಸುತ್ತಿದೆ.

ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಂ ಹೊಸ ಅಪ್‌ಡೇಟ್ ಬಿಡುಗಡೆ ಮಾಡಿದ್ದು, ವಿಡಿಯೊ ಕರೆಯಲ್ಲಿ 30 ಜನರು ಮಾತುಕತೆ ನಡೆಸಬಹುದು. ಆದರೆ ಅದೇ ಕರೆಯನ್ನು 1,000 ಮಂದಿ ವೀಕ್ಷಿಸಲು ಅವಕಾಶವಿದೆ. ಅಲ್ಲದೇ, ವಿಡಿಯೊ ಮೆಸೇಜ್ ಅನ್ನು ರೆಕಾರ್ಡ್ ಕೂಡ ಮಾಡಿಕೊಳ್ಳಬಹುದು.

ಸ್ಕ್ರೀನ್ ಶೇರಿಂಗ್ ಆಯ್ಕೆ ಹೊಸ ಗ್ರೂಪ್ ವಿಡಿಯೊ ಕಾಲ್ಸ್ 2.0 ಮೂಲಕ ಲಭ್ಯವಿದೆ. ಜತೆಗೆ ಟೆಲಿಗ್ರಾಂ ಆ್ಯಪ್‌ನಲ್ಲಿರುವ ಮಿಡಿಯಾ ಎಡಿಟರ್ ಮೂಲಕ ಬಳಕೆದಾರರು ಫೋಟೊ ಮತ್ತು ವಿಡಿಯೊಗಳಿಗೆ ಚಿತ್ರ, ಸ್ಟಿಕರ್ಸ್ ಮತ್ತು ಟೆಕ್ಸ್ಟ್ ಹಾಕುವ ಮೂಲಕ ಅಲಂಕರಿಸಲು ಅನುವು ಮಾಡಿಕೊಡುತ್ತದೆ.

× Chat with us