ಟೆಕ್‌

ವಾಟ್ಸಾಪ್‌ಗೆ ಈಗ ಇನ್ನಷ್ಟು ಭದ್ರತೆ

ಪ್ರಪಂಚದಾದ್ಯಂತ ಹೆಚ್ಚಿನ ಜನರು ಬಳಸುವ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಕಂಪೆನಿಯು ತನ್ನ ಸೆಕ್ಯೂರಿಟಿಯನ್ನು ಮತ್ತಷ್ಟು ಬಲಪಡಿಸುತ್ತಿದೆ. ನೀವು ವಾಟ್ಸಾಪ್ ಬಳಕೆದಾರರೇ? ನೀವು ನಿಮ್ಮ ವಾಟ್ಸಾಪ್ ಹೆಚ್ಚು ಸೆಕ್ಯೂರಿಟಿಯಿಂದ ಕೂಡಿರಬೇಕು ಎಂದು ಬಯಸುವುದಾದರೆ ಇಲ್ಲಿದೆ ನೋಡಿ ವ್ಯಾಟ್ಸಾಪ್‌ನ ಹೊಸ ಫೀಚರ್.

ವಾಟ್ಸಾಪ್ ತನ್ನ ಸೆಕ್ಯೂರಿಟಿ ಫೀಚರ್‌ಗಳನ್ನು ದಿನೇ ದಿನೇ ಬಲಪಡಿಸುತ್ತಿದೆ. ಈಗ ಮತ್ತೊಂದು ಅತ್ಯಾಧುನಿಕ ಸೆಕ್ಯೂರಿಟಿ ಫೀಚರ್ ಅನ್ನು ಅಭಿವೃದ್ಧಿಪಡಿಸಿದೆ. ಅದು “ಪಾಸ್‌ಕೀ ಸಪೋರ್ಟ್’.

ಮೆಟಾ ಕಂಪೆನಿ ಈ ಫೀಚರ್ ಮೇಲೆ 2024ರ ಜನವರಿ ತಿಂಗಳಲ್ಲಿ ಕಾರ್ಯ ಆರಂಭಿಸಿತು. ನಂತರದ ಮೂರು ತಿಂಗಳು ಬೆಟಾ ಟೆಸ್ಟಿಂಗ್ ಮಾಡುವ ಮೂಲಕ, ಈಗ ವಾಟ್ಸಾಪ್ ಬಳಕೆದಾರರಿಗೆ ಜಗತ್ತಿನಾದ್ಯಂತ ಲಭ್ಯಗೊಳಿಸಿದೆ. ಅಂದಹಾಗೆ ‘ಪಾಸ್‌ಕೀ ಸಪೋರ್ಟ್’ ಫೀಚರ್ ಐಫೋನ್ ಬಳಕೆದಾರರಿಗೆ ಲಭ್ಯವಿದೆ. ಆದರೆ ಇದಕ್ಕೂ ಮೊದಲೇ ಆಂಡ್ರಾಯ್ಡ್ ಅಪ್ಲಿಕೇಶನ್ ಬಳಕೆದಾರರಿಗೂ ಈ ಫೀಚರ್ ಅಳವಡಿಸಲಾಗಿದೆ.

ಈ ಸೆಕ್ಯೂರಿಟಿ ಯಾವ ಐಓಎಸ್ ವರ್ಷನ್‌ನಲ್ಲಿ ಲಭ್ಯವಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಆದರೆ ಈ ಹಿಂದಿನ ಒಂದು ವರದಿ ಪ್ರಕಾರ ಐಒಎಸ್ 17 ಮತ್ತು ಅದರ ನಂತರದ ವರ್ಷನ್‌ಗಳಲ್ಲಿ ‘ಪಾಸ್‌ಕೀ ಸಪೋರ್ಟ್’ ವರ್ಕ್
ಆಗಲಿದೆ ಎಂದು ಹೇಳಲಾಗಿದೆ.

Passkey ಹೇಗೆ ಭದ್ರತೆಯನ್ನು ಹೆಚ್ಚಿಸುತ್ತದೆ? ಎಸ್‌ಎಂಎಸ್‌ ಕೋಡ್‌ಗೆ ಹೋಲಿಸಿದರೆ, ಪಾಸ್‌ ಕೀ ಒಂದು ಅತ್ಯುತ್ತಮ ಭದ್ರತಾ ಫೀಚರ್ ಆಗಿದೆ. ಇದೊಂದು ಅಥೆಂಟಿಕೇಷನ್ ವಿಧಾನವಾಗಿದೆ. ಇದನ್ನು ಫಿಡೊ ಅಲೈಯನ್ಸ್ ನಿಂದ ಅಭಿವೃದ್ಧಿಪಡಿಸಿದ್ದು, ದೊಡ್ಡ ದೊಡ್ಡ ಟೆಕ್ ದೈತ್ಯ ಕಂಪೆನಿಗಳಾದ ಆ್ಯಪಲ್, ಗೂಗಲ್, ಮೈಕ್ರೋಸಾಫ್ಟ್ ಕಂಪೆನಿಗಳು ಅನುಮೋದಿಸಿವೆ.

ಪಾಸ್‌ಕೀ ಸೆಟ್ ಮಾಡುವುದು ಹೇಗೆ?
• ನಿಮ್ಮ ಐಒಎಸ್ ಡಿವೈಸ್‌ನಲ್ಲಿ ವಾಟ್ಸಾಪ್‌ ಅಪ್ಲಿಕೇಶನ್ ಓಪನ್ ಮಾಡಿ.
• ಸೆಟ್ಟಿಂಗ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ‘Accounts’ ಆಯ್ಕೆ ಮೇಲೆ ಕ್ಲಿಕ್ ಮಾಡಿ.
• ‘Passkeys’ ಆಯ್ಕೆ 4ನೇ ಆಕ್ಷನ್ ಆಗಿ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
• ಮುಂದಿನ ಸ್ಟೀನ್‌ನಲ್ಲಿ ‘Create Passkey’ ಬಟನ್ ಕ್ಲಿಕ್ ಮಾಡಿ.
ನಂತರ ನೀವು Face ID ಅಥವಾ Touch ID ಆಯ್ಕೆಗಳನ್ನು ನೋಡುತ್ತೀರಿ. ಆಯ್ಕೆ ಮಾಡಿ ‘Continue’ ಎಂಬಲ್ಲಿ ಕ್ಲಿಕ್ ಮಾಡಿ.

andolana

Recent Posts

ಓದುಗರ ಪತ್ರ | ರಸ್ತೆ ದುರಸ್ತಿ ಮಾಡಿ

ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆ ಎದುರಿನ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ಎಲ್ಲೆಡೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು,…

1 min ago

ಓದುಗರ ಪತ್ರ | ತಂಬಾಕುಯುಕ್ತ ದಂತ ಉತ್ಪನ್ನಗಳನ್ನು ನಿಷೇಧಿಸಿ

ಇತ್ತೀಚಿನ ದಿನಗಳಲ್ಲಿ, ಟೂತ್ ಪೇಸ್ಟ್‌ಗಳಲ್ಲಿ ತಂಬಾಕು ಮತ್ತು ನಿಕೋಟಿನ್ ಅಂಶ ಪತ್ತೆಯಾಗಿದ್ದು, ಇದರ ಸೇವನೆಯಿಂದ ಹಲವು ಮಕ್ಕಳು ತೊಂದರೆಗೊಳಗಾಗಿರುವ ಘಟನೆಗಳು…

3 mins ago

ಓದುಗರ ಪತ್ರ | ರಸ್ತೆಯಲ್ಲಿ ವಾಯುವಿಹಾರ ಅಪಾಯಕಾರಿ

ಮೈಸೂರಿನ ಕುವೆಂಪುನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ರಸ್ತೆ, ಗದ್ದಿಗೆ ರಸ್ತೆ, ವಿಶ್ವಮಾನವ ಜೋಡಿ ರಸ್ತೆ, ವಿದ್ಯಾರಣ್ಯಪುರಂ -…

5 mins ago

ಶಿವಾಜಿ ಗಣೇಶನ್‌ ಅವರ ದೆಹಲಿ ಕಣ್ಣೋಟ : ಉನ್ನತ ಶಿಕ್ಷಣದಲ್ಲಿ ಬದಲಾವಣೆಗೆ ಕೇಂದ್ರದ ಮುನ್ನುಡಿ

ಆಂದ್ರದಲ್ಲಿನ ಬಿಜೆಪಿ ನೇತೃತ್ವದ ಎನ್‌ ಡಿಎ ಸರ್ಕಾರ ನಾಲ್ಕು ವರ್ಷಗಳ ಹಿಂದೆ ಜಾರಿಗೆ ತಂದ ನೂತನ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ…

12 mins ago

ಬೈಕ್‌ಗೆ ಲಾರಿ ಡಿಕ್ಕಿ : ಸವಾರ ಸಾವು, ಮತ್ತೊರ್ವ ಗಂಭೀರ

ತಿ.ನರಸೀಪುರ : ಬೈಕ್ ಗೆ ಎದುರಿಗೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿಯಾದ ಪರಿಣಾಮ ಯುವಕನೋರ್ವ ಸ್ಥಳದಲ್ಲಿಯೇ ಮೃತಪಟ್ಟಿ ಘಟನೆ ತಾಲೂಕಿನ…

17 mins ago

ಕಾಸರಗೋಡು ಸೀಮೆಯಲ್ಲಿ ನಂಜನಗೂಡು ನರಸಣ್ಣ

ಅಕ್ಷತಾ ರಜೆಗೆ ಊರಿಗೆ ಬಂದಿದ್ದೆ. ಒಂದು ಬದಿಯಲ್ಲಿ ಬಂಟಾಜೆ ಕಾಡಿನಲ್ಲಿ ಹುಟ್ಟಿ ಸೀರೆ ನದಿಯನ್ನು ಸೇರುವ ತೊರೆ. ಇನ್ನೊಂದು ಬದಿಯಲ್ಲಿ…

28 mins ago