ಮಹಿಳಾ ಶಿಕ್ಷಣಕ್ಕೆ ತಾಲಿಬಾನ್ ಅವಕಾಶ: ಆದ್ರೆ ಈ ಕಂಡಿಷನ್ಸ್‌ ಅಪ್ಲೈ!

ಕಾಬೂಲ್: ಅಫ್ಘಾನಿಸ್ತಾನ ಮಹಿಳೆಯರ ಮೇಲೆ ಕಠಿಣ ಕಾನೂನು ವಿಧಿಸುವುದನ್ನು ಮುಂದುವರಿಸಿರುವ ತಾಲಿಬಾನ್ ಸರ್ಕಾರ, ಸ್ತ್ರೀಯರ ಶಿಕ್ಷಣಕ್ಕೆ ಅವಕಾಶ ನೀಡಿದೆಯಾದರೂ ಕೆಲವು ಕಠಿಣ ಷರತ್ತುಗಳನ್ನು ಅನ್ವಯಿಸಿದೆ.

ಮಹಿಳೆಯರು ಸ್ನಾತಕೋತ್ತರ ಪದವಿಗಳನ್ನು ಒಳಗೊಂಡಂತೆ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡಬಹುದು, ಆದರೆ ತರಗತಿ ಕೋಣೆಗಳು ಮಹಿಳೆಯರಿಗೂ ಪುರುಷರಿಗೂ ಪ್ರತ್ಯೇಕವಾಗಿರುತ್ತವೆ. ಇಲ್ಲಿ ಇಸ್ಲಾಮಿಕ್ ಉಡುಗೆ ಕಡ್ಡಾಯವಾಗಿದೆ ಎಂದು ನೂತನ ತಾಲಿಬಾನ್ ಸರ್ಕಾರ ಹೇಳಿದೆ

ಶಿಕ್ಷಣ ಸಚಿವ ಅಬ್ದುಲ್ ಬಾಕಿರ ಹಕ್ಕಾನಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೊಸ ನೀತಿಗಳನ್ನು ಘೋಷಿಸಿದ್ದಾರೆ.

ಮಹಿಳಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಹಿಜಾಬ್ ಧರಿಸುವ ಅಗತ್ಯವಿದೆ.

ಲಿಂಗ ಪ್ರತ್ಯೇಕತೆಯನ್ನೂ ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.

ನಾವು ಸಹ-ಶಿಕ್ಷಣವನ್ನು ಅನುಮತಿಸುವುದಿಲ್ಲ.

ವಿಶ್ವವಿದ್ಯಾನಿಲಯಗಳಲ್ಲಿ ಕಲಿಸಲಾಗುತ್ತಿರುವ ವಿಷಯಗಳನ್ನು ಸಹ ಪರಿಶೀಲಿಸಲಾಗುವುದು ಎಂದ ಹಕ್ಕಾನಿ ತಿಳಿಸಿದರು.

× Chat with us