ಚುನಾವಣಾ ಆಯೋಗದ ಬಗೆಗಿನ ಮದ್ರಾಸ್‌ ಹೈಕೋರ್ಟ್‌ ಟೀಕೆ ತೆಗೆಯಲಾಗಲ್ಲ: ಸುಪ್ರೀಂ

ಹೊಸದಿಲ್ಲಿ: ದೇಶದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗಲು ಚುನಾವಣಾ ಆಯೋಗ ಕಾರಣ ಎಂಬ ಮದ್ರಾಸ್‌ ಹೈಕೋರ್ಟ್‌ನ ಟೀಕೆಗಳನ್ನು ತೆಗೆದು ಹಾಕಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಮದ್ರಾಸ್‌ ಹೈಕೋರ್ಟ್‌ ಮಾಡಿರುವ ಟೀಕೆಗಳನ್ನು ತೆಗೆದು ಹಾಕುವಂತೆ ಚುನಾವಣಾ ಆಯೋಗ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ, ‘ಹೈಕೋರ್ಟ್‌ ನೀಡಿರುವ ಪ್ರತಿಕ್ರಿಯೆ ಕಟುವಾಗಿರಬಹುದು. ಆದರೆ, ಆ ಪ್ರತಿಕ್ರಿಯೆಗಳು ನ್ಯಾಯಾಂಗದ ಆದೇಶದ ಭಾಗವಾಗಿದ್ದು, ಅವುಗಳನ್ನು ಆದೇಶದಿಂದ ತೆಗದು ಹಾಕಲು ಸಾಧ್ಯವಿಲ್ಲʼ ಎಂದು ಹೇಳಿದೆ.