ಕುಮಾರಣ್ಣನಿಗೆ ಸಾಥ್‌ ನೀಡಿ ಎಂದ ನೂತನ ದಂಪತಿ !

ಕೊಪ್ಪಳ: ಇದೀಗ ತಾನೆ ಜೆಡಿಎಸ್‌ ಜನತಾ ಜಲಧಾರೆ ಮಾಡಿ ಹೊಸ ಉತ್ಸಾಹ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಕೊಪ್ಪಳದಲ್ಲಿ ನಡೆದ ವಿವಾಹವೊಂದರಲ್ಲಿ ನೂತನ ವಧು-ವರರು ಕುಮಾರಣ್ಣನಿಗೆ ಬೆಂಬಲ ನೀಡಿ, ರಾಜ್ಯದ ಸಮಗ್ರ ನೀರಾವರಿಗೆ ಆದ್ಯತೆ ನೀಡಿ ಎನ್ನುವ ಪೋಸ್ಟರ್‌ ಹಿಡಿದು ಅಭಿಮಾನ ತೋರಿಸಿದ್ದಾರೆ.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಕಡೇಕೊಪ್ಪದಲ್ಲಿ ನಡೆದ ಮದುವೆಯಲ್ಲಿ ಜಗದೀಶ್‌ ನಿಡಗುಂದಿ ಮಠ ಮತ್ತು ಪೂಜಾ ದಂಪತಿಗಳು ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಜಾರಿಗಾಗಿ 2023ಕ್ಕೆ ಕುಮಾರಣ್ಣನನ್ನು ಬೆಂಬಲಿಸಿ ಎಂದು ಕೋರಿದ್ದಾರೆ. ಇದರಿಂದ ಜೆಡಿಎಸ್‌ ಪಾಳಯದಲ್ಲಿ ಮತ್ತಷ್ಟು ಉತ್ಸಾಹ ಹೆಚ್ಚಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.