ರಾಜ್ಯದಲ್ಲಿ ಬ್ಲಾಕ್‌ ಫಂಗಸ್‌ಗೆ ಉಚಿತ ಚಿಕಿತ್ಸೆ? ಬೌರಿಂಗ್‌ ಆಸ್ಪತ್ರೆಯಲ್ಲಿ ಪ್ರತ್ಯೇಕ ಘಟಕ

ಬೆಂಗಳೂರು: ರಾಜ್ಯದಲ್ಲಿ ಬ್ಲಾಕ್‌ ಫಂಗಸ್‌ ಸೋಂಕಿನ ಬಗ್ಗೆ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೌರಿಂಗ್‌ ಆಸ್ಪತ್ರೆಯಲ್ಲಿ ಪ್ರತ್ಯೇಕ ಚಿಕಿತ್ಸಾ ವಿಭಾಗವನ್ನು ಆರಂಭಿಸಲಾಗಿದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್‌ ತಿಳಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬ್ಲಾಕ್‌ ಫಂಗಸ್‌ ಎಲ್ಲರನ್ನೂ ಕಾಡುವುದಿಲ್ಲ, ಅದು ಮುಧುಮೇಹದಿಂದ ಬಳಲುತ್ತಿರುವವರು, ಸ್ಟಿರಾಯ್ಡ್‌ ಬಳಸುವವರಿಗೆ ಮಾತ್ರ ಬಾಧಿಸುತ್ತದೆ. ಸ್ಟಿರಾಯ್ಡ್‌ ಹೆಚ್ಚು ಬಳಕೆಯಿಂದ ಈ ಸೋಂಕು ಕಾಣಿಸಿಕೊಳ್ಳುತ್ತದೆ. ಹೀಗಾಗಿ ನಾಳೆ ನೇತ್ರ ತಜ್ಞರು ಹಾಗೂ ಮಧುಮೇಹ ತಜ್ಞರ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು.

ಬ್ಲಾಕ್‌ ಫಂಗಸ್‌ಗೆ ಉಚಿತ ಚಿಕಿತ್ಸೆ ನೀಡುವ ಕುರಿತು ಸುಧಾಕರ್‌ ಅವರು ಸಿಎಂ ಜೊತೆ ಚರ್ಚೆ ನಡೆಸಲಿದದಾರೆ.

ಸ್ಟಿರಾಯ್ಡ್‌ ನೀಡುವುದು ತಪ್ಪಲ್ಲ: ಯೂತ್‌ ಕಾಂಗ್ರೆಸ್‌ ಮೆಡಿಕಲ್‌ ಕಿಟ್‌ನಲ್ಲಿ ಸ್ಟಿರಾಯ್ಡ್‌ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಧಾಕರ್‌, ಸ್ಟಿರಾಯ್ಡ್‌ ನೀಡುವುದು ತಪ್ಪಲ್ಲ. ಆದರೆ ಸರ್ಕಾರ ಸೂಚಿಸಿರುವ ಔಷಧವನ್ನೇ ನೀಡಬೇಕು ಎಂದು ತಿಳಿಸಿದರು.