ಜನರ ಸಂಚಾರಕ್ಕೆ ತೊಂದರೆ ಕೊಡುತ್ತಿದ್ದ ಬೀಡಾಡಿ ಜಾನುವಾರುಗಳು ಮೈಸೂರಿಗೆ

ಕೊಡಗು: ಜನರ ಸಂಚಾರಕ್ಕೆ ತೊಂದರೆಯಾಗಿ ಪರಿಣಮಿಸಿದ್ದ ಬೀಡಾಡಿ ಜಾನುವಾರುಗಳನ್ನು ಮಡಿಕೇರಿ ನಗರಸಭೆಯವರು ಕಾರ್ಯಾಚರಣೆ ನಡೆಸಿ ಮೈಸೂರಿನ ಗೋಶಾಲೆಗೆ ಸಾಗಿಸಿದರು.

ಆರೋಗ್ಯ ನಿರೀಕ್ಷಕರ ಸಮ್ಮುಖದಲ್ಲಿ ಗೋಶಾಲೆಗೆ ಜಾನುವಾರುಗಳನ್ನು ಮುಂಜಾನೆ ನಗರಕ್ಕೆ ಸಾಗಿಸಲಾಯಿತು.

ಬೀಡಾಡಿ ಜಾನುವಾರುಗಳಿಂದ ತೊಂದರೆಯಾಗುತ್ತಿದೆ ಎಂದು ಜನರು ದೂರಿದ್ದರು. ಈ ಹಿನ್ನೆಲೆಯಲ್ಲಿ ರಾತ್ರಿ ಕಾರ್ಯಾಚರಣೆ ನಡೆಸಿದ ನಗರಸಭೆಯವರು ಜಾನುವಾರುಗಳನ್ನು ಗೋಶಾಲೆಗೆ ಸಾಗಿಸಲು ಕ್ರಮವಹಿಸಿದ್ದಾರೆ. ನಗರಸಭೆ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ನಗರಸಭೆ ಸಿಬ್ಬಂದಿ, ಪೌರಕಾರ್ಮಿಕರು, ಸ್ಥಳೀಯರ ಭಾಗಿಯಾಗಿದ್ದರು.

× Chat with us