ರಾಜ್ಯ

ನಾಯಕತ್ವ ಬಗ್ಗೆ ಯತೀಂದ್ರ ಹೇಳಿಕೆ: ಇದಕ್ಕೆ ಸಿಎಂ ಉತ್ತರಿಸಲಿ ಎಂದ ಡಿ.ಕೆ.ಶಿವಕುಮಾರ್‌

ಬೆಳಗಾವಿ: ರಾಜ್ಯದ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ. ಹೈಕಮಾಂಡ್‌ ಕ್ಲಿಯರ್‌ ಆಗಿ ಹೇಳಿದೆ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೇ ಪ್ರತಿಕ್ರಿಯೆ ಕೊಡಲಿ ಎಂದು ಮಾರ್ಮಿಕವಾಗಿ ಉತ್ತರ ನೀಡಿದ್ದಾರೆ.

ಈ ಕುರಿತು ಬೆಳಗಾವಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವರ ಹೇಳಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಉತ್ತರ ಕೊಡುತ್ತಾರೆ ಎಂದು ಹೇಳಿದರು.

ಇದನ್ನು ಓದಿ : ಜೀವಾವಧಿ ಶಿಕ್ಷೆಯಿಂದ ಪಾರಾಗಲು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಪ್ರಜ್ವಲ್‌ ರೇವಣ್ಣ

ದ್ವೇಷ ಭಾಷಣ ತಡೆ ವಿಧೇಯಕಕ್ಕೆ ಬಿಜೆಪಿ ವಿರೋಧ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ದ್ವೇಷ ಭಾಷಣ ತಡೆ ವಿಧೇಯಕ ಮಂಡನೆಗೆ ಬಿಜೆಪಿ ವಿರೋಧ ಮಡುತ್ತಿದೆ. ದ್ವೇಷ ಭಾಷಣ ಮಾಡುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಜಾತಿ ಜಾತಿಗೆ, ಧರ್ಮ ಧರ್ಮಗಳಿಗೆ ವೈಯಕ್ತಿಕ ನಿಂದನೆ ಮಾಡುವವರಲ್ಲಿ ಅವರು ಮೊದಲಿಗರು. ಸಂವಿಧಾನದ ಪ್ರಕಾರ ಬಿಜೆಪಿಯವರು ಮೊದಲು ನಡೆದುಕೊಳ್ಳಲಿ. ಸಂವಿಧಾನ ರಕ್ಷಣೆಗೆ ವಿಧೇಯಕ ಮಂಡನೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಆಂದೋಲನ ಡೆಸ್ಕ್

Recent Posts

ಇರಾನ್-‌ಇಸ್ರೇಲ್‌ ಸಂಘರ್ಷ: ನಾಳೆ ಸರ್ವಪಕ್ಷ ಸಭೆ ಕರೆದ ಕೇಂದ್ರ ಸರ್ಕಾರ

ನವದೆಹಲಿ: ಇರಾನ್‌-ಇಸ್ರೇಲ್‌ ಸಂಘರ್ಷ ಮುಂದುವರಿದಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಾಳೆ ಸರ್ವ ಪಕ್ಷಗಳ ಸಭೆ ಕರೆದಿದ್ದು, ವಿರೋಧ ಪಕ್ಷಗಳಿಗೆ ಪರಿಸ್ಥಿತಿ…

10 mins ago

ಗುಂಡ್ಲುಪೇಟೆ| ಶಿವಪುರದ ತೋಟದ ಮನೆ ಬಳಿ ಚಿರತೆ ಪ್ರತ್ಯಕ್ಷ: ರೈತರಲ್ಲಿ ಆತಂಕ

ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನ ಶಿವಪುರ ಸಮೀಪದ ಕಲ್ಲುಕಟ್ಟೆ ಬಳಿಯ ಜಮೀನಿನ ತೋಟದ ಮನೆಯ ಬಳಿ…

26 mins ago

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಿ: ಶಾಸಕ ಎಂ.ಆರ್.‌ಮಂಜುನಾಥ್‌ ಸೂಚನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ 25 ಗ್ರಾಮ ಪಂಚಾಯಿತಿಗಳ ಪೈಕಿ ಯಾವುದೇ ಗ್ರಾಮಗಳಲ್ಲಿಯೂ ಕುಡಿಯುವ…

34 mins ago

ತಮಿಳುನಾಡು ವಿಧಾನಸಭಾ ಚುನಾವಣೆ: ಗಡಿಭಾಗದ ಚೆಕ್ ಪೋಸ್ಟ್‌ಗಳಿಗೆ ಡಿವೈಎಸ್ಪಿ ಭೇಟಿ, ಪರಿಶೀಲನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು : ನೆರೆಯ ತಮಿಳುನಾಡು ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು,…

42 mins ago

ಗಲ್ಲಾಪೆಟ್ಟಿಗೆಯಲ್ಲಿ ಧುರಂಧರ್-‌2 ಅಬ್ಬರ: 800 ಕೋಟಿ ಕ್ಲಬ್‌ ಸೇರುವತ್ತ ಓಟ

ಯಶಸ್ವಿ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿರುವ ರಣವೀರ್‌ ಸಿಂಗ್‌ ಅಭಿನಯದ ಧುರಂಧರ್-‌2 ದಾಖಲೆಗಳನ್ನು ಮುರಿಯುತ್ತಿದೆ. ನಾಲ್ಕು ದಿನಗಳ ಹಿಂದೆ ಬಿಡುಗಡೆಯಾದ ಚಿತ್ರವು ಬಾಕ್ಸಾಫೀಸ್‌ನಲ್ಲಿ…

1 hour ago

ಅಮೇರಿಕಾದ ಜೊತೆ ಶಾಂತಿ ಮಾತುಕತೆಗೆ ಒಪ್ಪಿಕೊಂಡ ಮೊಜ್ತಬಾ ಖಮೇನಿ?

ವಾಷಿಂಗ್ಟನ್:‌ ಅಮೇರಿಕಾದ ಜೊತೆ ಮಾತುಕತೆ ನಡೆಸಲು ಇರಾನಿನ ಹೊಸ ಸರ್ವೋಚ್ಛ ನಾಯಕ ಮೊಜ್ತಬಾ ಖಮೇನಿ ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.…

1 hour ago