ರಾಜ್ಯ

ಮೈಸೂರಿನಲ್ಲಿ ಸಾಗುವಳಿ ಚೀಟಿ ಇರುವವರಿಗೆ ದಾಖಲಾತಿ ನೀಡುತ್ತಿಲ್ಲ, ಬದಲಿಗೆ ಅಕ್ರಮ ನಡೆಯುತ್ತಿವೆ: ಯತೀಂದ್ರ ಸಿದ್ದರಾಮಯ್ಯ

ಬೆಂಗಳೂರು: ಮೈಸೂರು ಜಿಲ್ಲೆಯಲ್ಲಿ ಬಗರ್‌ ಹುಕುಂ ಸಾಗುವಳಿ ಚೀಟಿ ಇರುವವರಿಗೆ ದಾಖಲಾತಿ ಖಾತೆ ನೀಡುತ್ತಿಲ್ಲ. ಬದಲಿಗೆ ಖಾತೆ ಮಾಡಿಕೊಡಲು ಲಂಚ ಪಡೆಯುವ ಕೆಲಸ ಸೇರಿದಂತೆ ಅಕ್ರಮಗಳು ನಡೆಯುತ್ತಿವೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿಧಾನ ಪರಿಷತ್‌ನಲ್ಲಿ ಇಂದು(ಮಾರ್ಚ್.19) ಪ್ರಶ್ನೋತ್ತರ ಕಲಾಪದಲ್ಲಿ ಪ್ರಶ್ನೆ ಕೇಳಿದ ಅವರು, ನಮ್ಮ ಕ್ಷೇತ್ರದಲ್ಲಿ ಸಾಗುವಳಿ ಚೀಟಿ ಇರುವವರಿಗೆ ದಾಖಲಾತಿ ಖಾತೆ ಮಾಡಿಕೊಡುತ್ತಿಲ್ಲ. ಅರ್ಜಿದಾರರು ಅರ್ಜಿ ಹಾಕಿ, ಶುಲ್ಕ ಪಾವತಿಸಿದ ಮೇಲೆಯೂ ಖಾತೆ ನೀಡುತ್ತಿಲ್ಲ. ಬದಲಿಗೆ ಆ ಕಚೇರಿಗಳಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅಕ್ರಮಗಳು ಕೇಳಿ ಬರುತ್ತಿವೆ ಎಂದರು.

ಸುಮಾರು 30-35 ವರ್ಷಗಳಿಂದ ಖಾತೆ ಆಗಿಲ್ಲ. ಸಾಗುವಳಿ ಚೀಟಿ ನೀಡಿದವರಿಗೆ ತಕ್ಷಣ ಖಾತೆ ಮಾಡಿಕೊಡಬೇಕು. ಆದರೆ ಇಲ್ಲಿ ಖಾತೆ ಮಾಡಿಸಲು ಲಂಚ ಕೇಳುವ ಅಧಿಕಾರಿಗಳಿಗೆ ಲಂಚ ನೀಡುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಖಾತೆ ಮಾಡಿಕೊಡುವುದಕ್ಕೆ ಒಂದು ಕಾಲ ಮಿತಿಯನ್ನು ಮಾಡಬೇಕು ಎಂದು ಹೇಳಿದರು.

ಈ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, ಸಾಗುವಳಿ ಚೀಟಿ ನೀಡಿದವರಿಗೆ ಇನ್ನೂ ಖಾತೆ ನೀಡದಿರವುದು ಸತ್ಯ. ಕಳೆದ 20-30 ವರ್ಷಗಳಿಂದ ಸಾಗುವಳಿ ಚೀಟಿ ದ್ದರೂ ಖಾತೆ ಮಾಡಿಕೊಡಲು ಆಗಿಲ್ಲ. ನೈಜವಾಗಿ ಇರುವ ಕೇಸಲ್ಲಿ ಆದಷ್ಟು ಬೇಗ ಖಾತೆ ಮಾಡಿಕೊಡುತ್ತೇವೆ. ಅಧಿಕಾರಿಗಳಿಗೂ ಖಾತೆ ಮಾಡಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಇನ್ನು ಹಲವು ಪ್ರಕರಣಗಳಲ್ಲಿ ಅಕ್ರಮವಾಗಿ ಭೂಮಿ ಹಂಚಿಕೆಯಾಗಿದೆ. ಅರಣ್ಯ ಭಾಗದಲ್ಲಿ ಹಂಚಿಕೆ ಆಗಿರುವುದಕ್ಕೆ ದಾಖಲಾತಿ ಮಾಡಿಕೊಡಲು ಆಗುವುದಿಲ್ಲ. ಅದನ್ನು ಪರಿಶೀಲಿಸಿದ ನಂತರ ನೈಜವಾಗಿ ಹಂಚಿಕೆ ಆಗಿರುವವರಿಗೆ ಆದಷ್ಟು ಬೇಗ ಖಾತೆ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.

ಅರ್ಚನ ಎಸ್‌ ಎಸ್

Recent Posts

ವೈರಮುಡಿ ಬ್ರಹ್ಮೋತ್ಸವಕ್ಕೆ ಕ್ಷಣಗಣನೆ : ವೈರಮುಡಿ ಆಭರಣ ತಲೆಮೇಲೆ ಹೊತ್ತು ತಂದ ಡಿಸಿ, ಎಸ್‌ಪಿ

ಮೇಲುಕೋಟೆ : ವಿಶ್ವವಿಖ್ಯಾತ ಮೇಲುಕೋಟೆ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಕಿರೀಟಧಾರಣಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದಕ್ಕೆ ಪೂರ್ವಭಾವಿಯಾಗಿ, ಜಿಲ್ಲಾ ಖಜಾನೆಯಿಂದ…

9 mins ago

ಪತಿ ಮೃತಪಟ್ಟ ಮಾರನೇ ದಿನವೇ ಕರ್ತವ್ಯಕ್ಕೆ ಹಾಜರಾದ ಶಿಕ್ಷಕಿ!

ಎಚ್‌.ಡಿ.ಕೋಟೆ : ಪತಿ ಮೃತಪಟ್ಟ ಮಾರನೇ ದಿನವೇ ಶಿಕ್ಷಕಿಯೊಬ್ಬರು ಶಾಲೆಗೆ ಹಾಜರಾಗಿ ಕರ್ತವ್ಯ ನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಂಪಾಪುರ ಸಮೀಪದ…

57 mins ago

ದೇಶದಲ್ಲಿ ಸಾಕಷ್ಟು ತೈಲ ದಾಸ್ತಾನು : ವಾಣಿಜ್ಯ ಅನಿಲ ಪೂರೈಕೆಯಲ್ಲಿ ಶೇ.70%ಕ್ಕೆ ಹೆಚ್ಚಳ

ಹೊಸದಿಲ್ಲಿ : ಇರಾನ್ ಸಂಘರ್ಷದಿಂದಾಗಿ ಉಂಟಾದ ಅಂತರರಾಷ್ಟ್ರೀಯ ಅನಿಲ ಪೂರೈಕೆ ಬಿಕ್ಕಟ್ಟಿನ ನಡುವೆಯೂ ಕೇಂದ್ರ ಸರ್ಕಾರ ವಾಣಿಜ್ಯ ಎಲ್‌ಪಿಜಿ ಪೂರೈಕೆಯನ್ನು…

1 hour ago

30 ಕೆಜಿ ಸಿಂಥೆಟಿಕ್‌ ಡ್ರಗ್ಸ್‌ ಪತ್ತೆ, ಇಬ್ಬರ ಬಂಧನ

ಮೈಸೂರು : ಇತ್ತೀಚೆಗೆ ಮೈಸೂರಿನಲ್ಲಿ ಡ್ರಗ್ಸ್‌ ತಯಾರಿಕ ಘಟಕ ಮತ್ತು ಡ್ರಗ್ಸ್‌ಗೆ ಬಳಸುವ ರಾಸಾಯನಿಕ ವಸ್ತುಗಳು ಪತ್ತೆಯಾಗಿತ್ತು. ಆದರೆ, ಇದೀಗ…

2 hours ago

ಹುಸಿ ಬಾಂಬ್ ಬೆದರಿಕೆ : ಮೈಸೂರಿನಲ್ಲಿ ಓರ್ವ ಬಂಧನ

ಮೈಸೂರು :  ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆ ಸಂದೇಶಗಳನ್ನು ಕಳುಹಿಸಿ ರಾಜ್ಯದಲ್ಲಿ ಆತಂಕ ಸೃಷ್ಟಿಸುತ್ತಿದ್ದ ಓರ್ವ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.…

3 hours ago

ಇಂದಿನಿಂದ ಐಪಿಎಲ್‌ ಹವಾ ; ಬೆಂಗಳೂರಲ್ಲೇ ಉದ್ಘಾಟನಾ ಪಂದ್ಯ

ಕಳೆದ ಬಾರಿಯ ಭೀಕರ ಕಾಲ್ತುಳಿತ ಬಳಿಕ ರಂಗೇರಿದ ಕ್ರಿಕೆಟ್‌ ಬೆಂಗಳೂರು : ಜಾಗತಿಕ ಮಟ್ಟದ ಅತ್ಯಂತ ಶ್ರೀಮಂತ, ಶ್ರೇಷ್ಠ ಕ್ರಿಕೆಟ್…

5 hours ago