ಸುವಾರು 40ವರ್ಷಗಳಿಂದಲೂ 6 ಕುಟುಂಬಗಳು ಮೂಲ ಸೌಕರ್ಯಗಳಿಂದ ವಂಚಿತ
-ಉಮೇಶ್ ಹಲಗೂರು
ಹಲಗೂರು: ಸುವಾರು 40 ವರ್ಷಗಳಿಂದಲೂ ಹಾವಾಡಿಗ ಸಮುದಾುಂದ ಆರಕ್ಕೂ ಹೆಚ್ಚು ಕುಟುಂಬಗಳು ಮೂಲ ಸೌಕರ್ಯಗಳಿಲ್ಲದೆ ಹಾಗೂ ವಾಸಿಸಲು ಯೋಗ್ಯವಾದ ಮನೆಯೂ ಇಲ್ಲದೆ ಅನಾಥವಾಗಿ ಬದುಕು ನಡೆಸುವಂತಾಗಿದೆ.
ಕಸಬಾ ಹೋಬಳಿುಂ ಯತ್ತಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಂತ ಸೂರಿಲ್ಲದೆ, ಇತ್ತ ಮೂಲ ಸೌಕರ್ಯಗಳೂ ಇಲ್ಲದೆ ಸುವಾ ರು ೪೦ ವರ್ಷಗಳಿಂದಲೂ ನೆಲೆಸಿದ್ದಾರೆ. ಕೂಲಿ ಕೆಲಸದಿಂದ ಸಾಗಿದ ಇವರ ಜೀವನ ಇಂದಿಗೂ ದುಸ್ತರವಾಗಿದೆ.
ಕುಲ ಕಸುಬಾದ ಹಾವಾಡಿಗ ವೃತ್ತಿಯಿಂದ ಬಂದಂತಹ ಆದಾುಂದಲ್ಲಿ ಜೀವನ ಹೇಗೋ ಸಾಗಿಸುತ್ತಿದ್ದರು. ಆದರೆ, ಪ್ರಸ್ತುತ ಕಾನೂನಾತ್ಮ ಕವಾಗಿ ಪ್ರಾಣಿ ಹಿಂಸೆ ಮಾಡುವುದು ಅಪರಾಧವಾಗಿರುವುದರಿಂದ ಹಾವು ಆಡಿಸುವ ವೃತ್ತಿಯನ್ನು ನಿಲ್ಲಿಸಿದ್ದಾರೆ. ಕೃಷಿ ಸಂಬಂಧಿತ ಅಥವಾ ಬೇರೆ ಇನ್ನಾವುದೋ ಕೂಲಿಯನ್ನೇ ಆಶ್ರಯಿಸಿದ್ದಾರೆ. ಕೂಲಿ ಕೆಲಸವಿಲ್ಲದ ವೇಳೆ ಒಪ್ಪತ್ತಿನ ಊಟಕ್ಕೂ ಅಲೆದಾಡುವ ಪರಿಸ್ಥಿತಿ ಇದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬದುಕು ಕಳೆಯುವಂತಾಗಿದೆ.
ಬಹಳ ವರ್ಷಗಳಿಂದಲೂ ಇಲ್ಲಿುಂವರೆಗೆ ಬೇರೆ ಯಾರದೋ ಖಾಸಗಿ ಜಮೀನಿನಲ್ಲಿ ಗುಡಿಸಲುಗಳನ್ನು ಕಟ್ಟಿಕೊಂಡು ಕೂಲಿ ಕೆಲಸವನ್ನು ಆಶ್ರಯಿಸಿಕೊಂಡು ಬದುಕು ದೂಡುತ್ತಿದ್ದಾರೆ. ನಮಗೆ ಸ್ವಂತ ನಿವೇಶನ ಇಲ್ಲದಿರುವುದರಿಂದ ಮೂಲ ಸೌಕರ್ಯಗಳ ಕೊರತೆ ಇದೆ ಎನ್ನುತ್ತಾರೆ.
ಹಾವಾಡಿಗ ಕುಟುಂಬಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಕೇವಲ ಬೆರಳೆಣಿಕೆಯ ಮಕ್ಕಳು ಮಾತ್ರ ಪೂರೈಸಿದ್ದಾರೆ. ಇಬ್ಬರು ಮಾತ್ರ ಎಸ್ಎಸ್ಎಲ್ಸಿ ಮಾಡಿದ್ದು, ಇಬ್ಬರು ಹೆಣ್ಣು ಮಕ್ಕಳು ಪದವಿ ಪೂರ್ವ ಶಿಕ್ಷಣ ಪೂರೈಸಿದ್ದಾರೆ. ಪದವಿ ಶಿಕ್ಷಣವನ್ನು ಯಾರೂ ಪೂರೈಸಿಲ್ಲ.
ಹೀಗಿರುವಾಗ ಯತ್ತಂಬಾಡಿ ಗ್ರಾಮ ಪಂಚಾಯಿತಿ ಪಿಡಿಒ ಲೋಕೇಶ್ ಈ ಸಮಸ್ಯೆ ಕುರಿತು ಮಾತನಾಡಿ, ಸುವಾರು ಆರಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ಬಹಳ ವರ್ಷಗಳಿಂದಲೂ ವಾಸವಾಗಿದ್ದಾರೆ. ಆದರೆ, ಮೂಲಭೂತ ಸೌಕರ್ಯಗಳು, ವಸತಿ ಸೌಲಭ್ಯ ಇಲ್ಲ. ಪ್ರಸ್ತುತ ಮನೆ ನಿರ್ಮಿಸಿಕೊಳ್ಳಲು ಇವರಿಗೆ ಸ್ವಂತ ನಿವೇಶನವೂ ಇಲ್ಲ. ಆದ್ದರಿಂದ ವಸತಿ ಯೋಜನೆುಂಡಿ ಫಲಾನುಭವಿಗಳ ಆಯ್ಕೆ ಪಟ್ಟಿಯಿಂದ ಕೈ ಬಿಡಲು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಮನವಿ ಕಳುಹಿಸಲಾಗಿದೆ.
ಯತ್ತಂಬಾಡಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಾದ ಅಂತರವಳ್ಳಿ, ಹುಲ್ಲಾಹಳ್ಳಿ, ದಡಮಹಳ್ಳಿ, ಹೊಸಪುರ ಮತ್ತು ಗೊಲ್ಲರ ದೊಡ್ಡಿ ನಿವೇಶನ ರಹಿತ ಸುವಾರು 256ಕುಟುಂಬಗಳಿಗೆ ನಿವೇಶನವನ್ನು ಹಂಚಿಕೆ ವಾಡಲು ಜಾಗವನ್ನು ಮಂಜೂರ ವಾಡಿಕೊಡಬೇಕು ಎಂದು ತಹಸಿಲ್ದಾರರ ಮತ್ತು ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳ ಅವಗಾಹನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ನಮಗೆ ನಮ್ಮ ಕುಲ ಕಸುಬು ಹಾವಾಡಿಗ ವೃತ್ತಿಗೆ ಕಾನೂನಿನ ಬೆಂಬಲವಿಲ್ಲ. ಹಾಗಾಗಿ ನಮ್ಮ ವೃತ್ತಿಯನ್ನು ನಿಲ್ಲಿಸಿದ್ದೇವೆ. ನಾವು ಬಹಳ ವರ್ಷ ಗಳಿಂದಲೂ ಇಲ್ಲಿ ನೆಲೆಸಿದ್ದೇವೆ. ಇತರರಂತೆ ನೆಮ್ಮದಿುುಂತ ಜೀವನ ನಡೆಸಲು ದುಂವಿಟ್ಟು ನಮಗೆ ನಿವೇಶನ ನೀಡಬೇಕು. -ಮುತ್ತಮ್ಮ, ಹಾವಾಡಿಗ ಸಮುದಾುಂದ ಮಹಿಳೆ.
ಸುವಾರು ೪೦ ವರ್ಷಗಳಿಂದಲೂ ಹಾವಾಡಿಗ ಸಮುದಾುಂದ ಕುಟುಂಬಗಳು ಹಲಗೂರಿನಲ್ಲಿ ವಾಸವಾಗಿವೆ. ಇವರಿಗೆ ಸ್ವಂತ ಮನೆಯಿ ಲ್ಲದೆ ಅನಾಥವಾಗಿ ಬದುಕುತ್ತಿದ್ದಾರೆ. ಜನಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಇವರ ಸಮಸ್ಯೆ ಪರಿಹರಿಸಲಿ.
-ಬೆಳ್ತೂರು ಶಿವಕುವಾರ್, ಹೋಬಳಿ ಕಾರ್ಯದರ್ಶಿ, ಬಿಎಸ್ಪಿ.
ಹಾವಾಡಿಗರ ಬದುಕು ದುಂನೀುಂ ಸ್ಥಿತಿುಂಲ್ಲಿರುವುದು ವಿಪರ್ಯಾಸ. ಸವಾಜ ಕಲ್ಯಾಣ ಇಲಾಖೆ, ತಾಲ್ಲೂಕು ಆಡಳಿತ ಕೈಕಟ್ಟಿ ಕುಳಿತಿದೆ. ಮೂಲಭೂತ ಸೌಕರ್ಯಗಳ ಜೊತೆಗೆ ಇವರಿಗೆ ಜಾಗ ಗುರುತಿಸಿ ನಿವೇಶನ ಹಂಚಿಕೆ ವಾಡಬೇಕು.
-ಸಿದ್ದಲಿಂಗ ಮೂರ್ತಿ, ಮುಖಂಡರು.
ಹಾವಾಡಿಗ ಕುಟುಂಬಗಳ ಸಮಸ್ಯೆ ಬಗ್ಗೆ ಪಂಚಾುಂತ್ ಅಭಿವೃದ್ಧಿ ಅಧಿಕಾರಿ ಈಗಾಗಲೇ ಜಾಗವನ್ನು ಮಂಜೂರು ವಾಡಿಕೊಡುವಂತೆ ನಿವೇ ಶನ ಪಟ್ಟಿ ಸಲ್ಲಿಸಿದ್ದಾರೆ. ಈ ಸಂಬಂಧ ತಹಸಿಲ್ದಾರರ ಗಮನಕ್ಕೆ ತಂದು ನಿವೇಶನ ಮಂಜೂರಾತಿಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
-ರಾಮಲಿಂಗ್ಂಯು, ಇಒ, ತಾಪಂ, ಮಳವಳ್ಳಿ.
ಈ ಸಂಬಂಧ ನಮಗೆ ಯಾವುದೇ ಹಾವಾಡಿಗ ಸಮುದಾುಂದವರ ನಿವೇಶನ ಸಮಸ್ಯೆ ಬಗ್ಗೆ ಯಾವುದೇ ವಾಹಿತಿ ನೀಡಿಲ್ಲ. ಒಂದು ವೇಳೆ ಹಾವಾಡಿಗ ಸಮುದಾುಂದ ನಿವೇಶನ ರಹಿತರ ಸಮಸ್ಯೆ ಇದ್ದರೆ ಕೂಡಲೇ ಕ್ರಮ ವಹಿಸಲಾಗುವುದು.
-ಎಂ.ವಿಜುಂಣ್ಣ, ತಹಸಿಲ್ದಾರರು, ಮಳವಳ್ಳಿ.