ಬೆಂಗಳೂರು: ಹಾಲಿನ ದರ ಏರಿಕೆ ಮಾಡೇ ಮಾಡ್ತೀವಿ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಸಚಿವ ವೆಂಕಟೇಶ್ ಹೇಳಿದ್ದಾರೆ.
ಈ ಬಗ್ಗೆ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಅವರು, ಹಾಲು ಉತ್ಪಾದಕರಿಗೆ 656.07 ಕೋಟಿ ರೂ ಪ್ರೋತ್ಸಾಹಧನ ಬಾಕಿ ಉಳಿದುಕೊಂಡಿದೆ. 9,04,547 ಫಲಾನುಭವಿಗಳಿಗೆ ಬಾಕಿ ಹಣ ಕೊಡಬೇಕಾಗಿದೆ. ಇದರಲ್ಲಿ ಸಾಮಾನ್ಯ ವರ್ಗಕ್ಕೆ 613.58 ಕೋಟಿ ರೂ ಹಾಗೂ ಪರಿಶಿಷ್ಟ ಜಾತಿಯವರಿಗೆ 18.29 ಕೋಟಿ ರೂ ಹಾಗೂ ಪರಿಶಿಷ್ಟ ಪಂಗಡಕ್ಕೆ 24.20 ಕೋಟಿ ರೂ ಬಾಕಿಯಿದೆ ಎಂದರು.
ಇನ್ನು ಮುಂದುವರಿದು ಮಾತನಾಡಿದ ಅವರು, ರಾಜ್ಯದಲ್ಲಿ ಹಾಲಿನ ಉತ್ಪಾದನೆ ಜಾಸ್ತಿ ಆಗಿದೆ. ಸಿಎಂ ಅವರಿಗೆ ಬಾಕಿ ಹಣ ಬಿಡುಗಡೆಗೆ ಮನವಿ ಮಾಡಿದ್ದೇವೆ. ಆದಷ್ಟು ಬೇಗ ಬಾಕಿ ಹಣ ಬಿಡುಗಡೆ ಮಾಡುತ್ತೇವೆ. ಇನ್ನೂ ಹಾಲಿನ ದರ ಏರಿಕೆಗೆ ರೈತರ ಬೇಡಿಕೆಯಿದ್ದು, 10 ರೂ ಜಾಸ್ತಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಹಾಲಿನ ದರ ಏರಿಕೆ ಮಾಡೇ ಮಾಡುತ್ತೇವೆ. ಎಷ್ಟು ಎಂದು ಸಿಎಂ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಮಂಡ್ಯ : ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ-275 ರಲ್ಲಿ 2023ರಿಂದ 2025 ರವರೆಗೆ ಒಟ್ಟು 1,674 ಅಪಘಾತಗಳು ನಡೆದಿದ್ದು, 215 ಮಂದಿ…
ಮಂಡ್ಯ : ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ-275 ವಾಹನಗಳ ಸಂಚಾರಕ್ಕೆ ಮುಕ್ತವಾದ ದಿನದಿಂದ ಈವರೆಗೆ 855.79 ಕೋಟಿ ರೂ. ಟೋಲ್ ಶುಲ್ಕ…
ಮಂಡ್ಯ : ಸಾಮಾಜಿಕ ಬಹಿಷ್ಕಾರ ನಿಷೇಧ ವಿಧೇಯಕದಡಿ ಶಿಕ್ಷೆ ಪ್ರಮಾಣ 7 ವರ್ಷಕ್ಕೆ ಹೆಚ್ಚಿಸಬೇಕು. ಎಸ್ಸಿ, ಎಸ್ಟಿ ಸಮುದಾಯ ಪ್ರತಿ…
ಮೈಸೂರು : ಪತ್ನಿಯ ವರ್ತನೆಯಿಂದ ಬೇಸತ್ತಿದ್ದ ಪತಿ ಆಕೆಯನ್ನು ಹತ್ಯೆ ಮಾಡಲು ಯುವಕರಿಬ್ಬರಿಗೆ ಸುಫಾರಿ ನೀಡಿರುವ ಅಘಾತಕಾರಿ ಘಟನೆ ಬೆಳಕಿಗೆ…
ಹುಣಸೂರು : ತಾಲ್ಲೂಕಿನ ಗುರುಪುರ ಹುಣಸೇಕಟ್ಟೆ ಬಳಿಯ ಟಿಬೆಟ್ ಕ್ಯಾಂಪ್‌ನ ಬಿ.ವಿಲೇಜ್‌ನ ಜಮೀನಿನಲ್ಲಿ ಹುಲಿಯೊಂದು ಹಸುವನ್ನು ಕೊಂದು ಹಾಕಿದೆ. ಟಿಬೆಟ್…
ಬೆಂಗಳೂರು : 2027ರ ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ ಬೆಂಗಳೂರು ಪೊಲೀಸರು ಹೊಸ ಮಾರ್ಗಸೂಚಿ ಪ್ರಕಟಿಸಿದ್ದಾರೆ. ಗೋವಾದ…