ಬೆಂಗಳೂರು : ಚುನಾವಣೆ ನಡೆಯುವ ರಾಜ್ಯಗಳಿಗೆ ವಾರಗಟ್ಟಲೆ ಹೋಗಿ ಟೆಂಟ್ ಹಾಕುವ ಬಿಜೆಪಿಯ ನಾಯಕರು ಬಿಜೆಪಿಯೇ ಆಡಳಿತದಲ್ಲಿರುವ ಮಣಿಪುರ ರಾಜ್ಯ ಸಂಕಷ್ಟದಲ್ಲಿದ್ದಾಗಲೂ ಅತ್ತ ತಲೆ ಹಾಕದಿರುವುದು ಏಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, ಗೃಹಸಚಿವರಾಗಿರುವ ಅಮಿತ್ಶಾ ಮತ್ತು ನೀಡಲಿಲ್ಲ. ರಕ್ಷಣಾ ಸಚಿವರಾಗಿರುವ ರಾಜನಾಥ್ ಸಿಂಗ್ ಮಣಿಪುರಕ್ಕೆ ಭೇಟಿ ನೀಡಲಿಲ್ಲ. ಪ್ರಧಾನಿಯಾಗಿರುವ ನರೇಂದ್ರ ಮೋದಿ ಮಣಿಪುರಕ್ಕಷ್ಟೇ ಅಲ್ಲ ಸಂಸತ್ತಿಗೆ ಭೇಟಿ ನೀಡುವುದನ್ನೂ ಮರೆತಿದ್ದಾರೆ ಎಂದು ಲೇವಡಿ ಮಾಡಿದರು.
ಚುನಾವಣೆಗಾಗಿ ರಾಜ್ಯಗಳಲ್ಲಿ ತಿಂಗಳುಗಟ್ಟಲೆ ಟೆಂಟ್ ಹಾಕುವ ಇವರು ಬಿಜೆಪಿ ಆಡಳಿತದ ಒಂದು ರಾಜ್ಯ ಸಂಕಷ್ಟ ಎದುರಿಸುತ್ತಿರುವಾಗ ಅತ್ತ ಸುಳಿಯದಿರುವುದೇಕೆ ಎಂದು ಪ್ರಶ್ನಿಸುವ ಜೊತೆಗೆ ಮಣಿಪುರದ ವಿಷಯ ಬಂದರೆ 56 ಇಂಚಿನ ಎದೆಯ ಅಳತೆ 16 ಇಂಚಿಗೆ ಇಳಿಯುವುದೇಕೆ ಎಂದು ವ್ಯಂಗ್ಯವಾಡಿದೆ.