ರಾಜ್ಯ

ಮಲ್ಲಿಕಾರ್ಜುನ ಖರ್ಗೆ ಅವರ ಜಿಲ್ಲೆಯಲ್ಲಿಯೇ ಯಾಕೆ ಈ ಸ್ಕ್ಯಾಮ್ ಆಗುತ್ತಿದೆ: ಜೋಷಿ ಪ್ರಶ್ನೆ

ಹುಬ್ಬಳ್ಳಿ : ನಮ್ಮ ಸರ್ಕಾರದಲ್ಲಿ ಪಿಎಸ್‍ಐ ಹಗರಣ ಹೊರಬಂತು. ನಾವು ಐಜಿ ಅವರನ್ನೆ ಜೈಲಿಗೆ ಕಳುಹಿಸಿದೆವು. ಪರೀಕ್ಷೆಗಳಲ್ಲಿ ಅಕ್ರಮಗಳನ್ನು ತಡೆಗಟ್ಟಲು ಸಾಕಷ್ಟು ತಂತ್ರಜ್ಞಾನ ಬಂದಿದೆ. ಆದರೆ, ಯಾಕೆ ಹೀಗೆ ಆಯಿತು. ಅದು ಮಲ್ಲಿಕಾರ್ಜುನ ಖರ್ಗೆ ಅವರ ಜಿಲ್ಲೆಯಲ್ಲಿಯೇ ಯಾಕೆ ಈ ಸ್ಕ್ಯಾಮ್ ಆಗುತ್ತಿದೆ ಎಂದು ಗೊತ್ತಾಗುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದರು.

ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಪರೀಕ್ಷಾ ಅಕ್ರಮಗಳು ಕಲಬುರಗಿಯಲ್ಲೇ ಯಾಕೆ ಆಗುತ್ತಿದೆ ಎಂಬುವುದನ್ನು ತಿಳಸಬೇಕು ಎಂದರು. ಕಾಂಗ್ರೆಸ್ ಪಾರ್ಟಿ ಗೊಂದಲದಿಂದ ರಾಜ್ಯದ ಜನ ಅಂತಂತ್ರ ವಾಗಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ . ಇನ್ನೂ ಎರಡು ಡಿಸಿಎಂ ಹುದ್ದೆ ಸೃಷ್ಟಿ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಟಿದ್ದಾರೆ. ಉಪ ಮುಖ್ಯಮಂತ್ರಿ ಶಿವಕುಮಾರ್ ಬಿಟ್ಟು ಸಭೆ ಮಾಡುವ ಸ್ಥಿತಿಗೆ ಸಿದ್ದರಾಮಯ್ಯ ತಲುಪಿದ್ದಾರೆ. ಇದು ರಾಜಕೀಯ ಹೈಡ್ರಾಮಾ ಕಾಂಗ್ರೆಸಿನಲ್ಲಿ ನಿತ್ಯ ಭಿನ್ನಮತ ಹೆಚ್ಚಾಗುತ್ತಿದೆ ಅಧಿಕಾರಕ್ಕಾಗಿ ಒಳ ಜಗಳ ನಡೆಯುತ್ತಿದ್ದು ಇದನ್ನು ಡೈವರ್ಟ್ ಮಾಡಲು ಹುಲಿ ಉಗುರು ಪೆಂಡೆಂಟ್ ವಿಚಾರ ತಂದಿದ್ದಾರೆ ಎಂದು ಟಾಂಗ್ ನೀಡಿದರು.

ಶಾಸಕರನ್ನು ಒಟ್ಟಾಗಿ ಹಿಡಿದಿಟ್ಟುಕೊಳ್ಳುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾವಾಗಿದೆ ಎಂದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಜಗಳ ತಾರಕ್ಕೇರಿದೆ ಇದನ್ನು ಡೈವರ್ಟ್ ಮಾಡಲು ಆಪರೇಷನ್ ಕಮಲದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಈ ಸರ್ಕಾರವನ್ನು ತೆಗೆಯಲು ಬಿಜೆಪಿ ಯಾವುದೇ ಚಿಂತನೆ ಮಾಡಿಲ್ಲ. ಜನ ಕಾಂಗ್ರೆಸ್‍ಗೆ ಅಧಿಕಾರ ಕೊಟ್ಟಿದ್ದಾರೆ ಐದು ವರ್ಷ ನಡೆಸಲಿ. ಆದರೆ, ಸಿದ್ದರಾಮಯ್ಯ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಬಾಲಿಶ ಹೇಳಿಕೆ ನೀಡೋದು ಬಿಡಬೇಕು. ಐದಾರು ಸ್ಥಾನಗಳು ಕಡಿಮೆ ಇದ್ದರೆ ಸರ್ಕಾರ ರಚನೆ ಬಗ್ಗೆ ಯೋಚನೆ ಮಾಡಬಹುದು. ಆದ್ರೆ 70 ಶಾಸಕರನ್ನು ಕರೆದುಕೊಂಡು ಯಾರು ಸರ್ಕಾರ ರಚನೆ ಮಾಡಲು ಯೋಚನೆ ಮಾಡುತ್ತಿದ್ದಾರೆ.

ಇದು ಸಾಧ್ಯನಾ ಎಂದ ಅವರು ಉಪ ಮುಖ್ಯಮಂತ್ರಿ ಶಿವಕುಮಾರ್ ಅವರ ಪ್ರಾಮುಖ್ಯತೆ ಕಡಿಮೆ ಮಾಡಲು ಸಿದ್ದರಾಮಯ್ಯ ಡ್ರಾಮಾ ನಡೆಸಿದ್ದಾರೆ. ಇನ್ನೂ ಎರಡುವರೆ ವರ್ಷಕ್ಕೆ ಮತ್ತು ಲೋಕಸಭಾ ಚುನಾವಣೆಗೆ ಬಳಿ ಉಪ ಮುಖ್ಯಮಂತ್ರಿ ಡಿಕೆಶಿಗೆ ಅಕಾರ ಬಿಟ್ಟುಕೊಡಬೇಕು ಅಂತ ಸಿದ್ದರಾಮಯ್ಯ ಈ ನಾಟಕ ನಡೆಸಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಭಿಮಾನ ಕರ್ನಾಟಕ ಅಂತ ಮಾತನಾಡುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ರಾಜ್ಯದ ಪರವಾಗಿ ಯಾವುದೇ ಸಹಕಾರ ನೀಡುತ್ತಿಲ್ಲ . ಕೇಂದ್ರ ಜಲ ಸಂಪನ್ಮೂಲಗಳ ವಿಚಾರದಲ್ಲಿ ಅವರು ಸಹಕಾರ ಕೊಟ್ಟಿಲ್ಲ ಇದನ್ನು ಅವರು ಎದೆ ಮುಟ್ಟಿಕೊಂಡು ಹೇಳಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಸ್ಪಷ್ಟನೆ ಕೇಳಿದರು.

ಕುಚ್ವಿತ ಬುದ್ಧಿ ಇರಬಾರದು:
ಮಾಜಿ ಸಿಎಂ ಬೊಮ್ಮಾಯಿ ಅನಾರೋಗ್ಯದ ಬಗ್ಗೆ ಶಾಸಕ ಎನ್ ಎಚ್ ಕೋನರೆಡ್ಡಿ ಅಪಹಾಸ್ಯ ವಿಚಾರ ಕುರಿತು ಸಹ ಪ್ರತಿಕ್ರಿಯೆ ನೀಡಿದ ಅವರು, ಅನಾರೋಗ್ಯ ಮತ್ತು ಸಾವಿನ ವಿಚಾರದಲ್ಲಿ ವ್ಯಕ್ತಿ ಯಾರೇ ಇರಲಿ ಈ ರೀತಿಯಾಗಿ ಕೆಳಮಟ್ಟದಲ್ಲಿ ಮಾತನಾಡ ಬಾರದು. ಈ ರೀತಿಯ ಕುಚ್ವಿತ ಬುದ್ದಿ ಮಾಡಬಾರದು. ಇದು ಅವರ ಸಂಸ್ಕೃತಿ ಸಂಸ್ಕಾರವನ್ನು ತೋರಿಸುತ್ತದೆ. ರಾಜಕಾರಣಿಗಳು ಆಗಿದ್ದರು ನಾವು ಮನುಷ್ಯರು ಇದನ್ನು ನೆನಪಿಟ್ಟುಕೊಳ್ಳಬೇಕು. ಜನ ನಮ್ಮನ್ನು ನೋಡುತ್ತಿರುತ್ತಾರೆ ಎಂದರು.

andolanait

Recent Posts

ಕಾರು ಅಪಘಾತ : ಕಾರಿನಲ್ಲಿ‌10ಕ್ಕೂ ಹೆಚ್ಚು ಕರುಗಳು ಪತ್ತೆ

ಮಂಡ್ಯ: ನಾಗಮಂಗಲ ತಾಲೂಕು ಯರಗಟ್ಟಿ ಗೇಟ್ ಬಳಿ ಶುಕ್ರವಾರ ರಾತ್ರಿ ಅಪಘಾತಕ್ಕೊಳಗಾದ ಸ್ಕಾರ್ಪಿಯೋ ಕಾರಿನಲ್ಲಿ ಮೃತಪಟ್ಟಿರುವ ಹತ್ತಕ್ಕೂ ಹೆಚ್ಚು ಕರುಗಳು…

8 hours ago

ಮದ್ದೂರು |‌ ದೇವಾಲಯಗಳಲ್ಲಿ ಸರಣಿ ಕಳ್ಳತನ

ಮದ್ದೂರು: ದುಷ್ಕರ್ಮಿಗಳು ದೇವಾಲಯಗಳ ಬಾಗಿಲು ಮುರಿದು ಸರಣಿ ಕಳ್ಳತನ ಮಾಡಿರುವ ಘಟನೆ ತಾಲ್ಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡಗನಹಳ್ಳಿ…

11 hours ago

ಎಚ್ಚೆತ್ತ ಪೊಲೀಸರು : ರಾಸಾಯನಿಕ ತಯಾರಿಕಾ ಘಟಕದ ಮೇಲೆ ದಾಳಿ,ಪರಿಶೀಲನೆ

ಮೈಸೂರು : ಎನ್‌ಸಿಬಿ ಪೊಲೀಸರು ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದ ರಾಸಾಯನಿಕ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ ನಂತರ…

12 hours ago

ರಾಜೀವ್‌ಗೌಡಗೆ ಜಾಮೀನು : ಪಟಾಕಿ ಸಿಡಿಸಿ ಸಂಭ್ರಮಿಸದಂತೆ ಕೋರ್ಟ್‌ ತಾಕೀತು

ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಆರೋಪಿ ರಾಜೀವ್ ಗೌಡಗೆ ಜಾಮೀನು…

12 hours ago

ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆ

ಬೆಂಗಳೂರು : ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿ ಕಾನ್ಫಿಡೆಂಟ್ ಗ್ರೂಪ್‌ನ ಸ್ಥಾಪಕ ಮತ್ತು ಚೇರ್ಮನ್ ಡಾ.ಸಿ.ಜೆ. ರಾಯ್…

12 hours ago

ಸಿಎಂ,ಡಿಸಿಎಂ ವಿರುದ್ಧ ಮಾನಹಾನಿಕ ಪೋಸ್ಟ್‌ : ಬಿಜೆಪಿ ವಿರುದ್ಧ ದೂರು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು ‘ಮಾನಹಾನಿಕರ’ ಪೋಸ್ಟ್‌ನ್ನು ಬಿಜೆಪಿಯ ‘ಎಕ್ಸ್’ ಖಾತೆಯಲ್ಲಿ…

13 hours ago