ರಾಜ್ಯ

ಪಾತಾಳಕ್ಕೆ ಹೋಗಿ ಯಾರಾದ್ರು ಬೀಳ್ತಾರಾ? : ಆಪರೇಷನ್ ಕಮಲಕ್ಕೆ ಖಂಡ್ರೆ ವ್ಯಂಗ್ಯ

ಬೀದರ್ : ನಮ್ಮವರು ಯಾರೂ ಆಪರೇಷನ್ ಕಮಲಕ್ಕೆ ಬಲಿಯಾಗಲ್ಲ. ಪಾತಾಳಕ್ಕೆ ಹೋಗಿ ಯಾರಾದರೂ ಬೀಳ್ತಾರಾ ಎಂದು ಆಪರೇಷನ್ ಹಸ್ತದ ವಿಚಾರಕ್ಕೆ ಬೀದರ್ ನಲ್ಲಿ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಈಗಾಗಾಲೇ ಮುಳುಗುವ ಹಡಗಾಗಿದ್ದು, ಮುಳುಗುವ ಹಡುಗಿನಲ್ಲಿ ಯಾರಾದರೂ ಕುಳಿತುಕೊಳ್ತಾರಾ, ನಾವು ಆಹ್ವಾನ ಮಾಡಿದ್ರೆ ಬಿಜೆಪಿಗೆ ಬಿಜೆಪಿ, ಜೆಡಿಎಸ್‍ಗೆ ಜೆಡಿಎಸ್ ಕಿತ್ಕೊಂಡು ಬರುತ್ತೆ. ಆದರೆ ನಾವು ಹಾಗೇ ಮಾಡಲ್ಲ ಎಂದರು.

ನಮ್ಮ ತತ್ವ ಸಿದ್ಧಾಂತಕ್ಕೆ ಯಾರು ಒಪ್ಪಿಗೆ ಕೊಡುತ್ತಾರೆ, ನಾಯಕತ್ವಕ್ಕೆ ಯಾರು ಒಪ್ಪಿಗೆ ಕೊಡುತ್ತರೋ ಅಂತವರನ್ನು ಪರಿಶೀಲನೆ ಮಾಡಿ ಸೇರಿಸುಕೊಳ್ಳುತ್ತೇವೆ ಎಂದ್ರು ಖಂಡ್ರೆ ಬಿಜೆಪಿಗೆ ಟಾಂಗ್ ನೀಡಿದರು. ಇನ್ನೂ ಆರ್‍.ಡಿ ಪಾಟೀಲ್ ಎಸ್ಕೇಪ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಖಂಡ್ರೆ ಸರ್ಕಾರ ಕಾನುನುಬದ್ಧವಾಗಿ ಕ್ರಮ ಕೈಗೊಳ್ಳಿ ಅಂತಾ ತನಿಖಾಧಿಕಾರಿಗಳಿಗೆ ಹೇಳುತ್ತೆನೆ ಎಂದು ಹೇಳಿದರು.

ಯಾರನ್ನು ಬಂಧಿಸಬಾರದು ಎಂಬುದು ತನಿಖಾಧಿಕಾರಿ ಜವಾಬ್ದಾರಿ. ಉದ್ದೇಶಪೂರ್ವಕವಾಗಿ ಏನಾದ್ರೂ ಆಗಿದೆ ಅಂದ್ರೆ, ಪರಿಶೀಲನೆ ಮಾಡುತ್ತೇವೆ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಜಾರಿಕೊಂಡರು.

ಇನ್ನೂ ಕಿಯೋನಿಕ್ಸ್ ಎಮ್‍ಡಿಗೆ ಕಡ್ಡಾಯ ರಜೆ ವಿಚಾರವಾಗಿ ಮಾತನಾಡಿದ ಖಂಡ್ರೆ, ಆಡಳಿತಾತ್ಮಕ ವಿಷಯ ಜನರಿಗೆ ಹೇಗೆ ತಲುಪಿಸಬೇಕೋ ಸುಧಾರಣೆ ಮಾಡುತ್ತೇವೆ. ಸತ್ಯಾಂಶಗಳನ್ನ ತನಿಖೆ ಮಾಡಿ ಸುಧಾರಣೆ ಮಾಡುವ ಕೆಲಸ ಮಾಡುತ್ತೇವೆ. ಹಿಂದಿನ ಸರ್ಕಾರ ಮಾಡಿದ ಪಾಪದ ಕೆಲಸಗಳನ್ನು ತೊಳಿಯಲಿಕ್ಕೆ ಸಮಯ ಹಿಡಿಯುತ್ತದೆ ಎಂದು ಬಿಜೆಪಿ ನಾಯಕರಿಗೆ ಈಶ್ವರ ಖಂಡ್ರೆ ಟಾಂಗ್ ನೀಡಿದರು.

lokesh

Recent Posts

ಭಾರೀ ಮಳೆಗೆ ಕೊಚ್ಚಿ ಹೋದ ಚೆಕ್ ಡ್ಯಾಂ: 15 ಅಡಿಗೂ ಹೆಚ್ಚು ಪ್ರವಾಹ

ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…

1 hour ago

ಭಾರೀ ಮಳೆಗೆ ಮನೆ ಕುಸಿತ: ಲಕ್ಷಾಂತರ ರೂ. ನಷ್ಟ

ಹನೂರು: ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ…

2 hours ago

ಧರ್ಮಸ್ಥಳ ಸೌಜನ್ಯ ಪ್ರಕರಣ: ಮರು ತನಿಖೆಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ

ನವದೆಹಲಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನವದೆಹಲಿಯಲ್ಲಿ ನಡೆದ ವಿಚಾರಣೆಯಲ್ಲಿ, ಹಲವು…

3 hours ago

ಕಾಡಾನೆ ದಾಳಿ: ವ್ಯಕ್ತಿ ಸಾವು

ಸರಗೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ…

5 hours ago

ಗಣೇಶ ವಿಸರ್ಜನೆ ಮೆರವಣಿಗೆ ರಾಜಕೀಯ ದಾಳವಾಗದಿರಲಿ…

ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…

9 hours ago

ಕಾಂಗ್ರೆಸ್‌ನಲ್ಲೀಗ ಆತಂಕದ ಕಾರ್ಮೋಡ…

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್…

9 hours ago