ಬೀದರ್ : ನಮ್ಮವರು ಯಾರೂ ಆಪರೇಷನ್ ಕಮಲಕ್ಕೆ ಬಲಿಯಾಗಲ್ಲ. ಪಾತಾಳಕ್ಕೆ ಹೋಗಿ ಯಾರಾದರೂ ಬೀಳ್ತಾರಾ ಎಂದು ಆಪರೇಷನ್ ಹಸ್ತದ ವಿಚಾರಕ್ಕೆ ಬೀದರ್ ನಲ್ಲಿ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಈಗಾಗಾಲೇ ಮುಳುಗುವ ಹಡಗಾಗಿದ್ದು, ಮುಳುಗುವ ಹಡುಗಿನಲ್ಲಿ ಯಾರಾದರೂ ಕುಳಿತುಕೊಳ್ತಾರಾ, ನಾವು ಆಹ್ವಾನ ಮಾಡಿದ್ರೆ ಬಿಜೆಪಿಗೆ ಬಿಜೆಪಿ, ಜೆಡಿಎಸ್‍ಗೆ ಜೆಡಿಎಸ್ ಕಿತ್ಕೊಂಡು ಬರುತ್ತೆ. ಆದರೆ ನಾವು ಹಾಗೇ ಮಾಡಲ್ಲ ಎಂದರು.
ನಮ್ಮ ತತ್ವ ಸಿದ್ಧಾಂತಕ್ಕೆ ಯಾರು ಒಪ್ಪಿಗೆ ಕೊಡುತ್ತಾರೆ, ನಾಯಕತ್ವಕ್ಕೆ ಯಾರು ಒಪ್ಪಿಗೆ ಕೊಡುತ್ತರೋ ಅಂತವರನ್ನು ಪರಿಶೀಲನೆ ಮಾಡಿ ಸೇರಿಸುಕೊಳ್ಳುತ್ತೇವೆ ಎಂದ್ರು ಖಂಡ್ರೆ ಬಿಜೆಪಿಗೆ ಟಾಂಗ್ ನೀಡಿದರು. ಇನ್ನೂ ಆರ್.ಡಿ ಪಾಟೀಲ್ ಎಸ್ಕೇಪ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಖಂಡ್ರೆ ಸರ್ಕಾರ ಕಾನುನುಬದ್ಧವಾಗಿ ಕ್ರಮ ಕೈಗೊಳ್ಳಿ ಅಂತಾ ತನಿಖಾಧಿಕಾರಿಗಳಿಗೆ ಹೇಳುತ್ತೆನೆ ಎಂದು ಹೇಳಿದರು.
ಯಾರನ್ನು ಬಂಧಿಸಬಾರದು ಎಂಬುದು ತನಿಖಾಧಿಕಾರಿ ಜವಾಬ್ದಾರಿ. ಉದ್ದೇಶಪೂರ್ವಕವಾಗಿ ಏನಾದ್ರೂ ಆಗಿದೆ ಅಂದ್ರೆ, ಪರಿಶೀಲನೆ ಮಾಡುತ್ತೇವೆ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಜಾರಿಕೊಂಡರು.
ಇನ್ನೂ ಕಿಯೋನಿಕ್ಸ್ ಎಮ್‍ಡಿಗೆ ಕಡ್ಡಾಯ ರಜೆ ವಿಚಾರವಾಗಿ ಮಾತನಾಡಿದ ಖಂಡ್ರೆ, ಆಡಳಿತಾತ್ಮಕ ವಿಷಯ ಜನರಿಗೆ ಹೇಗೆ ತಲುಪಿಸಬೇಕೋ ಸುಧಾರಣೆ ಮಾಡುತ್ತೇವೆ. ಸತ್ಯಾಂಶಗಳನ್ನ ತನಿಖೆ ಮಾಡಿ ಸುಧಾರಣೆ ಮಾಡುವ ಕೆಲಸ ಮಾಡುತ್ತೇವೆ. ಹಿಂದಿನ ಸರ್ಕಾರ ಮಾಡಿದ ಪಾಪದ ಕೆಲಸಗಳನ್ನು ತೊಳಿಯಲಿಕ್ಕೆ ಸಮಯ ಹಿಡಿಯುತ್ತದೆ ಎಂದು ಬಿಜೆಪಿ ನಾಯಕರಿಗೆ ಈಶ್ವರ ಖಂಡ್ರೆ ಟಾಂಗ್ ನೀಡಿದರು.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…