ರಾಜ್ಯ

ಹೊಂದಾಣಿಕೆ ವಿಚಾರ ಬಂದರೇ ಮೊದಲ ಆಧ್ಯತೆ ಮಾತೃ ಪಕ್ಷ ಬಿಜೆಪಿಗೆ : ಜನಾರ್ಧನ ರೆಡ್ಡಿ!

ಗಂಗಾವತಿ : ದೇಶದ ಜನತೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಆಸೆ ಹೊಂದಿದೆ. ಮೋದಿ ಒಬ್ಬ ಸಮರ್ಥ ನಾಯಕ ಎಂಬ ಅಭಿಪ್ರಾಯವಿದೆ. ಈ ಹಿನ್ನಲೆ ಹೊಂದಾಣಿಕೆ ಮಾಡಿಕೊಳ್ಳುವ ವಿಚಾರ ಬಂದರೆ ನನ್ನ ಮೊದಲ ಆಧ್ಯತೆ ಮಾತೃ ಪಕ್ಷ  ಬಿಜೆಪಿಗೆ ಎಂದು ಶಾಸಕ ಜನಾರ್ಧನ ರೆಡ್ಡಿ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಇಡೀ ದೇಶದ ಜನ ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಬೇಕು ಎಂಬ ವಿಚಾರ ಹೊಂದಿದ್ದಾರೆ. ಹೀಗಾಗಿ ದೇಶದ ವಿಚಾರ ಬಂದಾಗ ಬಿಜೆಪಿಗರು ಮುಂದೆ ಬಂದು ಹೊಂದಾಣಿಕೆಯ ಪ್ರಸ್ತಾಪವಿಟ್ಟರೆ ಅದಕ್ಕೆ ನಾನು ಸ್ಪಂದಿಸುತ್ತೇನೆ. ಹೊಂದಾಣಿಕೆ ಎಂಬುವುದು ನನ್ನ ಮಾತೃಪಕ್ಷ ಬಿಜೆಪಿಯೊಂದಿಗೆ ಮಾತ್ರ ಎಂದು ತಿಳಿಸಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರದಲ್ಲಿ ನನ್ನ ಪಕ್ಷದಿಂದ ಅಭ್ಯರ್ಥಿ ಹಾಕುವಷ್ಟು ಶಕ್ತಿ ನನಗಿಲ್ಲ. ಅದಕ್ಕೆ ಸಮಯವೂ ಇಲ್ಲ. ಹೀಗಾಗಿ ನಾನು ಮೊದಲಿನಿಂದಲೂ ನನ್ನದು ಒಂದೇ ನಿಲುವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನನ್ನ ಪಕ್ಷದಿಂದ ಐದಾರು ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಹಾಕುತ್ತೇನೆ. ಆ ಕ್ಷೇತ್ರಗಳಲ್ಲಿ ನನ್ನ ಶಕ್ತಿ ಮೀರಿ ನನ್ನ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಯತ್ನ ಮಾಡುತ್ತೇನೆ ಎಂದರು.

andolanait

Recent Posts

ಇಂದು, ನಾಳೆ ರಾಜ್ಯದ ಹಲವೆಡೆ ಮಳೆ ಮುನ್ಸೂಚನೆ: ಹವಾಮಾನ ಇಲಾಖೆ ಮಾಹಿತಿ

ಬೆಂಗಳೂರು: ರಾಜ್ಯದ ಹಲವೆಡೆ ಇಂದು ಹಾಗೂ ನಾಳೆ ಗುಡುಗು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ…

22 mins ago

ನೆತನ್ಯಾಹು 1 ಫೋನ್‌ ಕಾಲ್‌ ಎಲ್ಲವನ್ನೂ ಹಾಳು ಮಾಡಿತು: ಇರಾನ್‌ ಹೊಸ ಬಾಂಬ್‌

ಟೆಹರಾನ್:‌ ಇಸ್ಲಾಮಾಬಾದ್‌ನಲ್ಲಿ ನಡೆದ 21 ಗಂಟೆಗಳ ಮಾತುಕತೆ ವಿಫಲವಾದ ಬೆನ್ನಲ್ಲೇ ಇರಾನ್‌ ಮೊದಲ ಪ್ರತಿಕ್ರಿಯೆ ನೀಡಿದ್ದು, ಮಾತುಕತೆ ವಿಫಲವಾಗಲು ಇಸ್ರೇಲ್‌…

49 mins ago

ಕಾರು-ಬೈಕ್‌ ನಡುವೆ ಮುಖಾಮುಖಿ ಡಿಕ್ಕಿ: ಬೈಕ್‌ ಸವಾರ ಸಾವು

ಟಿ.ನರಸೀಪುರ: ಕಾರು ಹಾಗೂ ಬೈಕ್‌ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಟಿ ನರಸೀಪುರ-ಮೈಸೂರು…

1 hour ago

ಓಂಕಾರ್ ವಲಯದಲ್ಲಿ ಹತೋಟಿಗೆ ಬಾರದ ಒಂಟಿ ಸಲಗದ ಉಪಟಳ: ಅರಣ್ಯ ಇಲಾಖೆ ವಿರುದ್ಧ ರೈತರ ಆಕ್ರೋಶ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತಾ ಅರಣ್ಯ ಪ್ರದೇಶದ ಓಂಕಾರ್ ವ್ಯಾಪ್ತಿಯಲ್ಲಿ ಒಂಟಿ ಸಲಗದ ದಾಂಧಲೆ ಮಿತಿಮೀರಿದ್ದು. ರೈತರ ಅಪಾರ ಪ್ರಮಾಣದ…

1 hour ago

ಬಂಡೀಪುರದಲ್ಲಿ ಸಫಾರಿಗರಿಗೆ ಹುಲಿ ದರ್ಶನ: ಜಿಂಕೆ ಬೇಟೆಯಾಡಿದ ಸೀಳು ನಾಯಿ

ಗುಂಡ್ಲುಪೇಟೆ: ಪ್ರತಿಷ್ಠಿತ ಹುಲಿ ಸಂರಕ್ಷಿತಾರಣ್ಯ ಬಂಡೀಪುರದಲ್ಲಿ ಸಫಾರಿಗೆ ತೆರಳಿದ್ದವರಿಗೆ ವ್ಯಾಘ್ರ ದರ್ಶನದ ಜೊತೆಗೆ ಜಿಂಕೆಯನ್ನು ಬೇಟೆಯಾಡಿದ ಸೀಳುನಾಯಿ ದರ್ಶನವಾಗಿದ್ದು, ಅಪರೂಪದ…

2 hours ago

ಚಾರಣದಲ್ಲಿ ಮಾರ್ಗಸೂಚಿ ಕಟ್ಟುನಿಟ್ಟು ಅನುಸರಣೆಗೆ ಕ್ರಮ ಅಗತ್ಯ

ರಾಜ್ಯದ ಅರಣ್ಯ ಪ್ರದೇಶ ಒಂದು ವಾರದ ಅಂತರದಲ್ಲಿ ಕೇರಳ ರಾಜ್ಯದ ಇಬ್ಬರು ಹೆಣ್ಣುಮಕ್ಕಳ ಪೈಕಿ ಒಬ್ಬಾಕೆಯ ಪ್ರಾಣವನ್ನೇ ಬಲಿತೆಗೆದುಕೊಂಡರೆ, ಇನ್ನೊಬ್ಬಾಕೆಯ…

2 hours ago