ಬೆಂಗಳೂರು: ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್ ನಾಯಕರಿಗೆ ಯಾವ ನೈತಿಕತೆ ಇದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದ ಆರೋಪದ ಮೇಲೆ ಕಾಂಗ್ರೆಸ್ ನಾಯಕರು ಜಾಮೀನು ಪಡೆದಿದ್ದಾರೆ. ಹೀಗಿರುವಾಗ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ. ನಾನು ಯಾವ ತಪ್ಪು ಮಾಡಿದ್ದೇನೆ ಎಂದು ನನ್ನ ಫೆÇೀಟೊ ಬಳಸಿ ಅಭಿಯಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭ್ರಷ್ಟಚಾರದ ಆರೋಪಿಗಳು ಏನೇ ಅಭಿಯಾನ ಮಾಡಿದರೂ ಜನ ನಂಬುವುದಿಲ್ಲ. ಅದಕ್ಕೆ ಜನರು ಮನ್ನಣೆ ನೀಡುವುದಿಲ್ಲ. ಅವರದು ವೈಭವದ ಜೀವನ. ದುಬಾರಿ ಬೆಲೆ ಶೂ, ವಾಚು ಬಳಸುತ್ತಾರೆ. ಭತ್ತ, ಕಬ್ಬು, ಮಾವು ತೆಂಗು ಬೆಳೆ ಬಿತ್ತಿ ಬಂಗಾರದ ಬೆಳೆ ತೆಗೆಯುತ್ತಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮ ಪಕ್ಷ ಅಕಾರಕ್ಕೆ ಬಂದ ಮೇಲೆ ಸಾಕಷ್ಟು ಸುಧಾರಣೆಯಾಗಿದೆ. ಟೀಕೆ ಮಾಡಲು ವಿರೋಧ ಪಕ್ಷಗಳು ಆರೋಪ ಮಾಡಬಾರದು. ಅವರ ಬಳಿ ಭ್ರಷ್ಟಾಚಾರದ ಬಗ್ಗೆ ದಾಖಲೆಗಳಿದ್ದರೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಬಿಎಂಎಸ್ ಕಾಲೇಜು ವಿವಾದಕ್ಕೆ ಸಂಬಂಸಿದಂತೆ ಲೋಕಾಯುಕ್ತಕ್ಕೆ ದೂರು ಕೊಡಲು ಅವಕಾಶವಿದೆ ಕೊಡಲಿ. ಬೆಂಗಳೂರು ದೇಶದಲ್ಲೇ ನಂ.1 ನಗರವಾಗಿದ್ದು, ಎಲ್ಲಾ ರೀತಿಯಲ್ಲೂ ಬೆಳೆದಿದೆ. ವಿಶ್ವದಲ್ಲೇ 4ನೇ ಸ್ಥಾನ ಪಡೆದಿದ್ದು, ನಾಡಿನ ಜನರು ಹೆಮ್ಮೆ ಪಡಬೇಕು. ಆದರೆ ರಸ್ತೆಗುಂಡಿ ನೆಪವೊಡ್ಡಿ ಇಲ್ಲಸಲ್ಲದ ಆರೋಪ ಮಾಡಿ ಅಭಿಯಾನ ಮಾಡುವುದಕ್ಕೆ ಅವಕಾಶ ನೀಡಬಾರದು.
ವಿದ್ಯುತ್ ಮಾರ್ಗ, ಕುಡಿಯುವ ನೀರಿನ ಪೈಪ್ಗಳು, ಒಳಚರಂಡಿ ಮಾರ್ಗ ಸೇರಿದಂತೆ ಎಲ್ಲ ಸೌಲಭ್ಯಗಳ ಮಾರ್ಗಗಳು ರಸ್ತೆಯಲ್ಲೇ ಹಾದುಹೋಗಿವೆ. ನಿರಂತರ ಮಳೆ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಯಾರ ಕಾಲದಲ್ಲಿ ಗುಂಡಿ ಬಿದ್ದಿರಿಲಿಲ್ಲ ಹೇಳಿ ಎಂದು ಪ್ರಶ್ನಿಸಿದರು.
13 ಸಾವಿರ ಕಿ.ಮೀ ರಸ್ತೆ ಡಾಂಬರೀಕರಣವಾಗಿದೆ. ಮೆಟ್ರೊ ರೈಲು ಮಾರ್ಗ, ಮೇಲ್ಸೇತುವೆ, ಕೆಳಸೇತುವೆ ಕೆಲಸವಾಗುತ್ತಿದೆ. ಮಾರ್ಚ್ ವೇಳೆಗೆ ನಗರದ ಗುಂಡಿಗಳನ್ನು ಪೂರ್ಣವಾಗಿ ಮುಚ್ಚುತ್ತೇವೆ. ಯಾವ ನಗರದಲ್ಲಿ ಪ್ರವಾಹವಾಗುವುದಿಲ್ಲ. ಬೆಂಗಳೂರು ಬೆಳವಣಿಗೆ ಸಹಿಸದೆ ಅಸೂಯೆಯಿಂದ ಆರೋಪ ಮಾಡುತ್ತಾರೆ ಎಂದರು.
ಭ್ರಷ್ಟಾಚಾರದ ಬಗ್ಗೆ ಸದನದಲ್ಲಿ ಅಂಕಿ ಅಂಶಗಳ ಸಹಿ ಮಾತನಾಡಲು ಅವಕಾಶವಿತ್ತು. ಭ್ರಷ್ಟಾಚಾರದ ಬಗ್ಗೆ ದಾಖಲೆಗಳಿದ್ದರೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಸಾರ್ವಜನಿಕ ಜೀವನದಲ್ಲಿರುವವರು ಇಲ್ಲಸಲ್ಲದ ಆರೋಪ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೆಸರನ್ನು ಬಳಸದೆ ಪರೋಕ್ಷವಾಗಿ ಟೀಕಿಸಿದರು.