ಬೆಂಗಳೂರು: ಅಮಿತ್ ಶಾರವರ ಕರ್ನಾಟಕ ರಾಜ್ಯ ಬಿಜೆಪಿಗೆ ನೀಲಿ ಶಾಲು ಧರಿಸುವುದು ಈಗ ಹೊಸ ಫ್ಯಾಷನ್ ಆಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಬಿಜೆಪಿಯವರ ಹೆಗಲ ಮೇಲೆ ಕೇಸರಿ ಶಾಲು ಹೋಯ್ತು, ನೀಲಿ ಶಾಲು ಬಂತು. ನನಗೆ ಇದೊಂದು ವಿಶೇಷ ವಿಸ್ಮಯದಂತೆ ಭಾಸವಾಗುತ್ತಿದೆ ಎಂದು ಟೀಕಿಸಿದ್ದಾರೆ.
ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಜೈ ಭೀಮ್ ಎನ್ನುವುದು ಫ್ಯಾಷನ್ ಎಂದಿದ್ದ ಅಮಿತ್ ಶಾವರ ಬಿಜೆಪಿಗೆ, ನೀಲಿ ಶಾಲು ಧರಿಸುವುದು ಈಗ ಹೊಸ “ಫ್ಯಾಷನ್“ ಆಗಿದೆಯೇ?, ಕೇಸರಿ ಶಾಲಿನ ಮೇಲೆ ಬಿಜೆಪಿಗರಿಗೆ ಅಸಹನೆ ಉಂಟಾಗಿದೆಯೇ? ಅಥವಾ ಕೇಸರಿ ಶಾಲು ಕಂಡರೆ ನಿರ್ಲಕ್ಷ್ಯವೇ? ಎಂದು ಪ್ರಶ್ನಿಸಿದ್ದಾರೆ.
ಕೇಸರಿ ಶಾಲಿನಿಂದ ಸಂವಿಧಾನದ ಅನುಯಾಯಿಗಳನ್ನು ಎದುರಿಸಲು ಸಾಧ್ಯವಿಲ್ಲ ಎನ್ನುವುದು ಕರ್ನಾಟಕ ರಾಜ್ಯ ಬಿಜೆಪಿಗೆ ಅರ್ಥವಾದಂತಿದೆ ಎಂದು ಹೇಳಿದ್ದಾರೆ.
ನವೀನ್ ಡಿಸೋಜ ೩ ತಿಂಗಳಲ್ಲಿ ೧೩೮ ಎನ್‌ಡಿಪಿಎಸ್ ಪ್ರಕರಣ ದಾಖಲು; ೬ ಕೆ.ಜಿ. ೬೬೪ ಗ್ರಾಂ ಗಾಂಜಾ, ೩೫.೬೬ ಗ್ರಾಂ…
ಮಹಾದೇಶ್ ಎಂ.ಗೌಡ ಹನೂರು: ತಾಲ್ಲೂಕಿನ ೨೫ ಗ್ರಾಮ ಪಂಚಾಯಿತಿಗಳ ಪೈಕಿ ೨೧ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ೪೭ ಶುದ್ಧ ಕುಡಿಯುವ ನೀರಿನ…
ಎಸ್.ನಾಗಸುಂದರ್ ರೈತನಿಗೆ ಕೈಮೂಳೆ ಮುರಿತ: ಪಾಂಡವಪುರದಲ್ಲಿ ಅವಗಢ, ಸಾರ್ವಜನಿಕರ ಆಕ್ರೋಶ ಪಾಂಡವಪುರ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಅವೈಜ್ಞಾನಿಕವಾಗಿ ಮತ್ತು…
ಎರಡನೇ ಬಾರಿ ಪ್ರಶಸ್ತಿ ಪಡೆದು ಗಮನಸೆಳೆದ ಪಂಚಾಯಿತಿ ಭೇರ್ಯ ಮಹೇಶ್ ಕೆ.ಆರ್.ನಗರ : ತಾಲೂಕಿನ ಅರ್ಜುನಹಳ್ಳಿ ಗ್ರಾಮ ಪಂಚಾಯಿತಿ ಗ್ರಾಮೀಣಾಭಿವೃದ್ಧಿ…
ನಂಜನಗೂಡಿನ ಜಾತ್ರೆ ಅಂದು ಹೇಗಿತ್ತೋ ಇಂದೂ ಹಾಗೆ ತನ್ನ ಆಚರಣೆಯ ಮುಗ್ಧತೆ ಉಳಿಸಿಕೊಂಡಿದೆ ಡಾ.ಹೆಚ್.ಸಿ.ಮಹದೇವಪ್ಪ, ಸಚಿವರು ನಂಜನಗೂಡಿನಿಂದ ಕೆಲವೇ ಮೈಲಿಗಳ…
ಚಿರಂಜೀವಿ ಸಿ.ಹುಲ್ಲಹಳ್ಳಿ ಮೈಸೂರು: ಮಧ್ಯಪ್ರಾಚ್ಯ ದೇಶದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಜನಸಾಮಾನ್ಯರಿಗೆ ನಿತ್ಯ ಒಂದಲ್ಲಾ ಒಂದು ಬಿಸಿ ತಟ್ಟುತ್ತಿದೆ. ಕಟ್ಟಡ…