ದಾವಣಗೆರೆ– : ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಅಸ್ವಸ್ಥರಾಗಿ ಆಸ್ಪತ್ರೆ ದಾಖಲಾಗಿರುವ ಘಟನೆ ಭಾನುವಾರ ದಾವಣಗೆರೆಯ ಹರಿಹರದಲ್ಲಿ ನಡೆದಿದೆ.
ದಾವಣಗೆರೆ ಜಿಲ್ಲೆಯ ಹರಿಹರ ನಗರದ ಗುರುಭವನದಲ್ಲಿ ಆಯೋಜನೆ ಮಾಡಿದ್ದ ಬಂಡಾಯ ಸಾಹಿತ್ಯ ಕವಿಗೋಷ್ಠಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಹಿತಿ ಬರಗೂರು ರಾಮಚಂದ್ರಪ್ಪ ಆಗಮಿಸಿದ್ದರು.
ಈ ವೇಳೆ ಕಾರ್ಯಕ್ರಮ ಮುಗಿಸಿ ಕಾರನ್ನು ಹತ್ತುವಾಗ ತಲೆ ಚಕ್ರ ಬಂದು ಸುಸ್ತಾಗಿ ಬಿದ್ದಿದ್ದಾರೆ. ಕೂಡಲೇ ಅವರ ವಾಹನ ಚಾಲಕ ಬರಗೂರು ರಾಮಚಂದ್ರಪ್ಪ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರಿಗೆಗೆ ಚಿಕಿತ್ಸೆ ನೀಡಿದ ವೈದ್ಯರು ಯಾವುದೇ ಭಯಪಡುವ ಆತಂಕವಿಲ್ಲ ಎಂದು ತಿಳಿಸಿದ್ದಾರೆ.
ನಂತರ ಬರಗೂರು ಚೇತರಿಸಿಕೊಂಡರು. ಬಳಿಕ ದಾವಣಗೆರೆ ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ನಿರ್ಧಾರ ಮಾಡಲಾಯಿತು.
ನನಗೇನೂ ಆಗಿಲ್ಲ.ಯಾರೂ ಗಾಬರಿಪಡಬೇಕಾಗಿಲ್ಲ. ಸುಸ್ತಾಗಿದೆ ಅಷ್ಟೆ. ಆರಾಮವಾಗಿದ್ದೇನೆ. ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.
ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.
ತುಂಬಾ ಹೊತ್ತು ಒಂದು ಸ್ಥಳದಲ್ಲಿ ಕುಳಿತುಕೊಂಡು ಎದ್ದು ನಡೆಯುವಾಗ ಸ್ವಲ್ಪ ತಲೆ ಸುತ್ತು ಬಂದಂತಾಗಿದೆ. ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲು ಆಗಿದ್ದಾರೆ. ನಾಡಿನ ಜನತೆ ಆತಂಕ ಪಡುವ ಅಗತ್ಯತೆ ಇಲ್ಲ. ಯಾವುದೇ ಭಯಪಡುವ ವಾತಾವರಣ ಇಲ್ಲವೆಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ದಾವಣಗೆರೆಯಲ್ಲಿ ಬಂಡಾಯ ಸಾಹಿತಿಗಳಿದ್ದು, ಈ ಹಿಂದೆ ಬಂಡಾಯ ಸಾಹಿತಿಗಳ ಸಮಾಗಮಾ ಕಾರ್ಯಕ್ರಮವೂ ಜಿಲ್ಲೆಯಲ್ಲಿ ನಡೆದಿತ್ತು. ವಿಚಾರವಾದಿ ಯೋಗಿಶ್ ಮಾಸ್ಟರ್ ಸೇರಿದಂತೆ ಗೌರಿ ಲಂಕೇಶ್ ಸಹ ಬೆಣ್ಣೆ ನಗರಿಗೆ ಅವಿನಾಭಾವ ಸಂಬಂಧವಿದೆ..ಅಂತೆಯೇ ಬರಗೂರು ರಾಮಚಂದ್ರಪ್ಪರಿಗೂ ಸಹ ಇಲ್ಲಿ ನಂಟಿದ್ದು, ಹರಿಹರದಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ಭಾಗವಹಿಸಿದ್ದರು.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
ಕವಿಗೋಷ್ಠಿ ವೇಳೆ ಕುಸಿದು ಬಿದ್ದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ : ಆಸ್ಪತ್ರೆಗೆ ದಾಖಲು
Previous Articleಬಾಳೆಗೆ ನೀರು ಕಟ್ಟುವಾಗಲೇ ಪ್ರಾಣಬಿಟ್ಟ ರೈತ