ಬೆಂಗಳೂರು: ರಾಜಭವನ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಲೋಕಾಯುಕ್ತ ಎಡಿಜಿಪಿ ಅನುಮತಿ ಕೋರಿ ಅರ್ಜಿ ಸಲ್ಲಿಸಿರುವುದಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಅನೇಕ ಆರೋಪ ಮಾಡಿದ್ದರು. ಆದರೆ, ಇದೀಗ ಎಡಿಜಿಪಿ ಎಂ.ಚಂದ್ರಶೇಖರ್ ಪತ್ರದ ಮೂಲಕ ಹಂದಿಗೆ ಹೋಲಿಸಿ ʼಹಂದಿಗಳೊಂದಿಗೆ ಕುಸ್ತಿ ಆಡುವುದಿಲ್ಲʼ ಎಂದು ಎಚ್‌ಡಿ ಕುಮಾರಸ್ವಾಮಿ ಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ(ಸೆ.28) ದಂದು ಗಂಗೇನಹಳ್ಳಿ 1 ಎಕರೆ 11 ಗುಂಟೆ ಜಮೀನನ ಡಿನೋಟಿಫಿಕೇಷನ್ ಸಂಬಂಧಿಸಿದಂತೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ವಿಚಾರಣೆ ಮುಗಿಸಿಕೊಂಡು, ಬಳಿಕ ಪತ್ರಿಕಾಗೋಷ್ಠಿ ನಡೆಸಿ, ಎಡಿಜಿಪಿ ಚಂದ್ರಶೇಖರ್ ಅವರ ವಿರುದ್ಧ ಕಿಡಿಕಾರಿದರು.
ಎಚ್.ಡಿ.ಕುಮಾರಸ್ವಾಮಿ ಆರೋಪಿಸಿರುವುದ್ದೇನು?
ರಾಜ್ಯಪಾಲರ ಕಚೇರಿಯಲ್ಲಿ ಮಾಹಿತಿ ಸೋರಿಕೆಗೆ ಸಂಬಂಧಿಸಿದಂತೆ ಚಂದ್ರಶೇಖರ್‌ಗೆ ಎಷ್ಟು ಉದ್ಘಟತನ ಇರಬೇಕು? ಗವರ್ನರ್ ಕಚೇರಿ ಪರಿಶೀಲಿಸುತ್ತೇವೆ ಎಂದರೆ ಏನರ್ಥ? ನಿಮಗೆ ಸರ್ಕಾರ ಅನುಮತಿ ಕೊಟ್ಟಿತ್ತಾ? ಚಂದ್ರಶೇಖರ್ ಹಿನ್ನೆಲೆ ಗೊತ್ತಾ? ಆ ವ್ಯಕ್ತಿ ಹಿನ್ನೆಲೆ ಹುಡುಕಿ ಹೊರಟಾಗಲೇ ಗೊತ್ತಾಗಿದ್ದು, ಆ ವ್ಯಕ್ತಿ ಯುಪಿಎಸ್‌ಸಿಯಲ್ಲಿ ಆಯ್ಕೆಯಾಗಿ ಹಿಮಾಚಲದಲ್ಲಿ ಕೆಲಸ ಮಾಡಬೇಕಾದವನು ಎಂದು ಏಕವಚನದಲ್ಲಿಯೇ ಆರೋಪಿಸಿದ್ದಾರೆ.
ಎಡಿಜಿಪಿ ಚಂದ್ರಶೇಖರ್ ಹೇಳಿದ್ದೇನು?
ಈ ವಿಚಾರಗಳಿಗೆ ಉತ್ತರಿಸಿದ ಎಡಿಜಿಪಿ ಎಂ.ಚಂದ್ರಶೇಖರ್ ಅವರು, ಎಸ್‌ಐಟಿ ತನಿಖೆ ನಡೆಸುತ್ತಿರುವ ಅಪರಾಧ ಸಂಖ್ಯೆ 16/14ರ ಆರೋಪಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಸುಳ್ಳು, ಮಾನಹಾನಿಕಾರಕ, ಬೆದರಿಕೆ ಹಾಗೂ ದುರುದ್ದೋಶಪೂರಿತ ಆರೋಪಗಳನ್ನು ಮಾಡಿದ್ದಾರೆ. ರಾಜ್ಯಪಾಲರ ಹತ್ತಿರ ಈ ಆರೋಪಿಯೂ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದ ವಿಚಾರ ಎಲ್ಲರಿಗೂ ತಿಳಿದೆ ಇದೆ. ಪ್ರಸ್ತುತ ಜಾಮೀನಿನ ಮೇಲೆ ಹೊರಗಿರುವ ಈ ಆರೋಪಿ ನಮ್ಮ ಕರ್ತವ್ಯ ನಿಭಾಯಿಸದೇ ಇರುವಂತೆ ಮಾಡಲು ಈ ರೀತಿ ಆರೋಪ ಮಾಡುತ್ತಿದ್ದಾರೆ. ನನ್ನ ಮೇಲೆ ಆರೋಪಿಸುವ ಮೂಲಕ ಎಸ್‌ಐಟಿ ಅಧಿಕಾರಿಗಳಲ್ಲಿ ಭಯ ಸೃಷ್ಠಿಸುವುದು ಹಾಗೂ ಮನೋಬಲ ಕುಸಿಯುವಂತೆ ಮಾಡುವುದೇ ಇದರ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಹಂದಿಗಳೊಂದಿಗೆ ಕುಸ್ತಿ ಆಡುವುದಿಲ್ಲ ಎಂದ ಎಡಿಜಿಪಿ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಆರೋಪಿಸಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿದ ಎಡಿಜಿಪಿ ಚಂದ್ರಶೇಖರ್, ಖ್ಯಾತ ಚಿಂತಕ ಜಾರ್ಜ್ ಬರ್ನಾರ್ಡ್ ಷಾ ಅವರ ಹೇಳಿಕೆಯ ಮೂಲಕ ಉತ್ತರಿಸಿದ್ದಾರೆ. ಏನೆಂದರೆ ʼಹಂದಿಗಳ ಜೊತೆ ಎಂದಿಗೂ ಕುಸ್ತಿಯಾಡಬೇಡ. ಹಂದಿ ಮತ್ತು ನೀವು ಇಬ್ಬರೂ ಕೊಳಕಾಗುತ್ತಿರಾ. ಆದರೆ ಹಂದಿಯೂ ಕೊಳಕಾಗುವುದನ್ನೇ ಇಷ್ಟಪಡುತ್ತದೆ ಎಂದಿದ್ದಾರೆ ಎಂಬ ಹೇಳಿಕೆಯನ್ನು ನೀಡಿ ತಿರುಗೇಟು ನೀಡಿದ್ದಾರೆ.
ಒಬ್ಬ ಆರೋಪಿ ಎಷ್ಟೇ ಉನ್ನತ , ದೊಡ್ಡ ವ್ಯಕ್ತಿ ಮತ್ತು ಎಷ್ಟೇ ಶೌರ್ಯವಂತರಾಗಿದ್ದರೂ ಅವರು ಆರೋಪಿಯೇ. ಆರೋಪಿಗಳಿಂದ ಈ ರೀತಿಯಾದ ಆರೋಪಗಳು ಹಾಗೂ ಬೆದರಿಕೆಗಳು ಬಂದರೆ ನಾವು ನಮ್ಮ ಮನೋಬಲವನ್ನು ಕುಸಿಯದಂತೆ ನೋಡಿಕೊಳ್ಳಬೇಕು. ನಾನು ಎಸ್‌ಐಟಿ ಮುಖ್ಯಸ್ಥನಾಗಿ ಹೇಳುತ್ತಿದ್ದೇನೆ, ಭಯ ಅಥವಾ ರಾಗಾದ್ವೇಷಗಳಿಲ್ಲದೆ ಈ ಪ್ರಕರಣದಲ್ಲಿರುವ ಆರೋಪಿಗೆ ಶಿಕ್ಷೆ ಕೊಡಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ನಮ್ಮ ಕರ್ತವ್ಯವನ್ನು ನಿರ್ವಹಿಸುವ ವೇಳೆ ಅಪರಾಧಿಗಳು ಹಾಗೂ ಆರೋಪಿಗಳನ್ನು ಎದುರಿಸುವುದನ್ನು ನಾವು ತಪ್ಪಿಸಲು ಸಾಧ್ಯವಿಲ್ಲ. ಆದರೆ ಯಾವ ಕ್ರಿಮಿನಲ್, ಯಾವ ಆರೋಪಿಗಳ ಜೊತೆ ವಿರೋಧ ಕಟ್ಟಿಕೊಳ್ಳುತ್ತಾರೋ ಅವರೇ ನಮ್ಮ ಮೇಲೆ ಕೊಳಕು ಎಸೆಯುತ್ತಾರೆ. ಹೀಗಾಗಿ ನಾವು ನಮ್ಮ ಕರ್ತವ್ಯದಿಂದ ಹಿಂದೆ ಸರಿಯದೇ, ಭರವಸೆಯನ್ನು ಕಳೆದುಕೊಳ್ಳದೇ ಸತ್ಯಕ್ಕಾಗಿ ಹೋರಾಡಬೇಕು. ಸತ್ಯ, ದೇವರು ಹಾಗೂ ಕಾನೂನಿನ ಮೇಲೆ ನಂಬಿಕೆ ಇರಬೇಕು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿ ಇನ್ನಿತರ ಸಿಬ್ಬಂದಿಗಳಿಗೆ ಧೈರ್ಯ ತುಂಬಿದ್ದಾರೆ.
ಮೈಸೂರು : ಹುಣಸೂರು ವಿಭಾಗದ ಪಿರಿಯಾಪಟ್ಟಣ ವ್ಯಾಪ್ತಿಯ ಗುಳ್ಳೆದಹಳ್ಳ ರಾಜ್ಯ ಅರಣ್ಯದಿಂದ 2 ಕಿ.ಮೀ ದೂರದಲ್ಲಿರುವ ಕೊಪ್ಪ ವಿಭಾಗದಲ್ಲಿ ಗುಂಡೇಟಿನಿಂದ…
ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿದ 2025-2026ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ…
ಬೆಂಗಳೂರು : ಕರ್ನಾಟಕದಲ್ಲಿ ಪೂರ್ವ ಮುಂಗಾರು ಏಪ್ರಿಲ್ 2 ನೇ ವಾರದಿಂದ ಚುರುಕಾಗುತ್ತಿದ್ದು, ಏಪ್ರಿಲ್ 7ರಿಂದ ಮೂರು ದಿನಗಳು ರಾಜ್ಯದಲ್ಲಿ…
ವಾಷಿಂಗ್ಟನ್ : ಒಪ್ಪಂದಕ್ಕೆ ಬನ್ನಿ, ಇಲ್ಲವೇ ಶರಣಾಗಿ, ಇಲ್ಲದಿದ್ದರೆ ಮಂಗಳವಾರ ರಾತ್ರಿ 8 ಗಂಟೆಯ ನಂತರ ಮತ್ತಷ್ಟು ಮಾರಕ ದಾಳಿ…
ಮದುರೈ : ತಮಿಳುನಾಡಿನ ತೂತುಕುಡಿ ಜಿಲ್ಲೆಯ ಶಾಂತನ್‌ಕುಲಂ ಪೊಲೀಸ್ ಠಾಣೆ ಕಸ್ಟಡಿಯಿಂದಲೇ ತಂದೆ,ಮಗ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಸೋಮವಾರ…
ಬೆಂಗಳೂರು : ಕೌಶಲ್ಯ ಕ್ಷೇತ್ರದಲ್ಲಿ ಕರ್ನಾಟಕ ಈಗ ಇಡೀ ದೇಶದಲ್ಲಿ ಮುಂಚೂಣಿಯತ್ತ ಸಾಗುತ್ತಿದೆ. ಇತ್ತೀಚೆಗೆ ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ…