ಬೆಂಗಳೂರು: ಉದಯವಾಣಿ ದಿನಪತ್ರಿಕೆಯ ಸಂಸ್ಥಾಪಕರಾದ ಟಿ. ಮೋಹನದಾಸ್ ಪೈ ಅವರು ಇಂದು ನಿಧನರಾಗಿದ್ದರು.
ಅತ್ಯುತ್ತಮ ಆಡಳಿತ, ಕ್ರಮಬದ್ದ ಯೋಜನೆಗಳನ್ನು ರೂಪಿಸುವಲ್ಲಿ ನಿಪುಣರಾಗಿದ್ದ ಪೈ ಅವರು, ಪೈ ಪರಿವಾರದ ಕೀರ್ತಿಯನ್ನು ದಿಗಂತಕ್ಕೆ ಏರಿಸಿ, ಅಸಂಖ್ಯಾತ ಜನರಿಗೆ ಉದ್ಯೋಗವನ್ನು ನೀಡಿದ್ದರು.
1970ರಲ್ಲಿ ಉದಯವಾಣಿ ಪತ್ರಿಕೆಯನ್ನು ಆರಂಭಿಸಿದ ಮೋಹನದಾಸ ಪೈ ಅವರು, ಅಲ್ಪ ಕಾಲದಲ್ಲಿಯೇ ಅದನ್ನು ರಾಜ್ಯದ ಪ್ರಮುಖ ಪತ್ರಿಕೆಯನ್ನಾಗಿ ಕಟ್ಟಿದರು. ಮುದ್ರಣ, ಪ್ರಕಾಶನ, ಮುದ್ರಣ ತಂತ್ರಜ್ಞಾನದಲ್ಲಿ ನವಶಕೆ ಆರಂಭಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ.
ಮೋಹನದಾಸ ಪೈ ಅವರ ಅಗಲಿಕೆಯ ಕುರಿತು ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಂತಾಪ ಸೂಚಿಸಿದ್ದಾರೆ.