ಬೆಳ್ತಂಗಡಿ: ಇಲ್ಲಿನ ನಾರಾವಿಯ ಕುತ್ತೂರಿನಲ್ಲಿ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ತಡರಾತ್ರಿ ಸಂಭವಿಸಿದೆ.
ಸ್ಥಳೀಯ ನಿವಾಸಿ ಪ್ರಶಾಂತ್ ಹಾಗೂ ಬೆಳ್ಮಣ್ ನಿವಾಸಿ ದಿನೇಶ್ ಮೃತಪಟ್ಟವರು.
ಕುತ್ತೂರು ಪುರುಷ ಗುಡ್ಡೆ ಸಮೀಪ ಕೊಕ್ರಾಡಿ ನಾರಾವಿ ರಸ್ತೆಯಲ್ಲಿ ಬೈಕ್ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಪರಿಣಾಮ ಬೈಕ್‌ನಲ್ಲಿದ್ದ ಪ್ರಶಾಂತ್ ಮತ್ತು ದಿನೇಶ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕಾರ್ಯಕ್ರಮಕ್ಕೆಂದು ಹೋದವರು ಹಿಂತಿರುಗುವ ವೇಳೆ ರಾತ್ರಿ 12 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ವೇಣೂರು ಪೋಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಹೊಸದಿಲ್ಲಿ : ಪಹಲ್ಗಾಮ್ನ ಘಟನೆಯ ನಂತರ ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ಆವರಿಸಿದ್ದು, ಯಾವುದೇ ಸಂದರ್ಭದಲ್ಲೂ ದಾಳಿ…
ಮೈಸೂರು : ಪರಿಶಿಷ್ಟ ಜಾತಿಯ ಕುಟುಂಬಗಳ ಸಮೀಕ್ಷೆಯನ್ನು ಮನೆ ಮನೆ ಸಮೀಕ್ಷೆ, ವಿಶೇಷ ಶಿಬಿರ ಹಾಗೂ ಅನ್ಲೈನ್ ನಲ್ಲಿ ಸ್ವಯಂ…
ಬೆಂಗಳೂರು : ಪಹಲ್ಗಾಮ್ ದಾಳಿಯ ಪರಿಣಾಮದ ಬಳಿಕ ರಾಜ್ಯದಲ್ಲಿ ಅಧಿಕೃತವಾಗಿ ನೆಲೆಸಿರುವ ಪಾಕಿಸ್ತಾನದ ಪ್ರಜೆಗಳನ್ನು ಗಡೀಪಾರು ಮಾಡಲು ಅಗತ್ಯ ಕ್ರಮ…
ನವದೆಹಲಿ: ಇಸ್ರೊ ಮಾಜಿ ಅಧ್ಯಕ್ಷ ಹಾಗೂ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್ಇಪಿ) ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಕೆ.ಕಸ್ತೂರಿ ರಂಗನ್…
ಮೈಸೂರು : ಇಲ್ಲಿನ ಶಿವರಾಂಪೇಟೆಯ ಶೃಂಗಾರ ಹೋಟೆಲ್ ಹತ್ತಿರ ಇರುವ ಮನ್ನಾರ್ ಕೃಷ್ಣಶೆಟ್ಟಿ ಹಾಸ್ಟೆಲ್ ಗೋಡೆಗೆ ವಕ್ಫ್ ಆಸ್ತಿ ಎಂದು…
ಹನೂರು: ಹನೂರು ತಾಲೂಕು ಕೇಂದ್ರದಲ್ಲಿ ನೂತನ ಪ್ರಜಾಸೌಧ ಕಟ್ಟಡ ನಿರ್ಮಾಣ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದೆ ಇರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ…