ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಸಂಬಂಧ ಮಹೇಶ್‍ಶೆಟ್ಟಿ ತಿಮರೋಡಿ ಆರೋಪಿ ಚಿನ್ನಯ್ಯನ ಜೊತೆ ಮಾತನಾಡಿದ್ದ ವಿಡಿಯೋವೊಂದನ್ನು ಬಿಡುಗಡೆ ಮಾಡಲಾಗಿದೆ. ಇದೀಗ ಅದರ ಮುಂದುವರಿದ ಭಾಗ ಬಹಿರಂಗಗೊಂಡಿದೆ.
ದೂರುದಾರ ಚಿನ್ನಯ್ಯ, ಸೌಜನ್ಯಳ ಹೋರಾಟಗಾರರನ್ನು ಭೇಟಿ ಮಾಡಿದ ವೇಳೆ ಮಾತಾಡಿದ್ದಾರೆ ಎನ್ನಲಾಗಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 2 ನಿಮಿಷಗಳ 2ನೇ ವಿಡಿಯೋದಲ್ಲಿ ಕೆಲವು ಸ್ಫೋಟಕ ಮಾಹಿತಿ ಹೊರ ಬಿದ್ದಿದೆ. ಮಹೇಶ್ ತಿಮರೋಡಿ ಮನೆಯಲ್ಲಿ ಚಿನ್ನಯ್ಯ ಮಾತುಕತೆ ನಡೆಸಿದ ವಿಡಿಯೋ ಇದಾಗಿದೆ.
ಕಳೆದ 2023ರ ಆಗಸ್ಟ್‌ನಲ್ಲಿ ಈ ವಿಡಿಯೋ ಮಾಡಲಾಗಿದ್ದು, ಚಿನ್ನಯ್ಯ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಮೊದಲ ಬಾರಿಗೆ ಭೇಟಿ ನೀಡಿದ್ದ ವೇಳೆ ಈ ವಿಡಿಯೋ ರೆಕಾರ್ಡ್ ಮಾಡಲಾಗಿದೆ ಎನ್ನಲಾಗಿದೆ.
ವಿಡಿಯೋದಲ್ಲಿ ಆರೋಪಿ ಚಿನ್ನಯ್ಯ ಸ್ಟಾಟ್ ನಂ.17ರ ಬಗ್ಗೆ ಮಾತನಾಡಿದ್ದಾನೆ. ಗೊಮ್ಮಟ ಬೆಟ್ಟದಿಂದ ಬರುವ ಫಸ್ಟ್ ಟರ್ನ್ನಲ್ಲಿ ಏನಿಲ್ಲ ಅಂದ್ರೂ 70ಕ್ಕೂ ಹೆಚ್ಚು ಹೆಣ ಹೂತು ಹಾಕಿದ್ದೇನೆ. ಅದು ಸ್ಮಶಾನ ಅಲ್ಲ, ಬಸ್ ಸ್ಟ್ಯಾಂಡ್‍ನಿಂದ ತರಕಾರಿ ತೆಗೆದುಕೊಂಡು ಹೋಗುವ ಗಾಡಿಯಲ್ಲಿ ಹೆಣ ತಂದು ಹೂತು ಹಾಕುತ್ತಿದ್ದೆ. ಯಾವ ನೆಲ ಒಣಗಿರುತ್ತೋ ಅದನ್ನು ತೆಗೆದು ಹೂತು ಹಾಕುತ್ತಿದ್ದೆ. ಇನ್ನೂ ನೇತ್ರಾವತಿ ತೀರದಲ್ಲಿ ಹೆಣ ಹೂತುಹಾಕಿದ್ದಕ್ಕೆ ಲೆಕ್ಕವೇ ಇಲ್ಲ.
ಪ್ರಾಥಮಿಕ ಶಾಲೆಯ ಹಿಂಭಾಗದ ಭಟ್ರ ಮನೆಯ ಬಾವಿಯಲ್ಲಿ ಒಂದು ಹೆಣ ಸಿಕ್ಕಿತ್ತು. ಅಲ್ಲಿ ಏನಾಯ್ತು ಅಂತಾ ಗೊತ್ತಿಲ್ಲ. ನೇತ್ರಾವತಿಯಲ್ಲಿ ಒಂದು ಹೆಣ ತೆಗೆದಿದ್ದೆ. ಅದೇ ದಿನ ಪೊಲೀಸರು ನನ್ನನ್ನು ಭಟ್ರ ಮನೆಗೆ ಕರೆದುಕೊಂಡು ಹೋದರು. ಅಲ್ಲಿ ಕೇಳಿದ್ರೆ ಹುಡುಗಿ ಫೇಲ್ ಆಗಿದ್ದಕ್ಕೆ ಬಾವಿಗೆ ಹಾರಿದ್ದಳು ಎಂದಿದ್ದರು. ನಾನು ಹೆಣ ಮೇಲೆ ಹಾಕಿ ವಾಪಸ್ ಬಂದೆ. ಜೊತೆಗೆ ಬಿಳಿ ಸೀರೆಯ ಕೇರಳ ಮೂಲದ ಹೆಂಗಸಿನ ಹೆಣವೊಂದನ್ನು ಹೂತು ಹಾಕಿದ್ದೇನೆ ಎಂದಿದ್ದಾನೆ.
ಗೊಮ್ಮಟ ಬೆಟ್ಟದಿಂದ ಬರುವ ಫಸ್ಟ್ ಟರ್ನ್ನಲ್ಲಿ ಏನಿಲ್ಲ ಅಂದ್ರೂ 70ಕ್ಕೂ ಹೆಚ್ಚು ಹೆಣ ಹೂತು ಹಾಕಿದ್ದೇನೆ ಎಂದಿದ್ದಾನೆ. ಆ ಟರ್ನ್ ನಲ್ಲಿ ಬಿಳಿ ಸೀರೆಯ ಕೇರಳ ಮೂಲದ ಹೆಂಗಸಿನ ಹೆಣ ಹೂತು ಹಾಕಿದ್ದೇನೆ ಎಂದು ಆತ ಹೇಳಿದ್ದಾನೆ.
ಹೊಸದಿಲ್ಲಿ : ಮಧ್ಯಪ್ರಾಚ್ಯದಲ್ಲಿ ಇರಾನ್-ಇಸ್ರೇಲ್-ಅಮೆರಿಕಾ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ವಾಯುಪ್ರದೇಶದಲ್ಲಿ ತುರ್ತು ನಿರ್ಬಂಧಗಳು ಜಾರಿಯಾಗಿರುವುದರಿಂದ ದೆಹಲಿಯಿಂದ ಮ್ಯಾಂಚೆಸ್ಟರ್‌ಗೆ ಹೋಗುತಿದ್ದ ಇಂಡಿಗೊ…
ಮೈಸೂರು : ಮೈಸೂರು ಅಭಿವೃದ್ಧಿ ಪ್ರಾಧಿಕಾರ (MDA) ಈ ಬಾರಿಯ ಆರ್ಥಿಕ ವರ್ಷದ ಬಜೆಟ್‌ನಲ್ಲಿ ನಗರದ ಸಮಗ್ರ ಅಭಿವೃದ್ಧಿಗೆ ತೀವ್ರ…
ಮೈಸೂರು : ಮನೆಗಳ್ಳತನ, ವಾಹನ ಕಳ್ಳತನ, ದರೋಡೆ ಸೇರಿದಂತೆ ಕಳೆದ ಎರಡು ತಿಂಗಳಲ್ಲಿ ಜಿಲ್ಲೆಯಲ್ಲಿ ನಡೆದಿದ್ದ 24 ಅಪರಾಧ ಪ್ರಕರಣಗಳನ್ನು…
ಮೈಸೂರು : ರಾಜ್ಯ ಸರ್ಕಾರದ ʻಪಂಚ ಗ್ಯಾರಂಟಿʼ ಯೋಜನೆಗಳಿಂದ ಮಹಿಳಾ ಸಬಲೀಕರಣ ಸಾಧ್ಯವಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ…
ಹನೂರು : ಪಟ್ಟಣದಲ್ಲಿ ನಡೆಯಲಿರುವ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರೆಯ ಪ್ರಯುಕ್ತ ಮುಂಜಾಗ್ರತಾ ಕ್ರಮವಾಗಿ ಎರಡು ದಿನಗಳ ಕಾಲ ಹನೂರು…
ಬೆಂಗಳೂರು : ಮಂಡ್ಯ, ಚಾಮರಾಜನಗರ, ಹೊಳೆನರಸೀಪುರದಿಂದ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುವ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ತುರ್ತು ಸೇವೆಗಳ ಅನುಕೂಲಕ್ಕಾಗಿ ಆಸ್ಪತ್ರೆಯಲ್ಲಿ…