ರಾಜ್ಯ

ಜೈಲಿನ ರಾಜಾತಿಥ್ಯ ವಿಡಿಯೋ ಪ್ರಕರಣದಲ್ಲಿ ಧನ್ವೀರ್‌ಗೆ ಸಂಕಷ್ಟ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎನ್ನಲಾದ ವಿಡಿಯೋ ವೈರಲ್‌ ಪ್ರಕರಣದಲ್ಲಿ ನಟ ಧನ್ವೀರ್‌ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ ಎಂದು ವರದಿಯಾಗಿದೆ.

ವಿಡಿಯೋ ಹಂಚಿಕೆಯಲ್ಲಿ ಧನ್ವೀರ್‌ ಅವರ ಮೊಬೈಲ್‌ ಬಳಕೆಯಾಗಿರುವುದಕ್ಕೆ ಸಾಕ್ಷ್ಯ ಲಭ್ಯವಾಗಿದೆ ಎಂದು ಪಬ್ಲಿಕ್‌ ಟಿವಿ ವರದಿ ತಿಳಿಸಿದೆ. ಮೊಬೈಲ್‌ನಿಂದ ಅಳಿಸಲಾದ ಡೇಟಾವನ್ನು ಮರುಪಡೆದ ವರದಿ ಇದೀಗ ಸಿಸಿಬಿ ಪೊಲೀಸರ ಕೈ ಸೇರಿದೆ ಎನ್ನಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈ ಹಿಂದೆ ಧನ್ವೀರ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಅವರ ಮೊಬೈಲ್‌ ಪರಿಶೀಲಿಸಿದಾಗ ವಿಡಿಯೋಗಳು ಪತ್ತೆಯಾಗದ ಹಿನ್ನೆಲೆಯಲ್ಲಿ, ಅಳಿಸಲಾದ ಮಾಹಿತಿಯನ್ನು ಮರುಪಡೆಯಲು ಫೋನ್‌ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

ಇದೀಗ ದೊರೆತಿರುವ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಬಂಧನ ವಾರಂಟ್‌ ಪಡೆಯಲು ಪೊಲೀಸರು ಮುಂದಾಗಿದ್ದಾರೆ ಎಂದು ಸುದ್ದಿಯಲ್ಲಿ ತಿಳಿಸಲಾಗಿದೆ.

ಜೈಲಿನೊಳಗೆ ಕೈದಿಗಳು ಮೊಬೈಲ್‌ ಬಳಸುತ್ತಿರುವ ವಿಡಿಯೋ ವೈರಲ್‌ ಆದ ಬಳಿಕ ಸಿಸಿಬಿ ಈ ಕುರಿತು ತನಿಖೆ ಆರಂಭಿಸಿತ್ತು. ಪ್ರಕರಣದಲ್ಲಿ ಧನ್ವೀರ್‌ ವಿರುದ್ಧದ ಆರೋಪಗಳ ಕುರಿತು ತನಿಖೆ ಮುಂದುವರಿದಿದೆ.

ಆಂದೋಲನ ಡೆಸ್ಕ್

Recent Posts

ದೇವೀರಮ್ಮನ ಜಾತ್ರೆಗೆ ಹೊಸ ನಿಯಮ — ರಾತ್ರಿ ಬೆಟ್ಟ ಹತ್ತಲು ನಿಷೇಧ, ಎರಡು ದಿನ ಭಕ್ತರಿಗೆ ಅವಕಾಶ!

ಚಿಕ್ಕಮಗಳೂರು: ಕಾಫಿನಾಡಿನ ಶಕ್ತಿದೇವತೆ ಬಿಂಡಿಗ ದೇವೀರಮ್ಮನ ದರ್ಶನಕ್ಕೆ ತೆರಳುವ ಭಕ್ತರೇ ಗಮನಿಸಿ… ಈ ಬಾರಿಯ ಜಾತ್ರಾ ಮಹೋತ್ಸವಕ್ಕೆ ಹೊಸ ನಿಯಮಗಳನ್ನು ಜಾರಿಗೆ…

11 mins ago

ಓದುಗರ ಪತ್ರ: ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ನೀಡಿ

ಕಟ್ಟಡ ನಿರ್ಮಾಣ ಕಾರ್ಮಿಕರು ದಿನ ನಿತ್ಯ ಕೂಲಿ ಕೆಲಸಕ್ಕಾಗಿ ೫೦ರಿಂದ ೮೦ ಕಿ.ಮೀ. ಪ್ರಯಾಣ ಮಾಡುತ್ತಾರೆ. ಬಹುತೇಕ ಕಾರ್ಮಿಕರ ಬಳಿ…

2 hours ago

ಓದುಗರ ಪತ್ರ: ಎಫ್‌ಡಿಎ ಮತ್ತು ಎಸ್‌ಡಿಎ ಪರೀಕ್ಷಾ ವೇಳಾಪಟ್ಟಿ ಬದಲಿಸಿ

ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಸಹಾಯಕ ಸೇರಿದಂತೆ ಒಟ್ಟಾರೆ ಐದು ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಾತಿ ಪರೀಕ್ಷೆ ಸಂಬಂಧ…

2 hours ago

ಓದುಗರ ಪತ್ರ: ಕಾಫಿ, ಟೀ ದರ ಹೆಚ್ಚಳ ಗ್ರಾಹಕರಿಗೆ ಹೊರೆಯಾಗದಿರಲಿ

ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಇದರೊಂದಿಗೆ ಹಾಲಿನ ಬೆಲೆಯೂ ಹೆಚ್ಚಾಗಿರುವುದರಿಂದ ಹೋಟೆಲ್ ಮಾಲೀಕರು ಕಾಫಿ, ಟೀಗೆ…

2 hours ago

ಓದುಗರ ಪತ್ರ: ಆರೋಗ್ಯ ವಿಮೆ ಬಿಲ್ ಮಾಫಿಯಾ ತಡೆಯಿರಿ

ಇಂದಿನ ಆರೋಗ್ಯ ಕ್ಷೇತ್ರದಲ್ಲಿ ಚಿಕಿತ್ಸೆಗಾಗಿ ವಿಮಾ ಸೌಲಭ್ಯವಿದ್ದರೂ ರೋಗಿಗೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಖಾಸಗಿ ಆಸ್ಪತ್ರೆಗಳು…

2 hours ago

ಸಪ್ತ ಭಾಷೆಗಳಲ್ಲಿ ಸಿಗಲಿದೆ ಮೈಸೂರು ಚಿತ್ರಣ!

ಕೇಶವ್ ಎಂ. ಮೈಸೂರು: ದಕ್ಷಿಣ ಭಾರತದಲ್ಲಿನ ಪ್ರವಾಸಿಗರ ನೆಚ್ಚಿನ ತಾಣ ಅರಮನೆ ನಗರಿ ಮೈಸೂರು. ಇದೀಗ ಮೈಸೂರು ಪ್ರವಾಸೋದ್ಯಮ ಇಲಾಖೆಯ…

2 hours ago