ಬೆಂಗಳೂರು: ನಷ್ಟದಲ್ಲಿರುವ ರಾಜ್ಯ ರಸ್ತೆ ಸಾರಿಗೆಯ ಇಲಾಖೆ ನಾಲ್ಕು ನಿಗಮಗಳ ನೌಕರರ ಭವಿಷ್ಯ ನಿಧಿ ಪಾವತಿ ಹಾಗೂ ಇಂಧನ ವೆಚ್ಚಕ್ಕೆ ರಾಜ್ಯ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡಿದೆ.

ನಾಲ್ಕೂ ಸಾರಿಗೆ ಸಂಸ್ಥೆಗಳಿಗೆ ಭವಿಷ್ಯ ನಿಧಿ ಪಾವತಿಗಾಗಿ .800 ಕೋಟಿ ರೂ. ಹಾಗೂ ಇಂಧನ ವೆಚ್ಚಕ್ಕಾಗಿ ಒಂದು ತಿಂಗಳಿಗೆ ರೂ.200 ಕೋಟಿ ರೂ.ಗಳಂತೆ ಎರಡು ತಿಂಗಳ ಅವಧಿಯ ಮೊತ್ತ ರೂ.400 ಕೋಟಿ ಸೇರಿಸಿ ಒಟ್ಟಾರೆ .1200 ಕೋಟಿ ರೂ.ಗಳನ್ನು ಒದಗಿಸಲು ಕೋರಲಾಗಿತ್ತು. ಇದಲ್ಲದೇ ಭವಿಷ್ಯ ನಿಧಿ ವಿಳಂಬ ಪಾವತಿಗಾಗಿ ಮಾಡಬೇಕಾದ ಬಡ್ಡಿ ಮೊತ್ತ 57 ಕೋಟಿ ರೂ.ಗಳಾಗಿವೆ.

ರಾಜ್ಯ ರಸ್ತೆ ಸಾರಿಗೆ ನಿಗಮಗಳ ಭವಿಷ್ಯ ನಿధి ಮೊತ್ತವು ಶಾಸನಬದ್ಧ ಹೊಣೆಗಾರಿಕೆಯಾಗಿದ್ದು, ನಿಗದಿತ ದಿನಾಂಕದೊಳಗೆ ಪಾವತಿಯಾಗದಿರುವುದರಿಂದ ಈ ಬಗ್ಗೆ ಪ್ರಾದೇಶಿಕ ಭವಿಷ್ಯ నిధి ಆಯುಕ್ತರಿಂದ ಗಂಭೀರ ಅಕ್ಷೇಪಣೆ ಉಂಟಾಗ ಬಹುದಾಗಿದೆ. ಅಲ್ಲದೇ ಸಂಸ್ಥೆಗೆ ನೀಡಿರುವ ಭವಿಷ್ಯ ನಿಧಿ ವಿನಾಯಿತಿ (PF Exemption) ಹಿಂಪಡೆಯುವ ಸಾಧ್ಯತೆಯೂ ಇತ್ತು. ಇದರ ಜತೆಗೆ ನಿಗಮದ ಮೇಲೆ ಕಾನೂನಾತ್ಮಕವಾಗಿ ಕ್ರಮ ಜರುಗಿಸಲು ಭವಿಷ್ಯ ನಿಧಿ ಕಾಯ್ದೆಯಲ್ಲಿ ಅವಕಾಶವಿರುತ್ತದೆ. ಆದ್ದರಿಂದ ಸಾರಿಗೆ ನಿಗಮದ ನೌಕರರ ಬಾಕಿ ಉಳಿದಿರುವ ಭವಿಷ್ಯ ನಿధి ಮೊತ್ತದ ಪಾವತಿ ಗಾಗಿ ವಿಶೇಷ ಸಂದರ್ಭ ಎಂದು ಪರಿಗಣಿಸಿ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಕೋರಲಾಗಿತ್ತು.

ಬಿಡುಗಡೆ ಮಾಡಿರುವ ಅನುದಾನವನ್ನು ಉಲ್ಲೇಖಿತ ಉದ್ದೇಶಕ್ಕಾಗಿ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಬೇಕು. ಈ ಸಂಬಂಧ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು ಎಂದು ಷರತ್ತು ವಿಧಿಸಲಾಗಿದೆ.
