ಬೆಂಗಳೂರು: ಸಿದ್ದರಾಮಯ್ಯ ಓಡಿಸುವ ಟ್ರೈನ್ಗೆ ಮುಹಮ್ಮದ್ ಜಿನ್ನಾ ಅಥವಾ ಬಿಲ್ ಲಾಡೆನ್ ಹೆಸರಿಡಲಿ ಎಂದು ಕಂದಾಯ ಸಚಿವ ಆರ್. ಅಶೋಕ್ ವ್ಯಂಗ್ಯವಾಗಿ ಟೀಕಿಸಿದರು.
ರೈಲು ಹೆಸರು ಬದಲಾವಣೆಗೆ ಸಿದ್ದರಾಮಯ್ಯ ವಿರೋಧಕ್ಕೆ ಪ್ರತಿಕ್ರಿಯೆ ನೀಡಿದ ಆರ್ ಅಶೋಕ್, ಸಿದ್ದರಾಮಯ್ಯ ಇನ್ನು ಸಾವಿರ ಟ್ರೈನ್ ಆರಂಭಿಸಿ ಅದಕ್ಕೆ ಮೊಹಮ್ಮದ್ ಜಿನ್ನಾ ಎಂದು ಹೆಸರಿಡಲಿ, ಅಥವಾ ಬಿನ್ ಲಾಡೆನ್ ಟ್ರೈನ್ ಎಂದು ಹೆಸರಿಡಲಿ, ಘಜ್ನಿ ಮುಹಮ್ಮದ್ ಎಂದು ಹೆಸರಿಡಲಿ. ಜನರು ಸನ್ಮಾನ ಮಾಡುತ್ತಾರೆ. ನಮ್ಮ ಆಯ್ಕೆ ಪುಣ್ಯ ಪುರುಷ ಒಡೆಯರ ಹೆಸರು ಇಟ್ಟಿದ್ದಕ್ಕೆ ಧನ್ಯವಾದ ಸೂಚಿಸುತ್ತೇವೆ ಎಂದರು. ಎಲ್ಲಾ ಮುಸ್ಲಿಮರು ಕೆಟ್ಟವರಲ್ಲ, ಬಹಳ ಜನ ಒಳ್ಳೆಯವರು ಇದ್ದಾರೆ. ಪಿಎಫ್ ಐ ವಿರೋಧ ಮಾಡುತ್ತೇವೆ. ಭಾರತಕ್ಕೆ ಜೈ ಅನ್ನುವವರು ಭಾರತೀಯರೇ ಎಂದು ಹೇಳಿದರು.
ಮೈಸೂರು-ಬೆಂಗಳೂರು ಟಿಪ್ಪು ಎಕ್ಸ್ಪ್ರೆಸ್ ರೈಲಿನ ಹೆಸರನ್ನು ಒಡೆಯರ್ ಎಕ್ಸ್ಪ್ರೆಸ್ ರೈಲು ಎಂದು ಬದಲಾವಣೆ ಮಾಡಿದ ವಿಚಾರವಾಗಿ ಮಾತನಾಡಿ, ಸರ್ಕಾರ ಉತ್ತಮ ಉದ್ದೇಶದಿಂದ ಟಿಪ್ಪು ಸುಲ್ತಾನ್ ಹೆಸರನ್ನು ಕೈಬಿಟ್ಟಿದೆ. ಮೈಸೂರು ಮಂಡ್ಯ ಬೆಂಗಳೂರಿಗರೇ ನೀರನ್ನು ಕೊಟ್ಟವರು, ಕೆ ಆರ್ ಎಸ್ ಕಟ್ಟಿದ ಆಧುನಿಕ ಕರ್ಣ ಒಡೆಯರ್ ಹೆಸರಿಟ್ಟಿದೆ ಎಂದರು.