ಬೆಂಗಳೂರು : ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಭಕ್ತರು ಹಾಗೂ ಪ್ರವಾಸಿಗರಿಗೆ ಪ್ರವಾಸಿತಾಣಗಳನ್ನು ಪರಿಚಯಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ)ದ ವತಿಯಿಂದ ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ಸ್ಥಳಗಳಿಂದ ಟೂರ್ ಪ್ಯಾಕೇಜ್ ಕಲ್ಪಿಸಲಾಗಿದೆ.
ವೋಲ್ವೊ, ಅಶ್ವಮೇಧ ಹಾಗೂ ಕರ್ನಾಟಕ ಸಾರಿಗೆಗಳಲ್ಲಿ ಟೂರ್ ಪ್ಯಾಕೇಜ್ ರೂಪಿಸಿದ್ದು, ಅ.೨೨ರವರೆಗೆ ಈ ಸೌಲಭ್ಯವಿರುತ್ತದೆ. ಬೆಂಗಳೂರಿನಿಂದ ವೋಲ್ವೊ ಬಸ್ ಮೂಲಕ ಹಾಸನ ತಲುಪಿ, ಹಾಸನಾಂಬೆ ದೇವಿ, ಸಿದ್ದೇಶ್ವರ ದೇವಾಲಯ, ದೇವಿಗೆರೆ ಕಲ್ಯಾಣಿ, ಕೆಂಚಮನ ಹೊಸಕೋಟೆ ದೇವಾಲಯದ ಸ್ಥಳಗಳನ್ನು ವೀಕ್ಷಿಸಬಹುದಾಗಿದ್ದು, ಒಟ್ಟು ೪೭೦ ಕಿ.ಮೀ. ಪ್ರಯಾಣವಿದ್ದು, ಬಸ್ಸು ಬೆಳಿಗ್ಗೆ ೬ ಗಂಟೆಗೆ ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊರಡಲಿದೆ.
ವಯಸ್ಕರಿಗೆ (ಹಾಸನಾಂಬೆ ದೇವಿ ೧,೦೦೦ ರೂ. ಟಿಕೆಟ್ ದರ್ಶನ ಸೌಲಭ್ಯ ಸೇರಿದಂತೆ) ೨,೫೦೦ ರೂ., ಮಕ್ಕಳಿಗೆ (೧,೦೦೦ ರೂ. ಟಿಕೆಟ್‌ನ ದರ್ಶನ ಸೌಲಭ್ಯ ಸೇರಿದಂತೆ) ೨,೨೦೦ ರೂ. ದರ ನಿಗದಿ ಮಾಡಲಾಗಿದೆ.
ಇನ್ನು ಇದೇ ಮಾರ್ಗದಲ್ಲಿ ಹೊರಡುವ ಅಶ್ವಮೇಧ ಬಸ್‌ನಲ್ಲಿ ವಯಸ್ಕರಿಗೆ ೧,೧೦೦ ರೂ. ಟಿಕೆಟ್, ದೇವಿಯ ದರ್ಶನ ಸೇರಿದಂತೆ ೨,೦೦೦ ರೂ., ಮಕ್ಕಳಿಗೆ ೧,೧೦೦ ರೂ. ಟಿಕೆಟ್‌ನ ದರ್ಶನ ಸೌಲಭ್ಯ ಸೇರಿದಂತೆ ೧,೯೦೦ ರೂ. ದರ ಇರಲಿದೆ.
ಇದನ್ನೂ ಓದಿ:-ಪಿಎಫ್‌ಐ ಸಂಘಟನೆ ಬೆಂಬಲಿಸಿ ಪೋಸ್ಟ್ : ಧಾರ್ಮಿಕ ಮುಖಂಡನ ಬಂಧನ
ಸಾರಿಗೆ ಬಸ್ ಮೂಲಕ ಹಾಸನ, ಆಲೂರು ಮಾರ್ಗವಾಗಿ ಹಾಸನಾಂಬೆ ದೇವಾಲಯ, ಸಿದ್ದೇಶ್ವರ ದೇವಾಲಯ, ದೇವಿಗೆರೆ ಕಲ್ಯಾಣಿ, ಕೆಂಚಮನ ಹೊಸಕೋಟೆ ದೇವಾಲಯ ವೀಕ್ಷಿಸಬಹುದಾಗಿದ್ದು, ಒಟ್ಟು ೯೦ ಕಿ.ಮೀ. ಪ್ರಯಾಣ ಇರುತ್ತದೆ.
ಹಾಸನ ನಗರ ಬಸ್ ನಿಲ್ದಾಣದಿಂದ ಬೆಳಿಗ್ಗೆ ೮ ಗಂಟೆಗೆ ಬಸ್ ಹೊರಡಲಿದ್ದು, ಹಾಸನಾಂಬೆ ದೇವಿಯ ೧,೦೦೦ ರೂ. ಟಿಕೆಟ್ ದರ್ಶನ ಸೌಲಭ್ಯ ಸೇರಿದಂತೆ ೧,೪೦೦ ರೂ., ಮಕ್ಕಳಿಗೆ ೧,೩೦೦ ರೂ. ಟಿಕೆಟ್ ದರ ಇರಲಿದೆ.
ಜಿಲ್ಲೆಯ ಪ್ರವಾಸಿ ತಾಣಗಳಾದ ಬೇಲೂರು ಚನ್ನಕೇಶದೇವಾಲಯ, ಯಗಚ ಜಲಾಶಯ, ಪುಷ್ಪಗಿರಿ, ಹೊಯ್ಸಳೇಶ್ವರ ದೇವಾಲಯ, ಶ್ರವಣಬೆಳಗೊಳ, ವಿಂದ್ಯಾಗಿರಿ ಬೆಟ್ಟ, ಚಂದಗಿರಿಬೆಟ್ಟ, ಮಾಲೆಕಲ್ಲು ತಿರುಪತಿ, ಜೇನುಕಲ್ಲು ಸಿದ್ದೇಶ್ವರ, ಹೇಮಾವತಿ ಜಲಾಶಯ, ಗೊರೂರು ಜಲಾಶಯ ಸೇರಿದಂತೆ ಮತ್ತಿತರ ಪ್ರವಾಸಿ ತಾಣಗಳಿಗೆ ಬಸ್ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ಮೊ.ಸಂ. ೭೭೬೦೯ ೯೦೫೧೮/ ೭೭೬೦೯ ೯೦೫೧೯/ ೭೭೬೦೯ ೯೦೫೨೩ ಸಂಪರ್ಕಿಸಬಹುದು. ಜೊತೆಗೆ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಮಾಹಿತಿ ಲಭ್ಯವಿದೆ.
ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಇಸ್ಕಾನ್ ಸಂಸ್ಥೆಯ ಅಕ್ಷಯಪಾತ್ರೆ ಫೌಂಡೇಶನ್ ಸಹಯೋಗದೊಂದಿಗೆ…
ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅವರ ಕಚೇರಿಯಲ್ಲಿ ಸಮವಸ್ತ್ರದಲ್ಲಿದ್ದಾಗಲೇ ಮಹಿಳೆಯೊಂದಿಗೆ ನಡೆಸಿದ್ದಾರೆ ಎನ್ನಲಾದ ರಾಸಲೀಲೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್…
ಉತ್ತರ ಅಟ್ಲಾಂಟಿಕ್ ಸಮುದ್ರದಲ್ಲಿ ಇರುವ ವಿಶ್ವದ ಅತಿದೊಡ್ಡ ದ್ವೀಪವಾಗಿರುವ ಹಾಗೂ ಡೆನ್ಮಾರ್ಕ್ ದೇಶದ ನಿಯಂತ್ರಣದಲ್ಲಿರುವ ‘ಗ್ರೀನ್ ಲ್ಯಾಂಡ್’ ದ್ವೀಪವನ್ನು ತನ್ನ…
ನವೀನ್ ಡಿಸೋಜ ಅರಣ್ಯ ಇಲಾಖೆಯಿಂದ ಬೆಂಕಿ ರೇಖೆ ನಿರ್ಮಾಣ ಕಾರ್ಯ ಚುರುಕು; ಜನರಲ್ಲಿ ಜಾಗೃತಿ ಮೂಡಿಸಲು ಚಿಂತ ಮಡಿಕೇರಿ: ಬೇಸಿಗೆ…
ಎಂ ಯೋಗಾನಂದ್ ಜ.೨೩ರಿಂದ ೨೬ರವರೆಗೆ ಜಾತ್ರಾ ಮಹೋತ್ಸವ; ಮೆರುಗು ನೀಡಲಿರುವ ಗಾಡಿ ಓಡಿಸುವ ಸ್ಪರ್ಧೆ ಹುಣಸೂರು: ತಾಲ್ಲೂಕಿನ ಬಾಚಳ್ಳಿ ಗ್ರಾಮದಲ್ಲಿ…