ಹಿಂದೂಪರ ಸಂಘಟನೆಗಳಿಂದ ಪಂಜಿನ ಮೆರವಣಿಗೆ

ಮಳವಳ್ಳಿ: ಬಾಂಗ್ಲಾದಲ್ಲಿ ಇತ್ತೀಚೆಗೆ ನಿರಂತರವಾಗಿ ನಡೆುುಂತ್ತಿರುವ ಹಿಂದೂಗಳ ಮೇಲಿನ ಅತ್ಯಾಚಾರ, ಹಲ್ಲೆ, ದೇವಸ್ಥಾನಗಳ ಧ್ವಂಸ ಖಂಡಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಬೃಹತ್ ಪಂಜಿನ ಮೆರವಣಿಗೆ ನಡೆಸಿದರು.

ಪಟ್ಟಣದ ಪುರಸಭೆ ಆವರಣದಿಂದ ಮೆರವಣಿಗೆ ಹೊರಟ ವಿಶ್ವ ಹಿಂದು ಪರಿಷತ್, ಆರ್‌ಎಸ್‌ಎಸ್, ಬಜರಂಗದಳ ಹಾಗೂ ಯುವ ಬ್ರಿಗೇಡ್ ವೇದಿಕೆುಂ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಪಂಜಿನ ಮೆರವಣಿಗೆ ಮೂಲಕ ಪ್ರತಿಭಟಿಸಿದರು.

ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಕಾರ್ಯಕರ್ಶಿ ಚಿಕ್ಕಬಳ್ಳಿ ಬಾಲು ವಾತನಾಡಿ, ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿರಂತರ ಹಲ್ಲೆ ನಡೆಯುತ್ತಿದೆ. ಹಿಂದೂ ದೇವಸ್ಥಾನಗಳು ಧ್ವಂಸವಾಗುತ್ತಿವೆ. ಚಿಕ್ಕ ಮಕ್ಕಳು, ಮಹಿಳೆುಂರ ಮೇಲೆ ಅತ್ಯಾಚಾರ ಎಗ್ಗಿಲ್ಲದೆ ನಡೆುುಂತ್ತಿದೆ. ಹೀಗಿದ್ದರೂ ಅಲ್ಲಿನ ಸರ್ಕಾರ ಹಿಂದೂಗಳ ನೆರವಿಗೆ ಧಾವಿಸಿಲ್ಲ. ಇವೆಲ್ಲವೂ ವ್ಯಾಪಕವಾಗಿ ಹಿಂದೂ ವಿರೋಧಿ ನೀತಿುಂ ಸಂಚಿನಿಂದ ಕೂಡಿದ್ದಾಗಿವೆ ಎಂದು ಆರೋಪಿಸಿದರು.

ಯುವ ಬ್ರಿಗೇಡ್ ಸಂಚಾಲಕ ಮಹೇಶ ಸೇರಿದಂತೆ ಅನೇಕ ಹಿಂದೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

× Chat with us