ಬೆಂಗಳೂರು: ನಗರದ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ತಡರಾತ್ರಿ ಚನ್ನಪಟ್ಟಣ, ಮಾಗಡಿ, ಆನೇಕಲ್ ಮತ್ತು ಕುಣಿಗಲ್ ಭಾಗಗಳ ಸುಮಾರು 300ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು, ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸೇರ್ಪಡೆಗೊಂಡರು.
ಜೆಡಿಎಸ್ ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡ ಬಳಿಕ ಮಾತನಾಡಿದ ಡಿಕೆ, ಮೊನ್ನೆ ರಾತ್ರಿಯೂ ಸಹಾ ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಈ ಕಾಂಗ್ರೆಸ್ ಸೇರಿರುವವರೆಲ್ಲಾ ಎಚ್.ಡಿ ಕುಮಾರಸ್ವಾಮಿಯ ಕಟ್ಟಾ ಅಭಿಮಾನಿಗಳು ಮತ್ತು ಬೆಂಬಲಿಗರು ಎಂದು ಡಿಕೆ ಹೇಳಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರವೊಂದರಲ್ಲೇ ಇದುವರೆಗೆ ಜೆಡಿಎಸ್‌ನಿಂದ ಸುಮಾರು 5000ಕ್ಕೂ ಅಧಿಕ ಮಂದಿ ಮುಖಂಡರು ಕಾಂಗ್ರೆಸ್ ಸೇರಿದ್ದಾರೆ. ಹೊಸದಾಗಿ ಸೇರಿರುವವರ ಭವಿಷ್ಯ ಮುಖ್ಯ ಮತ್ತು ಅದರ ಬಗ್ಗೆಯೂ ತಮ್ಮ ಪಕ್ಷದಲ್ಲಿ ಯೋಚಿಸಬೇಕಾಗುತ್ತದೆ ಎಂದು ಡಿಕೆ ತಿಳಿಸಿದರು.
ಬೆಂಗಳೂರು: ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಗ್ರಾಮೀಣ ಮಹಿಳೆಯರಿಂದ ತಯಾರಿಸಲ್ಪಟ್ಟ ಸುಮಾರು 8,000 ಡಚ್…
ಹಾಸನ: ವಿಶ್ವವಿಖ್ಯಾತ ಶ್ರೀ ಚನ್ನಕೇಶವಸ್ವಾಮಿ ಮೂಲ ವಿಗ್ರಹವನ್ನು ಸೂರ್ಯ ರಶ್ಮಿ 2021ರಲ್ಲಿ ಸ್ಪರ್ಶಿಸಿತ್ತು. ಅದಾದ ಬಳಿಕ ಇಂದು ಅಂದರೆ 4…
ಬೆಂಗಳೂರು: ಸಚಿವ ಜಮೀರ್ ಅಹಮ್ಮದ್ ಖಾನ್ ಜೆಡಿಎಸ್ ಸೇರುತ್ತಾರೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್…
ಬೆಂಗಳೂರು : ಚಿನ್ನ ಕಳ್ಳಸಾಗಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರನ್ಯಾ ರಾವ್‌ಗೆ ಜಾಮೀನು ಲಭಿಸಿದೆ. ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯ…
ನವದೆಹಲಿ: ಒಂದು ವರ್ಷದ ಹಿಂದೆ ಜಮ್ಮು-ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆ ಪ್ರದೇಶದಲ್ಲಿ ನಡೆದ ಉಗ್ರರ ಕೃತ್ಯಕ್ಕೆ ಒಂದು ವರ್ಷ ಪೂರ್ಣಗೊಂಡಿದೆ.…
ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನದ ಮನವಿ ಮೇರೆಗೆ ಅನಿರ್ದಿಷ್ಟಾವಧಿಗೆ ಕದನ ವಿರಾಮ ವಿಸ್ತರಣೆ ಮಾಡಿರುವುದಾಗಿ…