ರಾಜ್ಯ

ನಾಯಕತ್ವ ಬದಲಾವಣೆ ಪ್ರಸಾಪವೇ ಇಲ್ಲ : ಪ್ರಶ್ನೆಗಳೇಕೆ? ; ಮಾಧ್ಯಮಗಳ ವಿರುದ್ಧ ಸಚಿವ ಎಚ್‌ಸಿಎಂ ಅಸಮಾಧಾನ

ಬೆಂಗಳೂರು : ನಾಯಕತ್ವ ಬದಲಾವಣೆಯ ಕುರಿತಾಗಿ ಕಾಂಗ್ರೆಸ್ ಪಕ್ಷದ ಒಳಗೆ ಯಾವುದೇ ಪ್ರಶ್ನೆಗಳು ಏಳದಿದ್ದರೂ ನಮ್ಮ ಮಾಧ್ಯಮ ಮಿತ್ರರು ಪ್ರತಿದಿನ ಅದೇ ಪ್ರಶ್ನೆಗಳನ್ನು ಸರ್ಕಾರದ ಮುಖ್ಯಸ್ಥರು, ಸಚಿವರು ಹಾಗೂ ನಾಯಕರ ಬಳಿ ಕೇಳುತ್ತಿರುವುದು ಮುಜುಗರ ತರುವಂತಿದೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ತಮ್ಮ ಸಾಮಾಜಿಕ ಜಾಲ ತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಸರ್ಕಾರವೊಂದು ತಾನು ಜನರಿಗೆ ನೀಡಿದ ಪ್ರಣಾಳಿಕೆಗಳನ್ನು ಸಮರ್ಥವಾಗಿ ಜಾರಿಗೊಳಿಸಿ, ಜನ ಸಾಮಾನ್ಯರ ಬದುಕು ಹಸನಾಗುವ ನಿಟ್ಟಿನಲ್ಲಿ ಆಡಳಿತವನ್ನು ನೀಡುತ್ತಿರುವಾಗ, ಆಡಳಿತಾತ್ಮಕ ಸ್ಥಿರತೆ, ಜನರ ನಂಬಿಕೆಗೆ ವಿರುದ್ಧವಾಗಿ, ಜನರನ್ನು ಗೊಂದಲಗೊಳಿಸುವ ಹಾಗೆ ಪ್ರತಿದಿನ ಕೇಳುತ್ತಿರುವ ಪ್ರಶ್ನೆಗಳು ಆಡಳಿತಾತ್ಮಕ ದೃಷ್ಟಿಯಿಂದ ಅಷ್ಟೊಂದು ಸಮಂಜಸವಾಗಿ ಕಾಣುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ:-ಕೋಲ್ಕತ್ತ | ಭೂಕಂಪನ : ತೀವ್ರತೆಗೆ ಪೂರ್ವ ಭಾರತದ ಹಲವೆಡೆ ಕಂಪಿಸಿದ ಭೂಮಿ

ಒಂದು ರಾಜಕೀಯ ಪಕ್ಷವು ಕಾಲದ ಅಗತ್ಯಕ್ಕೆ ತಕ್ಕಂತೆ, ಜನರ ಅಭಿಪ್ರಾಯವನ್ನು ಆಧರಿಸಿ, ನಾಯಕರ ಸಾಮರ್ಥ್ಯವನ್ನು ಅರ್ಥೈಸಿ ಪಕ್ಷದ ವ್ಯಾಪ್ತಿಯ ಒಳಗೆ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಇದು ಯಾವುದೇ ಬಹಿರಂಗ ಒತ್ತಡದಿಂದ ಅಥವಾ ವ್ಯಕ್ತಿಗತ ಆಸೆಗಳಿಂದ ಜರುಗುವಂತಹ ಪ್ರಕ್ರಿಯೆ ಅಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

ನಾಯಕತ್ವ ಬದಲಾವಣೆಯ ನಿರ್ಧಾರ ಏನಾದರೂ ಇದ್ದರೆ ಅದನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮಾಧ್ಯಮದ ಮುಂದೆಯೇ ಬಂದು ತಿಳಿಸುತ್ತದೆ. ಹೀಗಾಗಿ ಹೋದಲ್ಲಿ ಬಂದಲ್ಲಿ ರಚ್ಚೆ ಹಿಡಿದವರಂತೆ ನಾಯಕತ್ವ ಬದಲಾವಣೆಯ ಪ್ರಶ್ನೆಯನ್ನು ಕೇಳುವ ಬದಲು, ಜನರ ನಂಬಿಕೆಯನ್ನು ಹೆಚ್ಚಿಸುವಂತಹ ಮತ್ತು ಜನರ ಬದುಕಿಗೆ ಪ್ರಯೋಜನ ಆಗುವಂತಹ ಮತ್ತು ಆಡಳಿತಾತ್ಮಕವಾಗಿ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ಮಾಡಬೇಕು ಎಂದು ಮಾಧ್ಯಮ ಮಿತ್ರರನ್ನು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.

ಆಂದೋಲನ ಡೆಸ್ಕ್

Recent Posts

ದೇಶದ ಹಲವು ರಾಜ್ಯಗಳಲ್ಲಿ ಒಂದು ವಾರ ಹೆಚ್ಚಲಿದೆ ತಾಪಮಾನ

ನವದೆಹಲಿ: ದೇಶಾದ್ಯಂತ ರಣ ಬಿಸಿಲ ಝಳ ಹೆಚ್ಚುತ್ತಿದ್ದು, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಒಂದು ವಾರಗಳ ಕಾಲ ತಾಪಮಾನ ಹೆಚ್ಚಾಗಲಿದೆ…

9 mins ago

ಗುರುವಾರ ಅಮೇರಿಕಾ-ಇರಾನ್‌ ಮಧ್ಯೆ 2ನೇ ಹಂತದ ಮಾತುಕತೆ

ಇಸ್ಲಾಮಾಬಾದ್:‌ ಮಧ್ಯಪ್ರಾಚ್ಯ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಇರಾನ್‌ ಮತ್ತು ಅಮೇರಿಕಾ ನಡುವೆ 2ನೇ ಸುತ್ತಿನ ಮಾತುಕತೆಗೆ…

36 mins ago

ಇಂದು ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಜಯಂತಿ: ಗಣ್ಯಾತಿಗಣ್ಯರಿಂದ ಶುಭಾಶಯ

ನವದೆಹಲಿ: ಇಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.‌ಅಂಬೇಡ್ಕರ್‌ ಅವರ 135ನೇ ಜನ್ಮ ಜಯಂತಿ. ಇದರ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ…

1 hour ago

ರೈತಾಪಿ ವರ್ಗಕ್ಕೆ ಬಿಗ್‌ ಶಾಕ್‌ ಕೊಟ್ಟ ಹವಾಮಾನ ಇಲಾಖೆ: ಏನದು ಗೊತ್ತಾ.?

ನವದೆಹಲಿ: ಈ ವರ್ಷ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಮುಂಗಾರು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.…

2 hours ago

ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ನಜೀರ್‌ ಅಹಮ್ಮದ್‌ ರಾಜೀನಾಮೆ

ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಎಂಎಲ್‌ಸಿ ನಜೀರ್‌ ಅಹಮ್ಮದ್‌ ಅವರು ರಾಜೀನಾಮೆ ನೀಡಿದ್ದಾರೆ. ನಜೀರ್‌ ಅಹಮ್ಮದ್‌ ಅವರು ಸಿಎಂ…

3 hours ago

ಓದುಗರ ಪತ್ರ: ನದಿ ಮಾಲಿನ್ಯ ತಡೆಗಟ್ಟಿ

ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಮೂಲಕ ಹರಿಯುವ ಲಕ್ಷ್ಮಣತೀರ್ಥ ನದಿ ಕಾವೇರಿ ನದಿಯ ಉಪನದಿಯಾಗಿದ್ದು, ಹುಣಸೂರು ಭಾಗದ ಬಹಳ ಮುಖ್ಯವಾದ…

6 hours ago