ಎಲ್ಲಾ ಯೋಜನೆಗಳನ್ನ ಪೂರ್ಣಗೊಳಿಸುವ ಸಂಕಲ್ಪ
ಯಾದಗಿರಿ: ಮುಂದಿನ ದಶಕವನ್ನು ನೀರಾವರಿ ದಶಕ ಎಂದು ಘೋಷಣೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಹೆಚ್ಚು ಸಂಪನ್ಮೂಲ, ಹಣ ಒದಗಿಸಿ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸುವ ಸಂಕಲ್ಪ ತೊಟ್ಟರು.
ಯಾದಗಿರಿ ಹುಣಸಗಿ ತಾಲ್ಲೂಕಿನ ಕೊಡೆಕಲ್ ಗ್ರಾಮದಲ್ಲಿ ವಿವಿಧ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ ಕಾರ್ಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ಹನಿ ನೀರನ್ನೂ ಸಮಗ್ರವಾಗಿ ಬಳಸಬೇಕು ಎಂಬ ಮೋದಿ ಅವರ ಆಶಯವನ್ನು ಸಾಕಾರಗೊಳಿಸಲು ನಾವು ಶ್ರಮಿಸುತ್ತಿದ್ದೇವೆ ಎಂದರು.
ಬಿ.ಎಸ್,ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆ ಆರಂಭವಾಗಿತ್ತು. ಆದರೆ ನಂತರ ಯುಪಿಎ ಸರ್ಕಾರದಿಂದ ನಮಗೆ ಬರಬೇಕಿದ್ದ ಅನುದಾನ ವಿಳಂಬವಾದ್ದರಿಂದ ಈ ಯೋಜನೆ ತಡವಾಯಿತು. 2014ರಲ್ಲಿ ಮೋದಿ ಪ್ರಧಾನಿಯಾದ ನಂತರ 2015ರಲ್ಲಿ ತ್ವರಿತಗತಿಯ ಯೋಜನೆಯ ಕಾಮಗಾರಿ ಆರಂಭವಾಯಿತು ಎಂದು ಬೊಮ್ಮಾಯಿ ತಿಳಸಿದರು.
ರಾಜ್ಯಕ್ಕೆ 1.011 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ರಾಜ್ಯಕ್ಕೆ ಹೆಚ್ಚು ಅನುದಾನ ಕೊಟ್ಟ ಕೀರ್ತಿ ಪ್ರಧಾನಿ ಮೋದಿಯದ್ದು. ಅಂದಿನ ಸರ್ಕಾರ ಯೋಜನೆಗೆ ಟೆಂಡರ್ ಮಾಡಿದರು ಆದರೆ ಹಣ ಕೊಟ್ಟಿದ್ದು ಮೋದಿ. ಇಂಡಿ ಜೇವರ್ಗಿ ಕೊನೆ ಭಾಗಕ್ಕೂ ನೀರು ಹರಿಸಲು ಯೋಜನೆ ಜಾರಿಹೊಳಿಸಲಾಗುತ್ತಿದೆ ಅಚ್ಚುಕಟ್ಟು ಪ್ರದೇಶದ ಎಲ್ಲಾ ಜಮೀನಿಗೆ ನೀರು ತಲುಪಿಸುವ ಯೋಜನೆಯಾಗಿದೆ. ಇಡೀ ದೇಶದಲ್ಲೇ ಮೊದಲ ಬಾರಿಗೆ ಸ್ಕಾಡಾ ಯೋಜನೆ ಜಾರಿಯಾಗಿದೆ ಎಂದು ಬೊಮ್ಮಾಯಿ ತಿಳಿಸಿದರು