ಬೆಂಗಳೂರು : ಪಂಚೆ ಹಾಕಿದ್ದ ಕಾರಣ ಮಾಲ್ ಒಳಗೆ ಬಿಡದೇ ಅವಮಾನ ಮಾಡಿದ್ದ ರೈತ ಫಕೀರಪ್ಪನಿಗೆ ಜಿಟಿ ಮಾಲ್‌ನ ಸಿಬ್ಬಂದಿ ಮಾಲ್ ಒಳಗೆ ಕರೆದು ಸನ್ಮಾನ ಮಾಡಿದ್ದಾರೆ.
ನಿನ್ನೆ ನಗರದ ಪ್ರತಿಷ್ಠಿತ ಮಾಲ್‌ಗಳಲ್ಲಿ ಒಂದಾದ ಜಿಟಿ ಮಾಲ್ ನೋಡಲು ಬಂದಿದ್ದ ಉತ್ತರಕರ್ನಾಟಕದ ರೈತ ಫಕೀರಪ್ಪ ಪಂಚೆ ಧರಿಸಿದ್ದ ಕಾರಣ ಆಥ ಮತ್ತು ಆಥನ ಕುಟುಂಬವನ್ನು ಒಳಗೆ ಬಿಡದೆ ಅವಮಾನ ಮಾಡಲಾಗಿತ್ತು.
ಈ ವಿಚಾರ ತಿಳಿದು ಅನೇಕ ಸಂಘಟನೆಗಳು ಜಿಟಿ ಮಾಲ್ ರೈತನಿಗೆ ಅವಮಾನ ಮಾಡಿದ್ದಾರೆ ಎಂಬ ಕಾರಣದಿಂದ ಪ್ರತಿಭಟನೆ ನಡೆಸಿದ್ದರು.
ಆದರೆ ಇಂದು ತಮ್ಮ ತಪ್ಪನ್ನು ಅರಿತ ಮಾಲ್ ಸಿಬ್ಬಂಧಿ, ರೈತ ಫಕೀರಪ್ಪನನ್ನು ಮಾಲ್‌ಗೆ ಆಹ್ವಾನಿಸಿ ಸನ್ಮಾನ ಮಾಡುವ ಮೂಲಕ ಆಥನಲ್ಲಿ ಕ್ಷಮೆಯಾಚಿಸಿದ್ದಾರೆ.
ನಿನ್ನೆ ನಡೆದ ಘಟನೆ ಬಗ್ಗೆ ಫಕೀರಪ್ಪನ ಪತ್ನಿ ಮಾತನಾಡಿ, ನಿನ್ನೆ ನಮ್ಮನ್ನು ಅರ್ಧಗಂಟೆಯಿಂದ ಕಾಯಿಸಿದರು. ಮಾಲ್ ಒಳಗಡೆ ಬಿಡಲಿಲ್ಲ. ನನ್ನ ಗಂಡ ಪಂಚೆ ಹಾಕಿದ ಕಾರಣ ಮಾಲ್ ಒಳಗಡೆ ಬಿಡಲಿಲ್ಲ. ರಾಜ್ಯದ ಮುಖ್ಯಮಂತ್ರಿ ಕೂಡ ಪಂಚೆ ಹಾಕುತ್ತಾರೆ. ಅವರನ್ನು ಒಳಗಡೆ ಬಿಡುತ್ತಾರೆ. ಈ ಬೇದಭಾವ ಏಕೆ. ಈಗ ಅದೇ ಮಾಲ್‌ನವರು ನನ್ನ ಗಂಡನಿಗೆ ಸನ್ಮಾನ ಮಾಡಿದ್ದಾರೆ. ಎಲ್ಲಾ ದೇವರ ಕೃಪೆ ಎಂದು ರೈತ ಫಕೀರಪ್ಪನ ಪತ್ನಿ ಗಂಗ್ಮಾಳವ್ವ ತಿಳಿಸಿದರು.
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…
ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…
ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…
ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…
ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…